ಬೆಂಗಳೂರು,ಆ.10- ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸಿದೆ. ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ತಮಿಳು ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ರಜನಿ ಅವರೊಂದಿಗೆ ನಟಿಸಿರುವ ಜೈಲರ್ ಚಿತ್ರ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಬಿಡುಗಡೆಯಾಗಿದ್ದು, ಚಿತ್ರ ನೋಡಲು ತಲೈವಾ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.
ಬೆಂಗಳೂರು, ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಮುಗಿಬಿದ್ದು ಟಿಕೆಟ್ ಖರೀದಿಸಿ ಸಿನಿಮಾ ನೋಡಿ ಆನಂದಿಸಿದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ನೆಚ್ಚಿನ ಅಭಿಮಾನಿಯೊಬ್ಬ, ಅವರನ್ನು ನಾವು ಯಾವುದೇ ಪರಿಸ್ಥಿತಿಯಲ್ಲಿ ನಿರ್ಲಕ್ಷಿಸಬಾರದು. ಅವರ ಚಿತ್ರಗಳು ಯಾವ ಸಮಯ ಅಥವಾ ದಿನವಾದರೂ ಬಿಡುಗಡೆಯಾದಾಗ ನಾವು ಅವರಿಗಾಗಿ ಹೋಗುತ್ತೇವೆ. ಕಳೆದ ಹಲವಾರು ವರ್ಷಗಳಿಂದ ತಲೈವಾ ಅವರ ಚಿತ್ರ ಬಿಡುಗಡೆಯಾಗುವ ಮೊದಲ ಪ್ರದರ್ಶನ ನೋಡಿಕೊಂಡು ಬರುತ್ತಿದ್ದೇನೆ ಎಂದಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾದ ಕೃಷಿ ಸಚಿವರ ನೇತೃತ್ವದ ನಿಯೋಗ
ಅಭಿಮಾನಿಗಳು ತಮಿಳುನಾಡಿನ ಹಾಗೂ ಬೆಂಗಳೂರಿನ ಹಲವಾರು ಸಿನಿಮಾ ಹಾಲ್‍ನ ಹೊರಗೆ ಸ್ಟಾರ್‍ಗಾಗಿ ಹುರಿದುಂಬಿಸುವ ಮೂಲಕ, ಧೋಲ್ ಬೀಟ್‍ಗಳಿಗೆ ನೃತ್ಯ ಮಾಡುವ ಮೂಲಕ ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಆಚರಿಸುತ್ತಿರುವುದು ಕಂಡುಬಂತು. ಜೈಲರ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ತಂದೆಯಾಗಿ ರಜನಿಕಾಂತ್ ನಟಿಸಿದ್ದಾರೆ. ರಜನಿ ಎದುರು ಖಳ ನಟರಾಗಿ ಜಾಕಿ ಶ್ರಾ- ನಟಿಸಿದ್ದು ಚಿತ್ರ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಆಟೋ ಚಾಲಕನಿಂದ ಹಣ ಪಡೆದು ವಂಚಿಸಿದ ಯುವತಿ
36 ವರ್ಷಗಳ ಹಿಂದೆ ಉತ್ತರ ದಕ್ಷಿಣ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಜಾಕಿ ತೆರೆ ಹಂಚಿಕೊಂಡಿದ್ದರು. ಜೈಲರ್ ಒಂದು ಆಕ್ಷನ್ -ಪ್ಯಾಕ್ಡ್ ಎಂಟರ್‍ಟೈನರ್ ಚಿತ್ರವಾಗಿದೆ ಮತ್ತು ಪ್ರಿಯಾಂಕಾ ಮೋಹನ್ , ಶಿವ ರಾಜ್‍ಕುಮಾರ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ, ಯೋಗಿ ಬಾಬು, ವಸಂತ್ ರವಿ, ವಿನಾಯಕನ್ ಪ್ರಮುಖ ಪಾತ್ರಗಳನ್ನು ಒಳಗೊಂಡಿರುವ ತಾರಾಬಳಗವನ್ನು ಹೊಂದಿದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ವಿಸ್ತೃತ ಅತಿಥಿ ಪಾತ್ರಕ್ಕಾಗಿ ನಿರ್ಮಾಪಕರು ಮಲಯಾಳಂ ನಟ ಮೋಹನ್‍ಲಾಲ್ ಅವರು ನಟಿಸಿರುವುದು ವಿಶೇಷವಾಗಿದೆ.
#Rajinikanth, #Jailer, #movierelease, #blockbuster, #Mohanlal, #Shivarajkumar,