ರಾಮದಾಸ್ -ಪ್ರತಾಪ್‍ಸಿಂಹ ನಡುವೆ ಗುಂಬಜ್ ಫೈಟ್

Social Share

ಮೈಸೂರು,ನ.16- ಸಂಸದ ಪ್ರತಾಪ್ ಸಿಂಹಗೆ ಶಾಸಕ ರಾಮದಾಸ್ ತಿರುಗೇಟು ನೀಡಿದ್ದಾರೆ. ಈ ಮೂಲಕ ಪ್ರತಾಪ್ ಸಿಂಹ ಏಟಿಗೆ ರಾಮದಾಸ್ ಎದಿರೇಟು ಕೊಟ್ಟಿದ್ದಾರೆ. ಮುಸ್ಲಿಂರ ಗುಂಬಜ್ ಮಾದರಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂದು ಪ್ರತಾಪ್ ಸಿಂಹ ವಿವಾದ ಹುಟ್ಟು ಹಾಕಿರುವ ಮೈಸೂರಿನ -ನಂಜನಗೂಡು-ಊಟಿ ರಸ್ತೆಯ ಬಸ್ ನಿಲ್ದಾಣಕ್ಕೆ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುತ್ತೂರು ಮಠದ ಆದಿ ಜಗದ್ಗುರು ಹಾಗೂ ಶಿವರಾತ್ರಿ ರಾಜೇಂದ್ರ ಶ್ರೀ ಫೋಟೋಗಳನ್ನು ರಾಮದಾಸ್ ಅಳವಡಿಸಿದ್ದಾರೆ.

ಬಿಜೆಪಿ ಪಕ್ಷದ ನಾಯಕರ ಹಾಗೂ ಸುತ್ತೂರು ಶ್ರೀ ಫೋಟೋ ಹಾಕಿರುವ ಕಾರಣ ಅವುಗಳನ್ನು ಮುಟ್ಟಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿ ಈಗ ಪ್ರತಾಪ್ ಸಿಂಹಗೆ ಎದುರಾಗಿದೆ. ಮೈಸೂರಿನ-ನಂಜನಗೂಡು-ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ಮುಂಭಾಗ ಈ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ.

BIG NEWS: ನ್ಯಾಟೊ ಸದಸ್ಯ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಗುಂಬಜ್‍ಗಳನ್ನು ಜೆಸಿಬಿ ಮೂಲಕ ಹೊಡೆದು ಹಾಕುವುದಾಗಿ ಪ್ರತಾಪ್ ಸಿಂಹ ಕೊಟ್ಟ ಡೆಡ್ ಲೈನ್ ಕೊನೆಯಾಗಿದೆ. ಪ್ರತಾಪ್ ಸಿಂಹ ಏನು ಮಾಡುತ್ತಾರೆ ಎಂದು ನೋಡಬೇಕು.

ಶಾಸಕ ರಾಮದಾಸ್ ಸ್ಪಷ್ಟನೆ : ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಸಂಬಂಧ ಈಗ ಮೈಸೂರಿನ ಬಿಜೆಪಿ ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ನೇರ ಫೈಟ್ ಆರಂಭವಾಗಿದೆ.
ಮೈಸೂರಿನ ಬಸ್ ನಿಲ್ದಾಣಗಳು ಮುಸ್ಲಿಂ ಶೈಲಿಯಲ್ಲಿ ಗುಂಬಜ್ ಮಾದರಿ ನಿರ್ಮಾಣ ಮಾಡಲಾಗಿದೆ ಎಂಬ ಪ್ರತಾಪ್ ಸಿಂಹ ಆರೋಪಕ್ಕೆ ರಾಮದಾಸ್ ತಿರುಗೇಟು ನೀಡಿದ್ದಾರೆ.

ಶ್ರದ್ದಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ವಿಕೃತ ಘಟನೆ ಬೆಳಕಿಗೆ..!

ಮೈಸೂರಿನ ಪಾರಂಪರಿಕ ಮಹತ್ವ ಸಾರಲು ಮೈಸೂರು ಅರಮನೆಯ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ ಮಸೀದಿ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ದು, ಮುಸ್ಲಿಂ ಗುತ್ತಿಗೆದಾರನಿಗೆ ನೀಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಿರುವ ಹುನ್ನಾರದ ಬಗ್ಗೆ ಪೊಲೀಸ್ ಕಮಿಷನರ್‍ಗೆ ದೂರು ಸಲ್ಲಿಸಲಾಗಿದೆ. ಪ್ರತಾಪ್ ಸಿಂಹ ಹೇಳಿರುವಂತೆ ರಾತ್ರೋರಾತ್ರಿ ಕಳಸ ನಿರ್ಮಾಣ ಮಾಡಿಲ್ಲ. ಯಾವುದೇ ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ರಾಮದಾಸ್ ತಿಳಿಸಿ ದ್ದಾರೆ.

10 ಲಕ್ಷ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಇದನ್ನು ಮಹದೇವ್ ಎಂಬ ಗುತ್ತಿಗೆದಾರನಿಗೆ ನೀಡಲಾಗಿದೆ. ಬಸ್ ನಿಲ್ದಾಣದ ವಿನ್ಯಾಸಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಲಿ. ಸಮಿತಿ ವರದಿಯಲ್ಲಿ ತಪ್ಪಿದ್ದರೆ ಬದಲಾವಣೆ ಮಾಡಲು ನಮ್ಮ ಅಭ್ಯಂತರ ಇಲ್ಲ ಎಂದುಶಾಸಕ ರಾಮದಾಸ್ ತಿಳಿಸಿದ್ದಾರೆ.

Articles You Might Like

Share This Article