ತವಾಂಗ್ ಘರ್ಷಣೆ : ರಾಜ್‍ನಾಥ್‍ಸಿಂಗ್ ತುರ್ತು ಸಭೆ

Social Share

ನವದೆಹಲಿ,ಡಿ.13- ಅರುಣಾಚಲ ಪ್ರದೇಶದ ಯಾಂಗಷ್ಟೆ ಪ್ರದೇಶದ ತವಾಂಗ್ ಸೆಕ್ಟರ್‍ನಲ್ಲಿ ಚೀನಾ ಯೋಧರು ಭಾರತದ ಗಡಿಯೊಳಗೆ ನುಸುಳಿ ಚೆಕ್‍ಪೋಸ್ಟ್‍ಅನ್ನು ಧ್ವಂಸಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಿರಿಯ ಅಧಿರಿಗಳ ಜೊತೆ ತುರ್ತು ಸಭೆ ನಡೆಸಿದರು.

ಡಿ.9ರಂದು ನಡೆದ ಘಟನೆ ನಾಲ್ಕು ದಿನದ ಬಳಿಕ ತಡವಾಗಿ ಬೆಳಕಿ ಬಂದಿದ್ದು, ಇಂದು ಬೆಳಗ್ಗೆ ರಾಜನಾಥ್ ಸಿಂಗ್ ಅವರು ಸೇನೆಯ ಮುಖ್ಯಸ್ಥರಾದ ಅನಿಲ್ ಚವ್ಹಾಣ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೆವೊಲ್ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಭಾರತೀಯ ಗಡಿಯೊಳಗಿದ್ದ ಚೆಕ್‍ಪೋಸ್ಟ್‍ನ್ನು ಕಿತ್ತು ಹಾಕಲು ಚೀನಾದ ಪಿಎಲ್‍ಎಂನ 300 ಸೈನಿಕರು ಹರಿತ ಹೊಂದಿದ್ದ ರಾಡ್‍ಗಳು ಮತ್ತು ದೊಣ್ಣೆಗಳೊಂದಿಗೆ ಬಂದಿದ್ದರು. ಆರಂಭದಿಂದಲೂ ಚೀನಾದ ಕುತಂತ್ರಗಳ ಬಗ್ಗೆ ಅರಿವಿದ್ದ ಭಾರತೀಯ ಯೋಧರು ಗಡಿ ಭಾಗದಲ್ಲಿ ಸರ್ವಸನ್ನದ್ದರಾಗಿರುತ್ತಿದ್ದರು.

ಚುನಾವಣೆ ಎದುರಿಸಲು ರಾಜ್ಯ ಬಿಜೆಪಿಯಲ್ಲಿ ವರ್ಚಸ್ವಿ ನಾಯಕನ ಕೊರತೆ

ಯಾಮಾರಿಸಿ ದಾಳಿ ನಡೆಸಲೆತ್ನಿಸಿದ ಬಿಎಂಎಲ್ ಸೇನೆಗೆ ಭಾರತೀಯ ಯೋಧರು ಸರಿಯಾಗಿ ಮುಸಿ ಮುಟ್ಟಿಸಿದ್ದಾರೆ. ಇಂದು ಬೆಳಗಿನ ಸಭೆಯಲ್ಲಿ ಗಡಿಯ ವಾಸ್ತವ ಅಂಶಗಳ ಬಗ್ಗೆ ಸಚಿವ ರಾಜನಾಥ್ ಸಿಂಗ್ ಮಾಹಿತಿ ಪಡೆದಿದ್ದಾರೆ.
ಯಾವುದೇ ಸಂದರ್ಭದಲ್ಲೂ ಸೇನೆಯ ಆತ್ಮಸ್ಥೈರ್ಯ ಕುಗ್ಗಬಾರದು. ಮುಂಜಾಗ್ರತಾ ಕ್ರಮವಾಗಿ ಭೂಸೇನೆ ಮತ್ತು ವಾಯುಸೇನೆ ಬಲವನ್ನು ಗಡಿಯಲ್ಲಿ ಹೆಚ್ಚಿಸಬೇಕೆಂದು ಸೂಚನೆ ನೀಡಿದ್ದಾರೆ.

ಈ ಮೊದಲು 2020ರ ಜೂನ್‍ನಲ್ಲಿ ಲಡಾಕ್ ಪ್ರದೇಶದ ಗಾಲ್ವಾನ್ ಕಣಿವೆಯಲ್ಲಿ ಇದೇ ರೀತಿಯ ಉದ್ದಟತನವನ್ನು ಚೀನಾ ಸೇನೆ ಪ್ರದರ್ಶಿಸಿತ್ತು. ಆಗ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದರು.

ಖರ್ಗೆ ಹೆಸರಿಗಷ್ಟೇ ಕಾಂಗ್ರೆಸ್ ಅಧ್ಯಕ್ಷರು, ಈಗಲೂ ಜೀ ಹುಜೂರ್ ಸಂಸ್ಕೃತಿ ಇದೆ : ಬಿಜೆಪಿ ವ್ಯಂಗ್ಯ

ನಂತರ ಗಡಿ ಉದ್ವಿಗ್ನತೆಯಿಂದಾಗಿ ಎರಡೂ ದೇಶಗಳು ಸೇನಾ ಜಮಾವಣೆಯನ್ನು ಹೆಚ್ಚಿಸಿದ್ದವು. ಬಳಿಕ ರಾಜತಾಂತ್ರಿಕ ಬೆಳವಣಿಗೆಯಲ್ಲಿ ಸೇನಾ ಹಿರಿಯ ಅಧಿಕಾರಿಗಳ ಮಟ್ಟದ 14 ಸುತ್ತಿಗೂ ಹೆಚ್ಚಿನ ಮಾತುಕತೆಗಳು ನಡೆದಿದ್ದವು.

ಕಳೆದ ಏಪ್ರಿಲ್ ವೇಳೆಗೆ ಎರಡೂ ದೇಶಗಳು ಹೆಚ್ಚುವರಿ ಸೇನಾ ಜಮಾವಣೆಯನ್ನು ಹಿಂಪಡೆದು ಸೌಹಾರ್ದಯುತ ವಾತಾವರಣಕ್ಕೆ ಅನುವು ಮಾಡಿಕೊಟ್ಟಿದ್ದವು. ಆದರೆ ಡಿ.9ರಂದು ಚೀನಾ ಮತ್ತೆ ತನ್ನ ಕುಯುಕ್ತಿ ಬುದ್ದಿಯನ್ನು ಪ್ರದರ್ಶಿಸಿದ್ದು, ನಿರಾಯುಧವಾದ ಭಾರತೀಯ ಯೋಧರ ಮೇಲೆ ಎರಗಲು ಯತ್ನಿಸಿದೆ.

ಮಹದಾಯಿ ಯೋಜನೆಗೆ ಅನುಮೋದನೆ ಸಿಗುವುದಾಗಿ ಕಾರಜೋಳ ವಿಶ್ವಾಸ

ಆದರೆ ತಕ್ಕ ಪ್ರತ್ಯುತ್ತರವನ್ನು ಪಡೆದಿದೆ. ಭಾರತ ಸೇನೆಯ ಆರು ಮಂದಿ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಚೀನಾಪಡೆಯಲಿ ಗಾಯಾಳುಗಳ ಸಂಖ್ಯೆಹೆಚ್ಚಿದೆ ಎಂದು ವರದಿಯಾಗಿದೆ. ರಾಜನಾಥ್ ಸಿಂಗ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ ಪ್ರಧಾನಿಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Rajnath Singh, holds, high-level, meet, India-China clash, Arunachal,

Articles You Might Like

Share This Article