ಬೆಂಗಳೂರು, ಡಿ.26- ಆಂಧ್ರ ಪ್ರದೇಶದಿಂದ ರಕ್ತ ಚಂದನ ಮರಗಳನ್ನು ಕಳ್ಳಸಾಗಣೆ ಮಾಡಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿ 29 ಲಕ್ಷ ಮೌಲ್ಯದ ರಕ್ತ ಚಂದನ ತುಂಡುಗಳು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕೊಡಿಗೇನಹಳ್ಳಿ ನಿವಾಸಿಗಳಾದ ಎಜಾಜ್, ಶೌಖತ್ ಮತ್ತು ಇಮ್ತಿಯಾಜ್ ಬಂಧಿತ ಆರೋಪಿಗಳು.
ಆರೋಪಿಗಳು ಕರ್ನಾಟಕ, ತಮಿಳು ನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ರಕ್ತ ಚಂದನ ತುಂಡುಗಳನ್ನು ಆಂಧ್ರಪ್ರದೇಶದ ಕಾಡಿನಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಟಿಗೇನಹಳ್ಳಿ ಗ್ರಾಮದಲ್ಲಿ ಸಂಗ್ರಹಿಸಿದ್ದರು.
ಗ್ರಾಹಕರು ಬೇಕೆಂದಾಗ ಮಾರಾಟ ಮಾಡುವ ಸಲುವಾಗಿ ಟಾಟಾ ಏಸ್ ವಾಹನದಲ್ಲಿ ರಕ್ತ ಚಂದನ ಮರಗಳನ್ನು ತುಂಬಿಕೊಂಡು ಮಂತ್ರಿಮಾಲ್ ಬಳಿಯ ಬಿಬಿಎಂಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಮೂವರು ಆರೋಪಿಗಳು ಬಂದಿದ್ದಾರೆ.
ಮಿತಿಮೀರಿದ ಕೋವಿಡ್ ಕೇಸ್, ಚೀನಾದ ರಕ್ತಕ್ಕಾಗಿ ಹಾಹಾಕಾರ
ಈ ಬಗ್ಗೆ ಮಾಹಿತಿ ಪಡೆದು ಶೇಷಾದ್ರಿಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನದ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 364 ಕೆಜಿ 400 ಗ್ರಾಂ ತೂಕದ 11 ರಕ್ತ ಚಂದನದ ತುಂಡುಗಳು ಹಾಗೂ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶೇಷಾದ್ರಿಪುರಂ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
Raktha Chandan, Smuggling, Three Arrested, Bengaluru,