ಇನ್ಸ್‌ಪೆಕ್ಟರ್ ಹತ್ಯೆ ಮಾಡಿದ್ದ 30 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Social Share

ಜೈಪುರ,ನ.19-: ಇನ್ಸ್‍ಪೆಕ್ಟರ್ ಫೂಲ್ ಮೊಹಮ್ಮದ್ ಹತ್ಯೆ ಪ್ರಕರಣದಲ್ಲಿ 30 ಜನರಿಗೆ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲಾಯ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಸಿಂಗ್ ಸೇರಿದಂತೆ 30 ಜನರನ್ನು ದೋಷಿಗಳೆಂದು ಘೋಷಿಸಿ ಇತರ 49 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಮಹಮದ್ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ಸುಮಾರು 70 ಮಂದಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಲಯ 30 ಆರೋಪಿಗಳಿಗೆ ಶಿಕ್ಷೆ ಜೊತೆಗೆ ದಂಡ ವಿಧಿಸಿದೆ.

ಕಳೆದ 2011 ರಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಆಗಿದ್ದ ಫೂಲ್ ಮೊಹಮ್ಮದ್ ಅವರು ಸುರ್ವಾಲ್ ಗ್ರಾಮಕ್ಕೆ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲು ಹೋಗಿದ್ದರು. ಆದರೆ, ಆರೋಪಿ ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.

ಶದ್ದಾ ಕೊಲೆ ಮಾದರಿಯಲ್ಲೇ ಬಾಂಗ್ಲಾದಲ್ಲೂ ಪ್ರೇಯಸಿಯ ಭೀಕರ ಹತ್ಯೆ

ಇದರಿಂದ ಉದ್ರಿಕ್ತರಾದ ಸ್ಥಳೀಯರು ಪೊಲೀಸರ ವಿರುದ್ಧ ತಿರುಗಿಬಿದ್ದರು. ಮಾತ್ರವಲ್ಲ ಮನಬಂದಂತೆ ಥಳಿಸಲು ಮುಂದಾದಾಗ ಮಹಮದ್ ಜೀಪಿನಲ್ಲಿ ಪರಾರಿಯಾಗಲು ಯತ್ನಿಸಿದರು ಆಗ ಜನರ ಕಲ್ಲೆಸೆತದಿಂದ ಪ್ರಜ್ಞಾಹೀನರಾದಾಗ ರೊಚ್ಚಿಗೆದ್ದ ಜನ ಪೊಲೀಸ್ ಜೀಪಿಗೆ ಬೆಂಕಿ ಹಚ್ಚ ಸಜೀವ ದಹನ ಮಾಡಿದ್ದರು.

ಮತದಾರರ ಮಾಹಿತಿ ಕಳವು ಪ್ರಕರಣ : ಪಕ್ಷಗಳ ಕೆಸರೆರಚಾಟ ಮುಂದುವರಿಕೆ

ಈ ಪ್ರಕರಣವನ್ನು ರಾಜಸ್ತಾನ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಜತೆಗೆ ಮಹಮದ್‍ಗೆ ಹುತಾತ್ಮ ಸ್ಥಾನಮಾನ ನೀಡಿ ಗೌರವಿಸಿತ್ತು.

Rajasthan, court, 30 people, life, Phool Mohammad, murder, case,

Articles You Might Like

Share This Article