ಅಮಿತ್ ಶಾ ಭೇಟಿಯಾದ ರಾಮ್‍ಚರಣ್, ಚಿರಂಜಿವಿ

Social Share

ನವದೆಹಲಿ,ಮಾ.18-ಆರ್‍ಆರ್‍ಆರ್ ಚಿತ್ರದ ನಾಯಕ ರಾಮ್‍ಚರಣ್ ಹಾಗೂ ಅವರ ತಂದೆ ಮೆಗಾಸ್ಟಾರ್ ಚಿರಂಜಿವಿ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ.

ಆರ್‍ಆರ್‍ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದ್ದು, ಪ್ರಶಸ್ತಿ ಸ್ವೀಕರಿಸಿದ ನಂತರ ಭಾರತಕ್ಕೆ ಹಿಂತಿರುಗಿರುವ ರಾಮ್‍ಚರಣ್ ಅವರು ತಮ್ಮ ತಂದೆ ಚಿರಂಜಿವಿ ಅವರೊಂದಿಗೆ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

ರಾಮ್ ಚರಣ್ ಅವರು ಗೃಹ ಸಚಿವರಿಗೆ ಪುಷ್ಪಗುಚ್ಛ ಮತ್ತು ಸಾಂಪ್ರದಾಯಿಕ ರೇಷ್ಮೆ ಶಾಲು ನೀಡಿ ಸ್ವಾಗತಿಸಿದರು. ಅಮಿತ್ ಶಾ ಅವರು ರಾಮ್ ಚರಣ್‍ಗೆ ತಮ್ಮ ಹೃತ್ಪೂರ್ವಕ ಅಭಿನಂದನಾ ಸಂದೇಶವನ್ನು ನೀಡಿದರು ಮತ್ತು ಅವರಿಗೆ ಕೆಂಪು ರೇಷ್ಮೆ ಶಾಲು ನೀಡಿ ಗೌರವಿಸಿದ್ದಾರೆ.

ಉರಿಗೌಡ-ನಂಜೇಗೌಡ ಸಿನಿಮಾ ಮಾಡಲು ಮುಂದಾದ ಸಚಿವ ಮುನಿರತ್ನ : ಹೆಚ್ಡಿಕೆ ಕೆಂಡ

ಸಧ್ಯ, ಅಮಿತ್ ಶಾ ಅವರನ್ನು ಭೇಟಿಯಾಗಿರುವ ರಾಮ್‍ಚರಣ್ ಶೀಘ್ರದಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತದೊಂದಿಗೆ ಭಾರತಕ್ಕೆ ಹಿಂತಿರುಗಿರುವ ರಾಮ್‍ಚರಣ್ ಅವರು, ನನಗೆ ಸಂತೋಷವಾಗಿದೆ. ಎಲ್ಲರಿಗೂ ಧನ್ಯವಾದಗಳು, ನಾವು ಎಂಎಂ ಕೀರವಾಣಿ, ಎಸ್ ಎಸ್ ರಾಜಮಳಿ ಮತ್ತು ಚಂದ್ರಬೋಸ್ ಬಗ್ಗೆ ಹೆಮ್ಮೆಪಡುತ್ತೇವೆ. ಅವರ ಕಠಿಣ ಪರಿಶ್ರಮದಿಂದ ನಮಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಆರ್‍ಆರ್‍ಆರ್ ಅನ್ನು ವೀಕ್ಷಿಸಿದ ಮತ್ತು ‘ನಾಟು ನಾಟು’ ಹಾಡನ್ನು ಸೂಪರ್‍ಹಿಟ್ ಮಾಡಿದಕ್ಕಾಗಿ ಭಾರತದ ಉತ್ತರದಿಂದ ದಕ್ಷಿಣ ಮತ್ತು ಪೂರ್ವದಿಂದ ಪಶ್ಚಿಮ ಭಾಗದ ಎಲ್ಲಾ ಅಭಿಮಾನಿಗಳು ಮತ್ತು ಜನರಿಗೆ ನಾನು ಧನ್ಯವಾದಗಳು. ನಾಟು ನಾಟು ನಮ್ಮ ಹಾಡು ಅಲ್ಲ ಅದು ಭಾರತದ ಜನರ ಹಾಡು. ಆಸ್ಕರ್ ಪ್ರಶಸ್ತಿಗಾಗಿ ನಮಗೆ ಒಂದು ಮಾರ್ಗವನ್ನು ನೀಡಿತು, ಎಂದು ಅವರು ಹೇಳಿದರು.

#RamCharan, #Chiranjeevi, #Meet, #AmitShah, #OscarWin,

Articles You Might Like

Share This Article