ಹಳಿಯ ನಡುವೆ ಬಿದ್ದಿದ್ದ ಪಿಲ್ಲರ್‌ಗೆ ರೈಲು ಡಿಕ್ಕಿ

Social Share

ವಲ್ಸಾದ್, ಜ.15- ದುಷ್ಕರ್ಮಿಗಳು ರೈಲ್ವೆ ಹಳಿಯ ಮೇಲೆ ಹಾಕಿದ್ದ ಸಿಮೆಂಟ್ ಪಿಲ್ಲರ್‌ಗೆ   ರಾಜಧಾನಿ ಎಕ್ಸ್‍ಪ್ರೆಸ್ ಡಿಕ್ಕಿ ಹೊಡೆದಿದ್ದು, ಕೆಲ ಕಾಲ ಆತಂಕ ಮೂಡಿಸಿದೆ. ಗುಜರಾತ್‍ನ ದಕ್ಷಿಣ ಭಾಗದಲ್ಲಿ ಈ ದುರ್ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮುಂಬೈ, ದೆಹಲಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‍ಪೆಕ್ಸ್ ರೈಲು ಶುಕ್ರವಾರ ಸಂಜೆ 7.10ರ ಸುಮಾರಿನಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಸಿಮೆಂಟ್ ಪಿಲ್ಲರ್ ಅನ್ನು ರೈಲ್ವೆ ಹಳಿಯ ಮೇಲೆ ಹಾಕಿದ್ದಾರೆ. ರೈಲು ಢಿಕ್ಕಿ ಹೊಡೆದ ರಬಸಕ್ಕೆ ಪಿಲ್ಲರ್ ಹಳಿಯ ಮೇಲಿಂದ ಪಕ್ಕಕ್ಕೆ ತಳ್ಳಲ್ಪಟ್ಟಿದೆ.
ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ರೈಲ್ವೆ ಸಂಚಾರಕ್ಕೂ ಅಡಚಣೆಯಾಗಿಲ್ಲ. ಘಟನೆಯ ಬಗ್ಗೆ ಲೋಕೋ ಪೈಲಟ್ ಸ್ಟೆಷನ್ ಮಾಸ್ಟರ್‍ಗೆ ಮಾಹಿತಿ ನೀಡಿದ್ದಾರೆ.  ವಲ್ಸಾದ್ ಗ್ರಾಮೀಣ ಭಾಗದ ಪೊಲೀಸರು ಕೇಸು ದಾಖಲಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article