ಜು.19ರಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ರಾಜಮುಡಿ ಉತ್ಸವ

Social Share

ಮೇಲುಕೋಟೆ, ಜು.11- ಚೆಲುವನಾರಾಯಣಸ್ವಾಮಿಯ ಶ್ರೀಕೃಷ್ಣ ರಾಜಮುಡಿ ಉತ್ಸವ ಜುಲೈ 19ರಂದು ನಡೆಯಲಿದ್ದು, ಈ ಸಂಬಂಧದ ಧಾರ್ಮಿಕ ಕೈಂಕರ್ಯಗಳು ಜು.14ರ ಅಂಕುರಾರ್ಪಣೆಯೊಂದಿಗೆ ಆರಂಭವಾಗಲಿದೆ. ಮೈಸೂರು ದೊರೆ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಆಷಾಢಮಾಸದಲ್ಲಿ ಬ್ರಹ್ಮೋತ್ಸವ ಆರಂಭಿಸಿ ಉತ್ಸವದ ನಾಲ್ಕನೇ ದಿನವಾದ ಗರುಡೋತ್ಸವಕ್ಕೆ ವಜ್ರ ಖಚಿತ ಕೃಷ್ಣರಾಜಮುಡಿ ಕಿರೀಟ ಮತ್ತು ರಾಜಲಾಂಛನ ಗಂಡುಬೇರುಂಡ ಪದಕವನ್ನು ಕೊಡುಗೆಯಾಗಿ ನೀಡಿದ್ದರು.

ಬ್ರಹ್ಮೋತ್ಸವದ ನೆನಪಿಗಾಗಿ ಕಲ್ಯಾಣಿ ಸಮುಚ್ಚಯದಲ್ಲಿ ಭುವನೇಶ್ವರಿ ಮಂಟಪವನ್ನೂ ನಿರ್ಮಿಸಿದ್ದಾರೆ. ಕೃಷ್ಣರಾಜಮುಡಿ ಉತ್ಸವದಂದು ರಾತ್ರಿ 7 ಗಂಟೆಗೆ ಶ್ರೀದೇವಿ ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಧರಿಸಿ ದಿವ್ಯಪ್ರಬಂಧ ಪಾರಾಯಣ ಮತ್ತು ಮಂಗಳವಾದ್ಯದೊಂದಿಗೆ ಉತ್ಸವ ನೆರವೇರಿಸಲಾಗುತ್ತದೆ.

ವೈರಮುಡಿ ಜಾತ್ರಾಮಹೋತ್ಸವ ಕಲ್ಯಾಣೋತ್ಸವದಿಂದ ಆರಂಭವಾಗಿ ಮಹಾಭಿಷೇಕದೊಂದಿಗೆ ಮುಕ್ತಾಯವಾದರೆ, ಆಷಾಢಮಾಸದ ಕೃಷ್ಣರಾಜಮುಡಿ ಜಾತ್ರಾಮಹೋತ್ಸವ ಮಹಾಭಿಷೇಕದೊಂದಿಗೆ ಆರಂಭವಾಗಿ ಜುಲೈ 25ರಂದು ನಡೆಯುವ ಪುಷ್ಪಯಾಗದೊಂದಿಗೆ ಸಂಪನ್ನವಾಗಲಿದೆ. ಬೆರಳೆಣಿಕೆಯ ಭಕ್ತರಷ್ಟೆ ಭಾಗವಹಿಸುವ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಮಹಾರಾಜರ ಹೆಸರಲ್ಲಿ 10 ದಿನಗಳ ಕಾಲ ನಡೆಯುವ ಕರ್ನಾಟಕದ ಏಕೈಕ ಜಾತ್ರಾ ಮಹೋತ್ಸವವಾಗಿದೆ.

#ಕಲ್ಯಾಣೋತ್ಸವ:

ಜುಲೈ 15ರ ಆಷಾಢ ದ್ವಿತೀಯೆ ದಿನದಂದು ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ವರ್ಧಂತಿಯ ನಿಮಿತ್ತ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ, ಸಂಜೆ ಅಮ್ಮನವರ ಸನ್ನಿಯ ಸಭಾಂಗಣದಲ್ಲಿ ಉತ್ಸವ ಮೂರ್ತಿ, ಚೆಲುವನಾರಾಯಣಸ್ವಾಮಿ ಮತ್ತು ಕಲ್ಯಾಣನಾಯಕಿ ಅಮ್ಮನವರಿಗೆ ಕಲ್ಯಾಣೋತ್ಸವ ನೆರವೇರಲಿದೆ. ಇದೇ ದಿನ ರಕ್ಷಾಬಂಧನ ಮತ್ತು ಧ್ವಜಪ್ರತಿಷ್ಠೆ ನಡೆಯಲಿದೆ.

# ಕಾರ್ಯಕ್ರಮಗಳು:

ಬ್ರಹ್ಮೋತ್ಸವದಲ್ಲಿ ಜುಲೈರ 16 ಬೆಳಿಗ್ಗೆ ಧ್ವಜಾರೋಹಣ, 18ರಂದು ಸಂಜೆ ನಾಗವಲ್ಲಿ ಮಹೋತ್ಸವ ನರಂದಾಳಿಕಾರೋಹಣ, 21ರಂದು ಸಂಜೆ ಗಜೇಂದ್ರಮೋಕ್ಷ 22ರಂದು ಬೆಳಿಗ್ಗೆ ರಥೋತ್ಸವ, 24ರಂದು ಅವಭೃತ, ಪಟ್ಟಾಭಿಷೇಕ, ಪಡಿಮಾಲೆ ನೆರವೇರಲಿದೆ. ಈ ಜಾತ್ರಾಮಹೋತ್ಸವದಲ್ಲಿ ತೆಪೆÇ್ಪೀತ್ಸವ, ರಥೋತ್ಸವಗಳು ಸಾಂಕೇತಿಕ ಉತ್ಸವವಾಗಿ ಆಚರಿಸಲ್ಪಟ್ಟರೆ, ಜಾತ್ರೆಯ ಎಲ್ಲಾ ಉತ್ಸವಗಳು ಆಡಂಬರವಿಲ್ಲದೆ ಸರಳವಾಗಿ ನಡೆಯುತ್ತವೆ.

Articles You Might Like

Share This Article