ರಾಮನಗರದಲ್ಲಿ ಕಾಡಾನೆ ಪ್ರತ್ಯಕ್ಷ

Social Share

ರಾಮನಗರ, ನ.23- ಹೊರವಲಯದ ರಾಯರದೊಡ್ಡಿ ನಗರದ ಬೋಳಪ್ಪನ ಕೆರೆ ಬಳಿ ಒಂಟಿ ಆನೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೆರೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಯನ್ನು ನೋಡಲು ತಂಡೋಪ ತಂಡವಾಗಿ ಜನ ಸೇರುತ್ತಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

ಈ ನಡುವೆ ರಾಮನಗರದ ನಗರಸಭೆ ಅಧ್ಯಕ್ಷರ ಪತಿ ಲಕ್ಷ್ಮಿಪತಿ ಅವರು ಆನೆ ಓಡಿಸಲು ಹೋಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆನೆ ಅಟ್ಟಿಸಿಕೊಂಡು ಬಂದು ಸೊಂಡಿಲಿನಿಂದ ಎಸೆದಿದೆ. ಆದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜೈಲಲ್ಲಿ ಹೊಟ್ಟೆ ಬಿರಿಯೋಹಾಗೆ ತಿಂದು 8 ಕೆಜಿ ತೂಕ ಹೆಚ್ಚಿಸಿಕೊಂಡ ಸತ್ಯೇಂದ್ರ ಜೈನ್

ರಾಮನಗರದ ರಾಮಕೃಷ್ಣ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೆರೆಯ ಕನಕಪುರ ಕಡೆಯಿಂದ ಆನೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಅದನ್ನು ಮತ್ತೆ ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

Ramanagara, elephant, Bolappa, Lake,

Articles You Might Like

Share This Article