ಕಾವೇರಿ ಪ್ರಾಧಿಕಾರಕ್ಕೆ ಸದಸ್ಯರಾಗಿ ರಾಕೇಶ್‍ಸಿಂಗ್ ನೇಮಕ

Rakesh-Sing

ಬೆಂಗಳೂರು, ಜೂ.4- ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರದಲ್ಲಿ ಕರ್ನಾಟಕದ ಪರವಾಗಿ ರಾಜ್ಯ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್‍ಸಿಂಗ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸುಪ್ರೀಂಕೋರ್ಟ್‍ನ ನಿರ್ದೇಶನದಂತೆ ಈಗಾಗಲೇ ಕೇಂದ್ರ ಸರ್ಕಾರ ಪ್ರಾಧಿಕಾರ ರಚಿಸಿದ್ದು, ಕಾವೇರಿ ನದಿ ಜಲಾನಯನ ಪ್ರದೇಶದ ರಾಜ್ಯಗಳಿಗೆ ತಮ್ಮ ಪರ ಸದಸ್ಯರ ಹೆಸರುಗಳನ್ನು ಸೂಚಿಸಲು ತಿಳಿಸಲಾಗಿತ್ತು.   ಅದರಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ಸಭೆ ನಡೆಸಿದ ನಂತರ ಅಂತಿಮವಾಗಿ ನೀರಾವರಿ ತಜ್ಞರೆಂದೇ ಹೆಸರು ಮಾಡಿರುವ, ಹಿರಿಯ ಐಎಎಸ್ ಅಧಿಕಾರಿ ರಾಕೇಶ್‍ಸಿಂಗ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Sri Raghav

Admin