ಬೆಂಗಳೂರು,ಆ.17- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಡಾ.ರಾಜ್ಕುಮಾರ್ ಕುಟುಂಬ ಸದಸ್ಯರು ಭೇಟಿಯಾಗಿ ಮಾತುಕತೆ ನಡೆಸಿದರು. ರೇಸ್ ಕೋರ್ಸ್ ನಿವಾಸದಲ್ಲಿ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನಿತ್ ರಾಜಕುಮಾರ ಮತ್ತು ರೇನ್ ರಾಮ್ ಕುಮಾರ್ ಸಿಎಂ ಭೇಟಿಯಾಗಿ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ, ಪುನೀತ್ ಸಮಾಧಿ ಮತ್ತು ಪಾರ್ವತಮ್ಮ ಸಮಾಧಿ ಸ್ಥಳವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು. ಒಂದೇ ಸ್ಥಳದಲ್ಲಿ ಮೂರು ಜನರ ಸಮಾಧಿ ಇದೆ ಇದರ ಅಭಿವೃದ್ಧಿ ವಿಚಾರವಾಗಿ ಸಿಎಂ ಜೊತೆ ಚರ್ಚೆ ನಡೆಸಿದರು.
ಈ ವೇಳೆ ರಾಜ್ ಕುಟುಂಬದಿಂದ ಸಿದ್ದಪಡಿಸಿದ ಪಿಪಿಟಿ ವೀಕ್ಷಣೆಯನ್ನು ಮಾಡಿದ ಸಿಎಂ, ಪಿಡಬ್ಲ್ಯೂಡಿ ಇಲಾಖೆಯಿಂದ ಯೋಜನೆ ಅಂದಾಜು ಮೊತ್ತ ತರಿಸಲು ಸೂಚನೆ ನೀಡಿದರು. ಪಿಡಬ್ಲ್ಯೂಡಿ ಇಲಾಖೆಯಿಂದ ಯೋಜನೆಯ ರೂಪರೇಷ ತಯಾರದ ಬಳಿಕ ಮತ್ತೊಂದು ಸುತ್ತಿನ ಸಭೆ ನಡೆಸೋಣ ಎಂದು ಹೇಳಿದರು.
ಡಾ.ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಮಾಧಿಗಳು ಕಂಠೀರವ ಸ್ಟುಡಿಯೋ ಒಂದೇ ಭಾಗದಲ್ಲಿವೆ. ಅಲ್ಲದೇ, ಈಗಾಗಲೇ ಡಾ.ರಾಜ್ ಕುಮಾರ್ ಪುಣ್ಯಭೂಮಿ ಟ್ರಸ್ಟ್ ಕೂಡ ಇದೆ. ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳೂ ನಡೆದಿವೆ.
ಡಾ.ರಾಜ್ ಪುತ್ರ ನಟ, ರಾಘವೇಂದ್ರ ರಾಜಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನಿತ್ ರಾಜಕುಮಾರ ಮತ್ತು ನಟ ಯುವ ರಾಜಕುಮಾರ್ ಸೇರಿದಂತೆ ಹಲವು ಸದಸ್ಯರು ಸಿಎಂ ಮನೆಗೆ ಆಗಮಿಸಿ ದ್ದರು. ರಾಜ್ ಕುಟುಂಬದಿಂದ ಸಿದ್ದಪಡಿಸಿದ ಪಿಪಿಟಿ ವೀಕ್ಷಣೆ ಮಾಡಿದ ಬೊಮ್ಮಾಯಿ ಅವರು, ಲೋಕೋಪಯೋಗಿ ಇಲಾಖೆಯಿಂದ ಯೋಜನೆ ಅಂದಾಜು ಮೊತ್ತ ತರಿಸಲು ಸೂಚನೆ ನೀಡಿದ್ದಾರೆ.
ಈ ಇಲಾಖೆಯಿಂದ ಯೋಜನೆಯ ರೂಪುರೇಷೆ ತಯಾರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿಬಳಿಕ ಮತ್ತೊಂದು ಸುತ್ತಿನ ಸಭೆ ಮಾಡೋಣ ಎಂದಿದ್ದಾರೆ.