ಜೈಪುರ,ಮಾ.12- ಅರ್ಚಕರ ಮೇಲಿನ ದೌರ್ಜನ್ಯಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಿ ಜಾಮೀನು ರಹಿತ ಅಪರಾಧವೆಂದು ಪರಿಗಣಿಸುವಂತೆ ಬ್ರಾಹ್ಮಣ ಸಮುದಾಯ ಆಗ್ರಹಿಸಿದೆ.
ರಾಜಸ್ಥಾನ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ನಡೆಯುವ ಚುನಾವಣೆಗೂ ಮುನ್ನ ಎಲ್ಲಾ ಪ್ರಮುಖ ಸಮುದಾಯಗಳು ತಮ್ಮ ಪ್ರಾಬಲ್ಯವನ್ನು ತೋರಿಸಲು ಮತ್ತು ರಾಜಕೀಯ ಪ್ರಾತಿನಿಧ್ಯ ಪಡೆಯಲು ಜಾತಿ ಆಧಾರಿತ ಸಾಮೂಹಿಕ ಸಭೆಗಳನ್ನು ನಡೆಸಲಾರಂಭಿಸಿವೆ.
ಈ ಮೊದಲು ಮಾರ್ಚ್ 5 ರಂದು ಜೈಪುರದಲ್ಲಿ ಜಾಟ್ ಸಮುದಾಯದ ಬೃಹತ್ ಸಭೆ ನಡೆದಿತ್ತು, ಅಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಜಾಟ್ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದ್ದವು. ಕಳೆದ ವರ್ಷದ ಡಿಸೆಂಬರ್‍ನಲ್ಲಿ ರಜಪೂತ ಸಮುದಾಯವು ಜೈಪುರದಲ್ಲಿ ಸಮಾವೇಶ ನಡೆದಿತ್ತು.
ಈಗ ಬ್ರಾಹ್ಮಣ ಸಮುದಾಯವು ಮಾರ್ಚ್ 19 ರಂದು ಜೈಪುರದಲ್ಲಿ ಮಹಾಪಂಚಾಯತ್ ಆಯೋಜಿಸಿದೆ. ಬ್ರಾಹ್ಮಣ ಸಮುದಾಯದ ಸಮಾವೇಶದಲ್ಲಿ ಪಕ್ಷಾತೀತವಾಗಿ ರಾಜಕೀಯ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ. ವಿಪ್ರ ಸೇನಾ ಮುಖ್ಯಸ್ಥರು ಮತ್ತು ಬ್ರಾಹ್ಮಣ ಮಹಾಪಂಚಾಯತ್‍ನ ಸಂಘಟಕರಾದ ಸುನೀಲ್ ತಿವಾರಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಜ್ಜುಗೊಂಡಿದ್ದಾರೆ. ಇದು ಸಮುದಾಯದ ಜನರು ಸೇರುವ ಸಾಮಾಜಿಕ ಕಾರ್ಯಕ್ರಮವಾಗಿದೆ. ಸಮಾವೇಶದಲ್ಲಿ ತನ್ನ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದಿದ್ದಾರೆ.
ಮೋದಿ ರೋಡ್ ಶೋ : ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಹೆಸರು ತೆರವು
ವಿಪ್ರ ಆಯೋಗದ ರಚನೆ, ಅರ್ಚಕರ ಮೇಲಿನ ಹಿಂಸಾಚಾರವನ್ನು ಎಸ್‍ಸಿ/ಎಸ್‍ಟಿ ಕಾಯ್ದೆ ವ್ಯಾಪ್ತಿಗೆ ಒಳಪಡಿಸಿ ಜಾಮೀನು ರಹಿತ ಪ್ರಕರಣವೆಂದು ಪರಿಗಣಿಸುವುದು, ಪರಶುರಾಮ ಜಯಂತಿಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸುವುದು, ಹಿಂದುಳಿದ ವರ್ಗಗಳಿಗೆ ನೀಡುತ್ತಿರುವಂತೆಯೇ ಇಡಬ್ಲ್ಯೂಎಸ್ ಮೀಸಲಾತಿಯನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕು ಮತ್ತು ಅದರಿಂದ ಪ್ರಸ್ತುತ ಕಂಡು ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಬ್ರಾಹ್ಮಣ ಸಮುದಾಯಕ್ಕೆ 40 ಸ್ಥಾನಗಳಲ್ಲಿ ಸ್ರ್ಪಧಿಸಲು ಟಿಕೆಟ್ ನೀಡಬೇಕು ಎಂದು ತಿವಾರಿ ಒತ್ತಾಯಿಸಿದ್ದಾರೆ. ರಾಜಸ್ಥಾನದಲ್ಲಿ ಪ್ರಮುಖವಾಗಿರುವ ಜಾಟ್ ಸಮುದಾಯ ಕೇಂದ್ರ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸುತ್ತಿದೆ.
ಜೊತೆಗೆ ಜಾತಿ ಜನಗಣತಿ ನಡೆಸಬೇಕು ಎಂದು ಒತ್ತಾಯಿಸುತ್ತಿದೆ. ರಾಜಸ್ಥಾನದ ಜನಸಂಖ್ಯೆಯಲ್ಲಿ ಜಾಟ್‍ಗಳು ಶೇಕಡಾ 21 ರಷ್ಟಿದ್ದು,.ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಕನಿಷ್ಠ 40 ಟಿಕೆಟ್‍ಗಳನ್ನು ನೀಡಬೇಕು ಎಂದು ರಾಜಸ್ಥಾನ ಜಾಟ್ ಮಹಾಸಭಾ ಅಧ್ಯಕ್ಷ ರಾಜಾರಾಮ್ ಮೀಲ್ ಹೇಳಿದ್ದರು.
ಕಾಂಗ್ರೆಸ್ ಶಾಸಕ ಮತ್ತು ಜಾಟ್ ನಾಯಕ ಹರೀಶ್ ಚೌಧರಿ ಅವರು ಜಾಟ್ ಸಮುದಾಯ ಎಷ್ಟು ಸೌಲಭ್ಯ ಪಡೆದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಜಾತಿ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಆಡಳಿತಾರೂಢ ಕಾಂಗ್ರೆಸ್ ತನ್ನ ಬೃಹತ್ ಸಮಾವೇಶಕ್ಕೆ ಮುಂಚಿತವಾಗಿ ಸಮುದಾಯದ ದೇವತೆ ವೀರ್ ತೇಜಾಜಿ ಮಂಡಳಿಯನ್ನು ರಚಿಸುವುದಾಗಿ ಘೋಷಿಸಿತು.
ಇದಕ್ಕೂ ಮೊದಲು ಆಡಳಿತಾರೂಢ ಕಾಂಗ್ರೆಸ್ ಹೊಸದಾಗಿ ರಾಜಸ್ಥಾನ ಚರ್ಮದ ಕರಕುಶಲ ಅಭಿವೃದ್ಧಿ ಮಂಡಳಿ, ರಾಜಸ್ಥಾನ ರಾಜ್ಯ ಮಹಾತ್ಮ ಜ್ಯೋತಿಬಾ ಫುಲೆ ಮಂಡಳಿ (ಮಾಲಿ ಸಮುದಾಯ), ರಾಜಸ್ಥಾನ ಮತ್ತು ರಾಜ್ಯ ರಜಾಕ್ (ಧೋಬಿ) ಕಲ್ಯಾಣ ಮಂಡಳಿ ಘೋಷಣೆ ಮಾಡಿದೆ. ರಾಜಸ್ಥಾನದಲ್ಲಿ ಮಾಲಿ ಜಾತಿಯು ಓಬಿಸಿ ಅಡಿಯಲ್ಲಿ ಬರುತ್ತದೆ, ಆದರೆ ಧೋಭಿ (ವಾಷರ್ಮನ್) ಮತ್ತು ಚರ್ಮದ ವ್ಯಾಪಾರದಲ್ಲಿ ತೊಡಗಿರುವವರು ಎಸ್ಸಿ ಸಮುದಾಯದ ಅಡಿಯಲ್ಲಿ ಬರುತ್ತಾರೆ.
ಸರ್ಕಾರಿ ನೌಕರರ ಅಮರಣಾಂತರ ಉಪವಾಸ ಅಂತ್ಯಗೊಳಿಸಲು ರಾಜ್ಯಪಾಲರ ಮನವಿ
ಹಿಂದೆಯೂ ಸಹ ವಿವಿಧ ಸರ್ಕಾರಗಳು ಕರಕುಶಲ ಅಥವಾ ಸಮುದಾಯವನ್ನು ಮಂಡಳಿಗಳನ್ನು ರಚಿಸಿದವು. ಬ್ರಾಹ್ಮಣ ಸಮುದಾಯಕ್ಕೆ ವಿಪ್ರ ಕಲ್ಯಾಣ ಮಂಡಳಿ, ಕುಂಬಾರ ಸಮುದಾಯಕ್ಕೆ ಮಟಿ ಕಲಾ ಮಂಡಳಿ, ಕ್ಷೌರಿಕ ಸಮುದಾಯದ ಸೇನ್‍ಗಳಿಗಾಗಿ ಕೇಶ್ ಕಲಾ ಮಂಡಳಿ ಮತ್ತು ಗುಜ್ಜರ್ ಸಮುದಾಯಕ್ಕೆ ದೇವನಾರಾಯಣ ಮಂಡಳಿ ರಚನೆಯಾಗಿದ್ದವು.
ಪ್ರತಿಪಕ್ಷದ ಉಪನಾಯಕ ರಾಥೋಡ್ ರಾಜೇಂದ್ರ ಇದನ್ನು ವಿರೋಸಿ, ಸರ್ಕಾರದ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಜಾತಿಯ ಆಧಾರದ ಮೇಲೆ ಮಂಡಳಿಗಳನ್ನು ರಚಿಸಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
Rajasthan, prepares, elections, caste, based, groups, want ,representation ,