ಮೈಸೂರು, ಫೆ.12-ಬಾಲಿವುಡ್ ಖ್ಯಾತ ನಟಿ ರಾಖಿ ಸಾವಂತ್ ಗೆ ವರದಕ್ಷಿಣೆ ಕಿರುಕುಳ ನೀಡಿ ಜೈಲು ಪಾಲಾಗಿರುವ ಆದಿಲ್ ಖಾನ್ ದುರ್ರಾನಿಗೆ ಮೈಸೂರಲ್ಲಿ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದಿಲ್ ವಿರುದ್ಧ ನಗರದ ಪೋಲಿಸ್ ಸ್ಟೇಷನ್ ನಲ್ಲಿ ಎಫ್‍ಐಆರ್ ದಾಖಲಾಗಿದೆ. ಇರಾನ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಈತನ ವಿರುದ್ಧ ದಾಖಲಾಗಿದೆ.
ಇರಾನ್ ದೇಶದಿಂದ ವಿಧ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರ, ವಂಚನೆ, ಬೆದರಿಕೆ, ಬ್ಲಾಕ್ ಮೇಲ್ ಮಾಡಿದ ಆರೋಪ ಆದಿಲ್ ಮೇಲೆ ಬಂದಿದೆ. ಈ ಸಂಬಂಧ ನಗರದ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಆದಿಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
BIG NEWS : 12 ರಾಜ್ಯಗಳ ರಾಜ್ಯಪಾಲರ ಬದಲಾವಣೆ
ಕಳೆದ 5 ವರ್ಷಗಳ ಹಿಂದೆ ಮೈಸೂರಿನಲ್ಲಿ ಡಾಕ್ಟರ್ ಆಫ್ ಫಾರ್ಮೆಸಿ ಮಾಡಲು ಬಂದ ಇರಾನ್ ದೇಶದ ವಿಧ್ಯಾರ್ಥಿಗೆ ಆದಿಲ್ ಖಾನ್ ಪರಿಚಯವಾಗಿದ್ದಾನೆ. ಮದುವೆ ಆಗುವುದಾಗಿ ನಂಬಿಸಿ ವಿವಿ ಪುರಂನಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಆದರೆ ಇತ್ತೀಚೆಗೆ ಅಂದರೆ 5 ತಿಂಗಳಿಂದ ಮದುವೆ ವಿಚಾರದಲ್ಲಿ ಆದಿಲ್ ಖಾನ್ ಮಾತು ತಪ್ಪಿದ್ದಾನೆ. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದಾಗ ಇಬ್ಬರೂ ಇರುವ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಆಕೆಗೆ ಕಳುಹಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಫ್ಲಾಟ್‍ಗೆ ನುಗ್ಗಿ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನದ ಸರ ದರೋಡೆ
ಇದರಿಂದ ಬೇಸತ್ತ ಇರಾನ್ ವಿಧ್ಯಾರ್ಥಿನಿ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನಟಿ ರಾಖಿ ಸಾವಂತ್ ನೀಡಿರುವ ದೂರಿನ ಬೆನ್ನ ಹಿಂದೆಯೇ ಆದಿಲ್ ಖಾನ್ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ.
Rakhi Sawant, husband, Adil Khan, accused, rape, Iranian, woman, FIR, filed, Mysore,