ಪ್ರೇಮಿಗಳ ವಾರದಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ ರಾಜಸ್ತಾನ ಪೊಲೀಸರು

Social Share

ಜೈಪುರ,ಫೆ.12 – ಪ್ರೇಮಿಗಳ ವಾರದ ಸಂದರ್ಭದಲ್ಲಿ ಜನಪ್ರಿಯ ಬಾಲಿವುಡ್ ಹಾಡುಗಳು, ಸಂಭಾಷಣೆಗಳು ಮತ್ತು ಮಿಮ್ಸ್‍ಗಳ ಮೂಲಕ ರಾಜಸ್ತಾನ ಪೊಲೀಸರು ಆನ್‍ಲೈನ್ ವಂಚನೆ ಮತ್ತು ಸಾಮಾಜಿಕ ಜಾಲತಾಣಗಳ ನಕಲಿ ಖಾತೆಗಳ ಬಗ್ಗೆ ಯುವಕರಿಗೆ ಜಾಗೃತಿ ಮೂಡಿಸುವ ವಿನೂತನ ಪ್ರಯೋಗವನ್ನು ನಡೆಸಿದ್ದಾರೆ.

ಹಾಸ್ಯಾತ್ಮಕ ಮತ್ತು ಕುತೂಹಲಕಾರಿಯಾಗಿರುವ ಸಂದೇಶಗಳನ್ನು ರಾಜಸ್ತಾನ ಪೊಲೀಸ್ ಇಲಾಖೆ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸುಲಭವಾಗಿ ವಂಚಕರ ಸುಳಿಗೆ ಬಲಿಯಾಗುವ ಯುವಕರನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿದೆ.

ಹೆಂಡತಿ ಮೇಲಿನ ಕೋಪಕ್ಕೆ ಮಕ್ಕಳಿಬ್ಬರ ಕತ್ತು ಹಿಸುಕಿ ಕೊಂದ ಪಾಪಿ ತಂದೆ

ಪ್ರೇಮಿಗಳ ವಾರದ ಹಿನ್ನೆಲೆ ಫೆ.9 ರಂದು ನಡೆದ ಚಾಕೋಲೆಟ್ ದಿನದಂದು ಬಾಲಿವುಡ್‍ನ ಪ್ರಸಿದ್ಧ ಚಿತ್ರ 3 ಇಡಿಯಟ್ಸ್ ನ ದೃಶ್ಯಗಳನ್ನು ಬಳಸಿಕೊಂಡು ತಯಾರಿಸಲಾಗಿದ್ದ ಪೋಸ್ಟರ್‍ಗಳನ್ನು ಟ್ವೀಟರ್‍ನಲ್ಲಿ ಹಂಚಿಕೊಳ್ಳಲಾಗಿತ್ತು.

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ಕಣ್ತುಂಬಿಕೊಳ್ಳಲು ಕಾತುರ

ಹೀಗೆ ಆ ದಿನಕ್ಕೆ ಸಂಬಂಧಿಸಿದ ವಿಷಯಗಳೊಂದಿಗೆ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿರುವ ರಾಜಸ್ತಾನ ಪೊಲೀಸರ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Rajasthan, Police, warns, youth, against, cyber crimes,

Articles You Might Like

Share This Article