ರಾಜ್ಯಸಭಾ ಕಲಾಪ ಮಾ.13 ರವರೆಗೆ ಮುಂದೂಡಿಕೆ

Social Share

ನವದೆಹಲಿ,ಫೆ.13- ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅಮಾನತು ರದ್ದುಗೊಳಿಸುವಂತೆ ಮತ್ತು ಅದಾನಿ ಸಮೂಹದ ವಿರುದ್ಧದ ಆರೋಪಗಳ ತನಿಖೆಗೆ ಸಮಿತಿ ರಚಿಸುವಂತೆ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಗದ್ದಲ ಉಂಟುಮಾಡಿದ್ದರಿಂದ ಕಲಾಪವನ್ನು ಮಾ.13 ರವರೆಗೆ ಮುಂದೂಡಲಾಗಿದೆ.

ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮಾತನಾಡಲು ಅವಕಾಶ ನೀಡುವಂತೆ ಪ್ರತಿಪಕ್ಷಗಳ ಸದಸ್ಯರು ಪಟ್ಟುಹಿಡಿದರು. ಸಭಾಪತಿ ಜಗದೀಪ್ ಧನ್ಕರ್ ಅವರಿಂದ ಅನುಮತಿ ದೊರೆತ ಬಳಿಕ ಖರ್ಗೆ ಅವರು ಮಾತನಾಡಲಾರಂಭಿಸಿದಾಗ ಆಡಳಿತ

ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸಿದರು.
ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿ ಸದನದ ಬಾವಿಗಿಳಿಯಲಾರಂಭಿಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲ ಜೋರಾದ ಹಿನ್ನೆಲೆ ಸಭಾಪತಿ ಕಲಾಪವನ್ನು ಮುಂದೂಡಿದರು.

#RajyaSabha, #adjourned,

Articles You Might Like

Share This Article