ಹೊಸ ವರ್ಷದ ಮೊದಲ ಚಿತ್ರವಾಗಿ ತೆರೆಗಪ್ಪಳಿಸಲಿದೆ ‘ರಾಜತಂತ್ರ’

ಹೊಸ ವರ್ಷದ ಮೊದಲ ಚಿತ್ರವಾಗಿ ರಾಜತಂತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ. ಕೊರೊನಾ ಹಾವಳಿಯಿಂದ ಇಡೀ ಚಿತ್ರೋದ್ಯಮವೇ ಕಂಗಾಲಾಗಿದ್ದು , ಈಗಷ್ಟೆ ಕೆಲವು ಹೊಸಬರ ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಸ್ಟಾರ್ ನಟರಗಳ ಚಿತ್ರ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.  ಇದೆ ಹುಮ್ಮಸ್ಸಿನೊಂದಿಗೆ ರಾಜ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ರಾಜಕುಮಾರ್ ನಟಿಸಿರುವ ರಾಜತಂತ್ರ ಸಿನಿಮಾ ಇದೀಗ ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆP್ಸï ಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಜೆ .ಎಂ.ಪ್ರಹ್ಲಾದ್ ಬರೆದಿದ್ದಾರೆ. ಇದೊಂದು ಸಾಮಾಜಿಕ ಸಂದೇಶವಿರುವ ಸಿನಿಮಾವಾಗಿದೆಯಟತೆ. ಇಂತಹ ಚಿತ್ರವನ್ನು ನಿರ್ಮಾಪಕ ವಿಜಯ್ ಭಾಸ್ರ್ಕ ನಿರ್ಮಿಸಿದ್ದು, ಒಂದು ಉತ್ತಮ ಕಥೆಯ ಚಿತ್ರವನ್ನು ಜನರಿಗೆ ನೀಡುವ ಉದ್ದೇಶ ನಮ್ಮದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ಪಿ.ವಿ.ಆರ್.ಸ್ವಾಮಿ ನಿರ್ದೇಶನ ಮಾಡಿದ್ದಾರೆ.

ಈ ಹಿಂದೆ ಇವರು ರಾಘಣ್ಣ ನಟನೆಯ ಅಮ್ಮನ ಮನೆ ಸಿನಿಮಾದಲ್ಲಿ ಕೆಲಸ ಮಾಡಿದ್ದು , ಈ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದು , ಒಬ್ಬ ನಿವೃತ್ತ ಆರ್ಮಿ ಆಧಿಕಾರಿಯಾಗಿ ಕ್ಯಾಪ್ಟನ್ ರಾಜಾರಾಮ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಾಜದೊಳಗಿನ ಲೋಪಗಳನ್ನು ತಮ್ಮದೆ ಶೈಲಿಯಲ್ಲಿ ಸರಿಪಡಿಸುವ ಪಾತ್ರವನ್ನು ನಿರ್ವಹಿಸಿದ್ದು , ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿ ನೋಡಬಹುದು, ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ರಾಘಣ್ಣ ಅವರ ಫೈಟ್ ಸಹ ಮಾಡಿರುವುದು ವಿಶೇಷ.

ನಟ ರಾಘವೇಂದ್ರ ರಾಜ್‍ಕುಮಾರ್ ಕೂಡ ತಮ್ಮ ಎರಡನೇ ಇನ್ನಿಂಗ್ಸನ್ನು ಭರ್ಜರಿಯಾಗಿಯೇ ನಡೆಸುತ್ತಿದ್ದಾರೆ. ಈ ಹಿಂದೆ ಬಂದ ಅಮ್ಮನ ಮನೆ ಕೂಡ ಅವರಿಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟಿತು. ಸದ್ಯ ಒಂದರ ಹಿಂದೆ ಒಂದಂತೆ ಚಿತ್ರಗಳು ಕೂಡ ಅವರಿಗೆ ದೊರಕುತ್ತಿದ್ದು, ಈ ವಾರ ಬಿಡುಗಡೆ ಆಗುತ್ತಿರುವ ರಾಜತಂತ್ರ ಚಿತ್ರ ಕೂಡ ಬಹಳಷ್ಟು ನಿರೀಕ್ಷೆಯನ್ನು ತಂದಿದೆಯಂತೆ. ಅವರ ಪ್ರಕಾರ , ತಮ್ಮ ಚಿತ್ರ ಪ್ರಯಾಣದಲ್ಲಿ ಈ ರೀತಿಯಾದಂಥ ಪಾತ್ರ ಮಾಡಿರಲಿಲ್ವಂತೆ.

ಇದೊಂದು ರೀತಿ ಹೊಸ ಅನುಭವವಾಗಿತ್ತು , ತಾವು ಮಾಡುವುದಕ್ಕಿಂತ ತಮ್ಮ ಕೈಯಲ್ಲಿ ಪಾತ್ರ ಮಾಡಿಸಿದ್ದಾರೆ ಎಂಬ ಸಂತೋಷ ಹೆಚ್ಚಿದೆಯಂತೆ. ಇಡೀ ತಂಡ ತುಂಬ ಶ್ರಮಪಟ್ಟು ಈ ಚಿತ್ರವನ್ನು ಮಾಡಿದ್ದಾರೆ. ಖಂಡಿತ ಇದರ ಯಶಸ್ಸು ಎಲ್ಲರಿಗೂ ಸಿಗಲಿ ಎಂಬ ಅಭಿಪ್ರಾಯ ಅವರದು.

ಈ ಚಿತ್ರವು ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹಾಗೂ ಪಿ.ಆರ್.ಶ್ರೀಧರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಸಂಗೀತ ನಿರ್ದೇಶನ , ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ , ನಾಗೇಶ್ ಸಂಕಲನ , ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು , ರಾಮ್ ದೇವ, ಅಲ್ಟಿಮೆಟ್ ಶಿವು
ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಮುಖ ಪಾತ್ರ ವರ್ಗದಲ್ಲಿ ರಾಘವೇಂದ್ರ ರಾಜಕುರ್ಮಾ, ದೊಡ್ಡಣ್ಣ , ಶ್ರೀನಿವಾಸ್ ಮೂರ್ತಿ, ಭವ್ಯ , ಶಂಕರ್ ಅಶ್ವಥ್ , ನೀನಾಸಂ ಅಶ್ವಥ್, ಮುನಿರಾಜು , ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ , ಪ್ರಕಾಶ್ ಕಾರಿಯಪ್ಪ , ವೆಂಕಟೇಶ್ ಪ್ರಸಾದ್, ಹೋಳಿ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮï, ಲಕ್ಷ್ಮಣ್, ಭೀಮ , ಆನಂದ್ ಪನ್ನೇದೊಡ್ಡಿ , ಹೇರಂಭ , ಸತೀಶ್ ಗೌಡ , ಮೀರಾ ಶ್ರೀ ಗೌಡ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಒಟ್ಟಾರೆ ಹೊಸ ವರ್ಷದ ಮೊದಲ ಚಿತ್ರವಾಗಿ ಬೆಳ್ಳಿಪರದೆ ಮೇಲೆ ಬರುತ್ತಿರುವ ರಾಜತಂತ್ರ ಪ್ರೇಕ್ಷಕರನ್ನು ಯಾವ ರೀತಿ ತನ್ನತ್ತ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.