ಹಲವು ರಾಜ್ಯಗಳಲ್ಲಿ ದರೋಡೆ ಮಾಡಿದ್ದ ಕೇಶವ್ ಗುರ್ಜರ್ ಸೆರೆ

Social Share

ಜೈಪುರ, ಜ.31- ಹಲವು ರಾಜ್ಯಗಳ ಪೊಲಿಸರಿಗೆ ಬೇಕಾಗಿದ್ದ ಹಾಗೂ ಲಕ್ಷಗಟ್ಟಲೆ ಬಹುಮಾನ ಘೋಷಿತ ದರೋಡೆಕೋರನನ್ನು ರಾಜಸ್ಥಾನದ ಪೊಲಿಸರು ಗುಂಡಿನ ಚಕಮಕಿಯ ಬಳಿಕ ಬಂಧಿಸಿದ್ದಾರೆ.

ಧೋಲ್ಪುರ ಜಿಲ್ಲೆಯಲ್ಲಿ ಬಂಧಿತ ಕೇಶವ್ ಗುರ್ಜರ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದಾರೆ.

ಪೊಲೀಸರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಆತನ ಕಾಲಿಗೆ ಪೆಟ್ಟಾಗಿದೆ. ಚಿಕಿತ್ಸೆಗಾಗಿ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೆಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.

ಭಾರತೀಯರ ಮೇಲೆ ಖಲಿಸ್ತಾನಿ ಉಗ್ರರ ದಾಳಿಗೆ ಖಂಡನೆ

ಖಚಿತ ಸುಳಿವಿನ ಮೇರೆಗೆ ಪೊಲೀಸರು ಭಾನುವಾರ ತಡರಾತ್ರಿ ಗುರ್ಜರ್ಗಾಗಿ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಸೋಮವಾರ ಬೆಳಗ್ಗೆ ಅವರನ್ನು ಸೋನೆ ಕಾ ಗುರ್ಜಾ ಅರಣ್ಯ ಪ್ರದೇಶದಲ್ಲಿ ಬಂಧಿಸಿದರು.

ಗುರ್ಜರ್ ಹಲವಾರು ರಾಜ್ಯಗಳಲ್ಲಿ ವಾಂಟೆಡ್ ಕ್ರಿಮಿನಲ್ ಆಗಿದ್ದು, ಆತನ ಬಂಧನಕ್ಕೆ 1.15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಬಂಧಿತನಿಂದ ಶಸ್ತ್ರಾಸ್ತ್ರಗಳು ಮತ್ತು ಜೀವಂತ ಕಾಟ್ರಿಡ್ಜ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

Rajasthan, Wanted, dacoit, arrested, gunfight, police,

Articles You Might Like

Share This Article