ರಾಜಸ್ತಾನ ರಾಜಕೀಯದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್.!

Social Share

ಜೈಪುರ,ಸೆ.26- ರಾಜಸ್ಥಾನದ ರಾಜಕೀಯ ಹೈಡ್ರಾಮ ಭಿನ್ನ ತಿರುವುಗಳನ್ನು ಪಡೆದಿದ್ದು, ಅಶೋಕ್ ಗೆಲ್ಹೋಟ್, ಎಐಸಿಸಿ ಅಧ್ಯಕ್ಷ ಸ್ಥಾನದ ಸರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆಗಳು ದಟ್ಟವಾಗಿವೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಲ್ಹೋಟ್ ನಾಮಪತ್ರ ಸಲ್ಲಿಸಲು ಹೈಕಮಾಂಡ್ ಸೂಚಿಸಿತ್ತು. ಪರ್ಯಾಯವಾಗಿ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಯನ್ನು ತೊರೆಯುವ ಅನಿವಾರ್ಯತೆ ಎದುರಾಗಿತ್ತು.

ಈ ಹಂತದಲ್ಲಿ ರಾಜಸ್ಥಾನದ 82 ಜನ ಶಾಸಕರು ನಿನ್ನೆ ವಿಧಾನಸಭಾಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಮುಂದಿನ ನಾಯಕತ್ವದ ಆಯ್ಕೆಗಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಖೇನ್ ಅವರನ್ನೊಳಗೊಂಡ ವೀಕ್ಷಕರ ತಂಡ ರಾಜಸ್ಥಾನಕ್ಕೆ ತೆರಳಿತ್ತು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಯವರ ಸೂಚನೆ ಮೇರೆಗೆ ವೀಕ್ಷಕರ ತಂಡ ರಾಜಸ್ಥಾನದ ಶಾಸಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕಿತ್ತು. ಆದರೆ ಶಾಸಕರು ವೀಕ್ಷಕರ ಎದುರು ಹಾಜರಾಗದೆ ರಾಜೀನಾಮೆ ನೀಡಿ ಸಭೆಗಳ ಮೇಲೆ ಸಭೆ ನಡೆಸಿದ್ದಾರೆ. ಇದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಶಿಸ್ತಿನ ಉಲ್ಲಂಘನೆ ಎಂದು ವ್ಯಾಖ್ಯಾನಿಸಿದೆ.

ವೀಕ್ಷಕರ ತಂಡ ಯಾವುದೇ ಸಭೆ ನಡೆಸದೆ ದೆಹಲಿಗೆ ಮರಳಿದ್ದು, ಹೈಕಮಾಂಡ್ಗೆ ವರದಿ ನೀಡಿದೆ. ವರದಿಯಲ್ಲಿ ಬಂಡಾಯ ಚಟುವಟಿಕೆಗೆ ಅಶೋಕ್ ಗೆಲ್ಹೋಟ್ ಅವರೆ ಪ್ರಾಯೋಜಕತ್ವ ವಹಿಸಿದ್ದಾರೆಂಬ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಾಜೀನಾಮೆ ನೀಡಿ, ಬಂಡಾಯವೆದ್ದು, ಬ್ಲಾಕ್ಮೇಲ್ ಮಾಡಲು ಮುಂದಾಗುತ್ತಿರುವ ಶಾಸಕರ ಬೇಡಿಕೆಗಳನ್ನು ಪರಿಗಣಿಸದಿರಲು ಹೈಕಮಾಂಡ್ ನಿರ್ಧರಿಸಿದೆ. ಸಾಲದೆಂಬಂತೆ ಬಂಡಾಯಗಾರರ ಗುಂಪಿನ ನಾಯಕತ್ವ ವಹಿಸಿರುವ ಮಹೇಶ್ ಜೋಷಿ ಮತ್ತು ಶಾಂತಿದಾರಿವಾಲ ಅವರಿಗೆ ಶೋಕಾಸ್ ನೋಟಿಸ್ ನೀಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಅಜಯ್ ಮಖೇನ್ ಅವರು ಸುದ್ದಿಗಾರ ರೊಂದಿಗೆ ಮಾತನಾಡಿ, ನಾವು ಪ್ರತಿಯೊಬ್ಬ ಶಾಸಕರ ಜೊತೆ ಸಭೆ ನಡೆಸಲು ಬಂದಿದ್ದೇವು. ಆದರೆ ಶಾಸಕರು ತಮ್ಮನ್ನು ಭೇಟಿಯಾಗಲು ಬಂದಿಲ್ಲ. ಈ ನಡವಳಿಕೆ ಸ್ವೀಕಾರ್ಹವಲ್ಲ ಎಂದು ಹೇಳಿದ್ದಾರೆ.

ಪರಿಸ್ಥಿತಿಯ ಗಂಭೀರತೆ ಅರಿತ ರಾಹುಲ್ ಗಾಂ ಅವರು, ಭಾರತ ಐಕ್ಯತಾ ಯಾತ್ರೆಯ ಹಾದಿ ಮಧ್ಯೆಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ದೆಹಲಿಗೆ ಕಳುಹಿಸಿದ್ದಾರೆ.
ಮೂಲಗಳ ಪ್ರಕಾರ ಭಿನ್ನಮತೀಯ ಶಾಸಕರು ಮೂರ್ನಾಲ್ಕು ಬೇಡಿಕೆಗಳನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ.

2020ರ ಜುಲೈನಲ್ಲಿ ಅಶೋಕ್ ಗೆಲ್ಹೋಟ್ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ ಸಚಿನ್ ಪೈಲೆಟ್ಗೆ ಮುಖ್ಯಮಂತ್ರಿ ಹುದ್ದೆ ನೀಡಬಾರದು. ಮುಂದಿನ ನಾಯಕನ ಆಯ್ಕೆ ವೇಳೆ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಪರಿಗಣಿಸಬೇಕು. ಅಶೋಕ್ ಗೆಲ್ಹೋಟ್ ಅವರ ಆಪ್ತನನ್ನೆ ಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆಗಳನ್ನು ಬಂಡಾಯ ನಾಯಕತ್ವದ ಬಣ ಮುಂದಿಟ್ಟಿದೆ ಎನ್ನಲಾಗಿದೆ.

ಸಚಿನ್ ಪೈಲೆಟ್ ಅವರ ಭಾವಚಿತ್ರದೊಂದಿಗೆ ಸತ್ಯಮೇವ ಜೊತೆ ಹೊಸ ಯುಗದ ತಯಾರಿ ಎಂಬ ಬ್ಯಾನರ್ಗಳು ಜೋಧ್ಪುರದ ಹಲವು ಭಾಗಗಳಲ್ಲಿ ಕಾಣಿಸಿಕೊಂಡು ಕುತೂಹಲ ಕೆರಳಿಸಿದೆ. ಸಚಿನ್ ಪೈಲೆಟ್ ಅವರು ತಾವು ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡುವುದಿಲ್ಲ. ಬದಲಿಗೆ ನಾಯಕರೇ ಸೂಕ್ತ ನಿರ್ಧಾರ ತೆಗೆದುಕೊಂಡು ಬರಲಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ

ಈ ನಡುವೆ ಕೇಂದ್ರ ಸರ್ಕಾರ ಅನುರಾಜ್ ಸಿಂಗ್ ಠಾಕೂರ್ ಪ್ರತಿಕ್ರಿಯಿಸಿದ್ದು, ಭಾರತ್ ಜೋಡೊ ಯಾತ್ರೆಯಲ್ಲಿ ಮನೋರಂಜನೆ ಕಡಿಮೆ ಇತ್ತು. ಹಾಗಾಗಿ ರಾಜಸ್ಥಾನದ ಕಾಂಗ್ರೆಸ್ನಲ್ಲಿ ಪ್ರದರ್ಶನ ಶುರುವಾಗಿದೆ ಕಾಂಗ್ರೆಸ್ನವರಿಗೆ ಜನರ ಸೇವೆ ಮುಖ್ಯವಲ್ಲ. ಅಕಾರ ಅನುಭವಿಸುವುದು ಮುಖ್ಯ ಎಂದು ಲೇವಡಿ ಮಾಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಶೋಕ್ ಗೆಲ್ಹೋಟ್ ಎಐಸಿಸಿ ಅಧ್ಯಕ್ಷ ಸ್ಥಾನದ ಸ್ರ್ಪಯಾಗುವುದು ಅನುಮಾನ ಮೂಡಿಸಿದೆ.
ಅಕ್ಟೋಬರ್ನಲ್ಲಿ ನಡೆಯುವ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಗೆಲ್ಹೋಟ್ ಪ್ರಮುಖ ರ್ಸಯಾಗಿದ್ದರು. ಆದರೆ ತವರು ರಾಜ್ಯದಲ್ಲಿ ಬಂಡಾಯ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿರುವ ಗೆಲ್ಹೋಟ್ ವರ್ತನೆ ಪಕ್ಷದ ಹೈಕಮಾಂಡ್ನ್ನು ಘಾಸಿಗೊಳಿಸಿದೆ ಎಂಬ ವರದಿಗಳಿವೆ.

ಹೀಗಾಗಿ ಗೆಲ್ಹೋಟ್ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಅನುಮಾನವಾಗಿದೆ. ಅವರನ್ನು ಬೆಂಬಲಿಸುವ ಸಾಧ್ಯತೆಗಳು ಕ್ಷೀಣವಾಗಿದೆ ಎನ್ನಲಾಗಿದೆ. ಗೆಲ್ಹೋಟ್ ಇತ್ತೀಚೆಗೆ ಕೇರಳಕ್ಕೆ ತೆರಳಿ ರಾಹುಲ್ ಗಾಂಯವರೊಂದಿಗೆ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದರು. ಆ ವೇಳೆ ಸಾಂಸ್ಥಿಕ ಚುನಾವಣೆಯಲ್ಲಿ ರ್ಸಸುವ ಚರ್ಚೆಗಳು ನಡೆದಿದ್ದವು

Articles You Might Like

Share This Article