ಆರೋಗ್ಯ ಸಚಿವರ ಪತ್ರಕ್ಕೂ ಕ್ಯಾರೆ ಎನ್ನದ ರಾಜೀವ್ ಗಾಂಧಿ ಆರೋಗ್ಯ ವಿವಿ

Social Share

ಬೆಂಗಳೂರು,ಫೆ.2- ಪರೀಕ್ಷಾ ದಿನಾಂಕ ಮುಂದೂಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪತ್ರ ಬರೆದಿದ್ದರೂ ಸಚಿವರ ಮಾತಿಗೆ ಕ್ಯಾರೆ ಎನ್ನದೆ ನಿಗದಿಯಂತೆಯೇ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆ ನಡೆಸಲು ವಿವಿ ತೀರ್ಮಾನಿಸಿದೆ. ಎಂಬಿಬಿಎಸ್ ಅಂತಿಮ ವಿದ್ಯಾರ್ಥಿಗಳ ಕೋರಿಕೆ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಡಾ.ಕೆ. ಸುಧಾಕರ್ ಅವರು ರಾಜೀವ್‍ಗಾಂ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗೆ ಪತ್ರ ಬರೆದಿದ್ದರು.
ಇದೇ ಫೆ.22ರಿಂದ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ. ಆದರೆ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಬೇಕು ಎಂದು ಕೇಳಿಕೊಂಡಿರುವುದರಿಂದ ಸದ್ಯ ಪ್ರಕಟಿಸಿರುವ ವೇಳಾಪಟ್ಟಿಯನ್ನು ಮುಂದೂಡಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಕಾಲಾವಕಾಶ ಒದಗಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಪತ್ರದಲ್ಲಿ ಕೇಳಿಕೊಂಡಿದ್ದರು.
ಆದರೆ ಸಚಿವರ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ರಾಜೀವ್ ಗಾಂಧಿ ಆರೋಗ್ಯ ವಿವಿ ನಿದಿಯಂತೆ ಫೆ.22ರಿಂದ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಈಗಾಗಲೇ ಎನ್‍ಎಮ್‍ಸಿ ಅಡ್ವೈಸರಿ ಆಧಾರದಂತೆ ನೀಟ್ ಪಿಜಿ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ, ರಾಜೀವ್ ಗಾಂ ವಿವಿ ಕಾನ್ವಕೇಷನ್ ದಿನಾಂಕ ಹಾಗೂ ಎಂಬಿಬಿಎಸ್ ಪರೀಕ್ಷೆಯ ದಿನಾಂಕಗಳೆಲ್ಲವೂ ನಿಗದಿಯಾಗಿದೆ.
ಇದನ್ನು ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಸಲಹೆ ಪಡೆದು ನಿಗದಿಗೊಳಿಸಲಾಗಿದೆ ಎಂದು ರಾಜೀವ್ ಗಾಂ ಆರೋಗ್ಯ ವಿವಿ ಸುತ್ತೋಲೆ ಪ್ರಕಟಿಸಿದೆ. ಪ್ರತಿ ವಿಷಯದ ಎಂಬಿಬಿಎಸ್ ಪರೀಕ್ಷೆಗೆ 2 ದಿನದ ಅಂತರವಿದೆ. ಇದೇ ಮೊದಲ ಬಾರಿಗೆ ಅಂತರ ಕೊಟ್ಟು ಪರೀಕ್ಷೆ ಮಾಡಲಾಗುತ್ತಿದೆ. ಇತರೆ ರಾಜ್ಯಗಳಲ್ಲಿ ನಿಗದಿಯಂತೆ ಪರೀಕ್ಷೆ ನಡೆಸಲಾಗುತ್ತಿದೆ.
ಆದ್ದರಿಂದ ನಮ್ಮ ರಾಜ್ಯದಲ್ಲೂ ನಿಗದಿಯಂತೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಫೆ.22ರಿಂದ ಪರೀಕ್ಷೆ ನಡೆಸಲು ರಾಜೀವ್ ರಾಜೀವ್ ಗಾಂ ವಿವಿ ತೀರ್ಮಾನ ಮಾಡಿದೆ. ರಾಜೀವ್‍ಗಾಂ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಯನ್ನು ಫೆ.22ರಿಂದ ನಡೆಸುವುದಾಗಿ ವೇಳಾಪಟ್ಟಿ ಹೊರಡಿಸಿದ್ದು, ಇದು ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ ಎಂದು ಸಂಘಟನೆ ಹೇಳಿತ್ತು.
ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಿದ್ದು, ಮೇನಿಂದ ಜುಲೈವರೆಗೂ ಆನ್‍ಲೈನ್ ತರಗತಿಗಳು ನಡೆದಿವೆ.ಅಗತ್ಯವಿದ್ದಷ್ಟು ಕ್ಲಿನಕಲ್ ಪೋಸ್ಟಿಂಗ್ ಸಹ ಆಗಿಲ್ಲ. ಕೋವಿಡ್ ಪಾಸಿಟಿವ್ ತೀವ್ರವಾಗಿದ್ದ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕೆಲಕಾಲ ಕೋವಿಡ್ ಕರ್ತವ್ಯವನ್ನೂ ನಿರ್ವಹಿಸಿದ್ದಾರೆ.
ಅಲ್ಲದೆ, ಎರಡು ತಿಂಗಳು ಟೆಲಿ ಕ್ಲಿನಿಕ್ ಕತ್ಯವ್ಯ ನಿರ್ವಹಿಸಿದ್ದು, ಮತ್ತೆ ಕೋವಿಡ್ ಮೂರನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ತರಗತಿಗಳು ಮತ್ತು ಚಟುವಟಿಕೆಗಳು ಪೂರ್ಣವಾಗಿಲ್ಲ.  ಹೀಗಾಗಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಕಾಲಾವಕಾಶವೇ ಸಿಕ್ಕಿಲ್ಲ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲಾವಕಾಶ ಒದಗಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆರೋಗ್ಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು.

Articles You Might Like

Share This Article