ಜೈಪುರ,ಫೆ.4-ರಾಜಸ್ಥಾನದಲ್ಲೂ ಕಾಂಗ್ರೆಸ್ ಮುಖಂಡರ ನಡುವಿನ ಭಿನ್ನಮತ ಸ್ಪೋಟಗೊಂಡಿದೆ. ರಾಜಸ್ಥಾನದ ಪಂಚಾಯತ್‍ರಾಜ್ ಸಚಿವ ರಾಜೇಂದ್ರ ಸಿಂಗ್ ಗೂಢಾ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಮ್ಮನ್ನು ಸಿಲುಕಿಸಲು ಗೆಹ್ಲೋಟ್ ತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿರುವ ಗೂಢಾ ಅವರು ಈ ಕುರಿತಂತೆ ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುವುದಾಗಿ ಎಚ್ಚರಿಸಿದ್ದಾರೆ.
ಸಿಕರ್ ಜಿಲ್ಲೆಯ ಕಕ್ರಾನಾದ ವಾರ್ಡ್ ಪಂಚಾಯತ್ ಸದಸ್ಯ ದುರ್ಗಾ ಸಿಂಗ್ ಅವರನ್ನು ಅಪಹರಿಸಿ ಅವರಿಂದ ಖಾಲಿ ಬ್ಲಾಂಕ್ ಚೆಕ್ ತೆಗೆದುಕೊಂಡ ಆರೋಪದಲ್ಲಿ ರಾಜಸ್ಥಾನದ ಸೈನಿಕ ಕಲ್ಯಾಣ ಮತ್ತು ಪಂಚಾಯತ್ ರಾಜ್ಯ ಸಚಿವ ಮತ್ತು ಇತರರ ವಿರುದ್ಧ ಎಫïಐಆರ್ ದಾಖಲಿಸಲಾಗಿದೆ. ಈ ಬೆಳವಣಿಗೆ ನಂತರ ಗೂಢಾ ಅವರು ಗೆಹ್ಲೋಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
3 ದಿನ ಸರಕು ಸಾಗಣೆ ವಾಹನಗಳ ಬೆಂಗಳೂರು ಪ್ರವೇಶ ನಿಷೇಧ
ಉದ್ದೇಶಪೂರ್ವಕವಾಗಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಗೆಹ್ಲೋಟ್ ಯತ್ನಿಸುತ್ತಿದ್ದಾರೆ. ಅವರು ಏಕೆ ಈ ರೀತಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿಲ್ಲ. ಅವರನ್ನೇ ಭೇಟಿಯಾಗಿ ಕಾರಣ ಏನೆಂದು ತಿಳಿದುಕೊಳ್ಳುತ್ತೇನೆ ಎಂದು ಗೂಢಾ ಅವರು ತಿಳಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಆಸ್ತಿ ದಾಖಲೆ ಸಲ್ಲಿಸಲು ಮಾ. 31 ಕೊನೆ ದಿನ
ಈ ಹಿಂದೆ ಬಹುಜನ ಸಮಾಜ ಪಕ್ಷದಿಂದ ಶಾಸಕರಾಗಿದ್ದ ಗೂಢಾ ಅವರು ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ನಂತರ ಅವರು ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಗೆಹ್ಲೋಟ್ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಅವರನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
Rajasthan, minister, booked , abduction, points, finger, CM,