ನವದೆಹಲಿ,ಡಿ.13- ತವಾಂಗ್ ಪ್ರದೇಶದಲ್ಲಿ ಚೀನಾ-ಭಾರತ ಸಂಘರ್ಷವನ್ನು ಮುಂದಿಟ್ಟುಕೊಂಡು ಸಂಸತ್‍ನಲ್ಲಿ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಕೇಂದ್ರ ಗೃಹಸಚಿವ ಅಮಿತ್ ಷಾ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಫೌಂಡೇಷನ್ ಚೀನಾ ರಾಯಭಾರಿ ಕಚೇರಿಯಿಂದ 1.35 ಕೋಟಿ ರೂ. ಹಣಕಾಸು ನೆರವು ಪಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
2005ರಿಂದ 2007ರ ನಡುವೆ ರಾಜೀವ್‍ಗಾಂಧಿ ಫೌಂಡೇಷನ್ ಆರ್ಥಿಕ ನೆರವು ಪಡೆದಿದೆ. ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‍ಸಿಆರ್‍ಎ) ಸಮರ್ಪಕವಾಗಿಲ್ಲ. ಈ ಕಾರಣಕ್ಕೆ ಫೌಂಡೇಷನ್‍ನ ಪರಾವನಗಿಯನ್ನು ರದ್ದುಪಡಿಸಲಾಗಿದೆ ಎಂದರು.
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ
ಸಂಸತ್‍ನಲ್ಲಿ ಇಂದು ಪ್ರಶ್ನೋತ್ತರ ಅವಧಿಯ ವೇಳೆ ಕಾಂಗ್ರೆಸಿಗರ ಭಯ ಆತಂಕವನ್ನು ನಾನು ಗಮನಿಸಿದ್ದೆ.
5ನೇ ಪ್ರಶ್ನೆ ರಾಜೀವ್‍ಗಾಂಧಿ ಫೌಂಡೇಷನ್‍ನ ಪರವಾನಗಿ ರದ್ದುಪಡಿಸಲಾಗಿತ್ತು. ಒಂದು ವೇಳೆ ಸಂಸತ್‍ನಲ್ಲಿ ಕಲಾಪಕ್ಕೆ ಅವಕಾಶ ಕೊಟ್ಟಿದ್ದರೆ ಈ ಬಗ್ಗೆ ಅವಕಾಶ ಕೊಡುತ್ತಿದ್ದೆ.
ಕಳ್ಳನ ಮೇಲೆ ಗುಂಡು ಹಾರಿಸಿದ ಮನೆ ಮಾಲೀಕ
ಆದರೆ ಕಾಂಗ್ರೆಸಿಗರು ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿದರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರದಲ್ಲಿರುವವರೆಗೂ ಯಾರೊಬ್ಬರು ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Rajiv Gandhi Foundation, grants, China, Amit Shah,