ಪ್ರೀತಿಸಿದವಳಿಗಾಗಿ ಲಿಂಗ ಬದಲಾವಣೆ ಮಾಡಿಸಿಕೊಂಡ ದೈಹಿಕ ಶಿಕ್ಷಕಿ

Social Share

ಭರತ್‍ಪುರ್, ನ.8- ರಾಜಸ್ಥಾನದಲ್ಲೊಂದು ಭಿನ್ನ ಪ್ರೇಮಕತೆ ವರದಿಯಾಗಿದೆ. ಮಹಿಳಾ ಶಿಕ್ಷಕಿಯೊಬ್ಬರು ಲಿಂಗ ಬದಲಾವಣೆ ಮಾಡಿಕೊಂಡು, ತನ್ನ ವಿದ್ಯಾಥಿಯನ್ನೇ ಮದುವೆಯಾಗಿದ್ದಾರೆ. ಪ್ರೀತಿಗಾಗಿ ಏನೆಲ್ಲಾ ನಡೆಯಬಹುದು ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.

ಸಾಮಾನ್ಯವಾಗಿ ಪುರುಷ ಲಿಂಗಿಗಳು ಸ್ತ್ರೀ ಲಿಂಗಗಳಾಗಿ ಬದಲಾಗಿರುವುದು ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಈ ಪ್ರಕರಣದಲ್ಲಿ ಯುವತಿಯೊಬ್ಬಳು ಯುವಕನಾಗಿ ಯಶಸ್ವಿಯಾಗಿ ಬದಲಾಗಿದ್ದು, ಇತ್ತೀಚೆಗೆ ಪ್ರೀತಿಸಿದವಳನ್ನು ಮದುವೆಯಾಗಿದ್ದಾರೆ.

ಪ್ರೇಮಸೌಧ ತಾಜ್‍ಮಹಲ್ ಇರುವ ಆಗ್ರಾದಿಂದ ಕೆಲವು ಕಿಲೋ ಮೀಟರ್ ದೂರ ಇರುವ ಭರತ್‍ಪುರ್ ಜಿಲ್ಲೆಯ ದೀಗ್ಗ್ ತೆಹಸಿಲ್‍ನಲ್ಲಿ ಈ ಘಟನೆ ವರದಿಯಾಗಿದೆ. ಗ್ರಾಮದ ವೀರಿಸಿಂಗ್ ಅವರಿಗೆ ನಾಲ್ವರು ಹೆಣ್ಣುಮಕ್ಕಳು. ಅವರಲ್ಲಿ ಕಿರಿಯ ಮಗಳು ಮೀರಾ ಕುಂಟಾಲ್ ಕ್ರೀಡೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದಳು. ಕ್ರಿಕೆಟ್, ಹಾಕಿಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ನಾಲ್ಕು ಬಾರಿ ಭಾಗವಹಿಸಿದ್ದಳು. ಜೊತೆಗೆ ಓದಿ ಸರ್ಕಾರಿ ಮಾಧ್ಯಮ ಶಾಲೆಯಲ್ಲಿ ದೈಹಿಕ ಶಿಕ್ಷಕಿ ಕೆಲಸ ಆರಂಭಿಸಿದ್ದರು.

ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ: ಸಚಿವ ಸುನಿಲ್ ಕುಮಾರ್

ಬಾಲಕಿಯಾಗಿ ಹುಟ್ಟಿದ್ದರೂ ಆಕೆಯ ವರ್ತನೆ ಮತ್ತು ಹಾವಭಾವಗಳು ಹುಡುಗನಂತೆಯೇ ಇತ್ತು. ದೈಹಿಕ ಶಿಕ್ಷಕಿಯಾಗಿದ್ದ ಮೀರಾ ಶಾಲೆಯಲ್ಲಿ ಕಬ್ಬಡ್ಡಿ, ವಾಲಿಬಾಲ್ ತರಬೇತುದಾರರಾಗಿದ್ದರು. ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕಲ್ಪನಾಳೊಂದಿಗೆ ಮೀರಾಗೆ ಪ್ರೇಮಾಂಕುರವಾಗಿತ್ತು. ಕಲ್ಪಾನಾಳಿಗೆ ಕಬ್ಬಡ್ಡಿ ತರಬೇತಿ ನೀಡುತ್ತಲೇ ಪ್ರೀತಿ ಗಾಢವಾಗಿತ್ತು. ಕಲ್ಪಾನಾ ಪ್ರಥಮ ಮತ್ತು ದ್ವೀತೀಯ ಪಿಯುಸಿ ವೇಳೆಗೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಳು. ಅಂತಾರಾಷ್ಟ್ರೀಯ ಪ್ರೋ ಕಬ್ಬಡ್ಡಿಗೂ ಆಯ್ಕೆಯಾಗಿ ಈ ವರ್ಷದ ಜನವರಿಯಲ್ಲಿ ದುಬೈಗೆ ತೆರಳಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು.

ಇಬ್ಬರ ಪ್ರೇಮ ಮುಂದುವರೆದಿತ್ತು, ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಸಲಿಂಗ ಪ್ರೇಮಕ್ಕೆ ಸಮಾಜ ಆಕ್ಷೇಪ ವ್ಯಕ್ತ ಪಡಿಸುವ ಆತಂಕದಿಂದ ಮೀರಾ ಲಿಂಗ ಬದಲಾವಣೆಗೆ ನಿರ್ಧರಿಸಿದ್ದರು.

2019ರಲ್ಲಿ ದೆಹಲಿಗೆ ತೆರಳಿ ವೈದ್ಯರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಿದರು. ಕೆಲವು ವೈದ್ಯಕೀಯ ಪರೀಕ್ಷೆಗಳ ಬಳಿಕ ಅದೇ ವರ್ಷ ಡಿಸೆಂಬರ್‍ನಲ್ಲಿ ಮೊದಲ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಹಂತ ಹಂತವಾಗಿ 2021ರವರೆಗೂ ನಡೆದ ವೈದ್ಯಕೀಯ ಚಿಕಿತ್ಸೆಯ ಪರಿಣಾಮ ಮೀರಾ ಈಗ ಆರವ್ ಆಗಿ ಬದಲಾಗಿದ್ದಾರೆ. ಆತನಿಗೆ ಗಡ್ಡ ಮೀಸೆ ಬಂದಿದೆ.

ಸತೀಶ್ ಜಾರಕಿಹೊಳಿ ಹೇಳಿಕೆ ಪೂರ್ವ ಯೋಜಿತ ಮತ್ತು ವ್ಯವಸ್ಥಿತ: ಸಿಎಂ ಬೊಮ್ಮಾಯಿ

ಕಿವಿಗೆ ಪುರುಷರು ಧರಿಸುವ ಓಲೆ ಹಾಕಿದ್ದಾನೆ, ತಲೆಕೂದಲನ್ನು ಪುರುಷರ ರೀತಿಯಲ್ಲೇ ಕತ್ತರಿಸಿದ್ದು ಮೇಲ್ನೋಟಕ್ಕೆ ಸಂಪೂರ್ಣ ಬದಲಾವಣೆ ಕಂಡಿದ್ದಾರೆ.
ಈ ಪರಿವರ್ತನೆಗೆ ಮನೆಯವರು ಸಮ್ಮತಿಸಿದ್ದಾರೆ, ಸಹೋದರಿಯರು ಆರವ್‍ಗೆ ರಾಕಿ ಕಟ್ಟಿದ್ದಾರೆ. ಇತ್ತೀಚೆಗೆ ಆರವ್ ಮತ್ತು ಕಲ್ಪಾನ ಪರಸ್ಪರ ಮದುವೆಯ ಪ್ರಸ್ತಾಪವನ್ನು ಕುಟುಂಬದ ಸದಸ್ಯರ ಮುಂದಿಟ್ಟಾಗ ಎರಡು ಮನೆಯ ಕಡೆಯಿಂದಲೂ ಹಸಿರು ನಿಶಾನೆ ದೊರೆತಿದೆ. ನವೆಂಬರ್ ನಾಲ್ಕರಂದು ಶಾಸ್ತ್ರೋಕ್ತವಾಗಿಯೇ ಮದುವೆ ನಡೆದಿದೆ. ಪ್ರಿವೆಡ್ಡಿಂಗ್ ಶೂಟ್ ಕೂಡ ನಡೆದಿದೆ.

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಭರದ ಸಿದ್ಧತೆ

ಈಗ ನಮ್ಮ ಸಂಸಾರ ಸುಖವಾಗಿದೆ ಎಂದು ನವವಧು ಕಲ್ಪನಾ ಹೇಳಿದ್ದಾರೆ. ನಾನು ಆತನನ್ನು ಆರಂಭದಿಂದಲೂ ಪ್ರೀತಿಸುತ್ತಿದ್ದೆ. ಸರ್ಜರಿಗೂ ಮೊದಲು ನಮ್ಮಿಬ್ಬರ ನಡುವೆ ಪ್ರೀತಿ ಇತ್ತು, ಮದುವೆಯಾಗಲು ನಿರ್ಧರಿಸಿದ್ದೇವು. ಆತನ ಲಿಂಗ ಪರಿವರ್ತನೆ ಸರ್ಜರಿ ನಡೆಯುವಾಗ ನಾನು ಜೊತೆಯಲ್ಲೇ ದೆಹಲಿಗೆ ಹೋಗಿದ್ದೆ ಎಂದು ಕಲ್ಪಾನಾ ಹೇಳಿದ್ದಾರೆ.

ಆರವ್ ಮಾತನಾಡಿ, ಲಿಂಗ ಬದಲಾವಣೆ ಮಾಡಿಕೊಳ್ಳಬೇಕು ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಮನಸ್ಸಿನ ಮಾತು ಕೇಳಿ 2019ರಲ್ಲಿ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಹೇಳಿದ್ದಾರೆ.

Articles You Might Like

Share This Article