ರಕ್ಷಿತ್ ಶೆಟ್ಟಿ.. ಸ್ಯಾಂಡಲ್ ವುಡ್ ನಲ್ಲಿ ಒಂದಷ್ಟು ಭರವಸೆಯನ್ನು ಮೂಡಿಸಿರುವ ಹೆಸರು. ಸಿಂಪಲ್ ಆಗಿ ಒಂದು ಲವ್ ಸ್ಟೋರಿಯನ್ನು ತಂದು ಕಿರಿಕ್ ಪಾರ್ಟಿ ಮಾಡಿದ್ದ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 39 ವಸಂತಕ್ಕೆ ಕಾಲಿಟ್ಟಿರುವ ರಕ್ಷಿತ್ ಶೆಟ್ಟಿ ಬಗ್ಗೆ ಒಂದಿಷ್ಟು ಸ್ವಾರಸ್ಯಕರವೆನಿಸುವ ವಿಚಾರಗಳು ಇಲ್ಲಿವೆ.
ರಕ್ಷಿತ್ ಶೆಟ್ಟಿ ಮೂಲತಃ ಉಡುಪಿಯವರು. ಜೂನ್ 6-1983ರಂದು ಜನಿಸಿದರು. ವಿಧ್ಯಾಭ್ಯಾಸವನ್ನೆಲ್ಲಾ ತಮ್ಮೂರಿನಲ್ಲಿಯೇ ಮಾಡಿದ್ದರು. ಇಂಜಿನಿಯರಿಂಗ್ ಪದವಿ ಪೂರೈಸಿ, 2 ವರ್ಷಗಳ ಕಾಲ ಸಾಫ್ಟ್‌ವೇರ್ ಉದ್ಯೋಗಿಯಾಗಿಯೂ ಕೆಲಸ ಮಾಡಿದ್ದಾರೆ. ಆದರೆ ಸಿನಿಮಾರಂಗದ ಸೆಳೆತದಿಂದಾಗಿ ಈಗ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಅಭಿ-ಅವಿವಾ ವಿವಾಹ : ಯಾರೆಲ್ಲಾ ದುಬಾರಿ ಗಿಫ್ಟ್ ಕೊಟ್ರು ಗೊತ್ತಾ..?
ರಕ್ಷಿತ್ ಶೆಟ್ಟಿ 2010ರಲ್ಲಿ ಸಾಫ್ಟ್‌ವೇರ್ ಕೆಲಸ ಬಿಟ್ಟು ಸಿನಿಮಾರಂಗದಲ್ಲಿ ತೊಡಗಿಸಿಕೊಂಡರು. ನಮ್ ಏರಿಯಾದಲ್ಲೊಂದಿನ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ರಕ್ಷಿತ್ ಶೆಟ್ಟಿಗೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಬ್ರೇಕ್ ಕೊಟ್ಟಿತ್ತು. ಬಳಿಕ ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಶನ್ ನೊಗರಾಜ್, 777 ಚಾರ್ಲಿ ಚಿತ್ರಗಳು ಜನಪ್ರಿಯತೆ ತಂದುಕೊಟ್ಟವು. ನಟನೆ ಜೊತೆ ಜೊತೆಗೆ ನಿರ್ದೇಶಕ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿಗೆ ಹ್ಯಾಪಿ ಬರ್ತ್ ಡೇ
#RakshitShetty, #Birthday,