ನವದೆಹಲಿ,ಡಿ. 6- ಚುನಾವಣೆ ನಡೆಯಲಿರುವ ಛತ್ತಿಸ್ಗಡ ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಕೇಂದ್ರದ ಮಾಜಿ ಸಚಿವ ಕುಮಾರಿ ಸೆಲ್ಜಾ ಅವರನ್ನು ನೇಮಿಸಲಾಗಿದೆ. ಛತ್ತಿಸ್ಗಡದ ಉಸ್ತುವಾರಿ ನಿರ್ವಹಣೆ ಮಾಡುತ್ತಿದ್ದ ಪಂಜಾಬ್ನ ಮಾಜಿ ಸಚಿವ ಸುಕ್ವಿಂದರ್ ಸಿಂಗ್ ರಾಂಧವ ಮತ್ತು ರಾಜ್ಯಸಭಾ ಸದಸ್ಯರ ಶಕ್ತಿಸಿನ್ಹ ಘೋಲಿ ಅವರಿಗೆ ಕ್ರಮವಾಗಿ ರಾಜಸ್ಥಾನ ಮತ್ತು ಹರಿಯಾಣದ ಜವಾಬ್ದಾರಿಗಳನ್ನು ವಹಿಸಲಾಗಿದೆ.
ಸೆಲ್ಜಾ ಅವರನ್ನು ರಾಂಧವ ಅವರನ್ನ ಬದಲಾವಣೆ ಮಾಡಲಾಗಿದೆ. ರಾಜಸ್ಥಾನದ ಉಸ್ತುವಾರಿಯನ್ನು ಅಜಯ್ಮಖೇನ್ ಹರಿಯಾಣದ ಜವಾಬ್ದಾರಿಯನ್ನು ವಿವೇಕ್ಬನ್ಸಾಲ್ ಅವರು ನಿರ್ವಹಣೆ ಮಾಡುತ್ತಿದ್ದರು.
ಮುಂದಿನ ವರ್ಷ ಛತ್ತಿಸ್ಗಡ ಮತ್ತು ರಾಜಸ್ಥಾನ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಈ ಎರಡರಲ್ಲೂ ಕಾಂಗ್ರೆಸ್ ಆಡಳಿತದಲ್ಲಿದ್ದು, ಮರಳಿ ಅಧಿಕಾರ ಹಿಡಿಯುವ ತಯಾರಿಯಲ್ಲಿವೆ.
ಚೀನಿ ಹ್ಯಾಕರ್ ದಾಳಿ : ಅಮ್ನೆಸ್ಟಿ ಇಂಟರ್ ನ್ಯಾಶನಲ್ ಆಕ್ರೋಶ
ಪ್ರಮುಖವಾಗಿ ಈ ರಾಜ್ಯಗಳಲ್ಲಿ ಗುಂಪುಗಾರಿಕೆ ಮತ್ತು ನಾಯಕತ್ವದ ಸಂಘರ್ಷಗಳು ತೀವ್ರವಾಗಿವೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿಯನ್ನು ಬದಲಾವಣೆ ಮಾಡಿ ಪ್ರಯೋಗಕ್ಕೆ ಪಕ್ಷ ಸಹಿ ಹಾಕಿದೆ.
ಕೇರಳ ಸಹಕಾರಿ ಬ್ಯಾಂಕ್ ಏಜೆಂಟ್ನ 30.70 ಕೋಟಿ ಆಸ್ತಿ ಜಪ್ತಿ
ನಿನ್ನೆ ಪಕ್ಷದ ಸಂಚಾಲನ ಸಮಿತಿ ಸಭೆಯಲ್ಲಿ ಚರ್ಚಿಸಿದ ಅನುಸಾರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
#Rajasthan, #Chhattisgarh, #Congress, #Incharge, #Change,