‘ರಾಮಚರಿತ’ ಟೀಕಿಸಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಒತ್ತಾಯ

Social Share

ಬಲ್ಲಿಯಾ,ಜ.24- ರಾಮಚರಿತಮಾನಗಳ ಕೆಲವು ಶ್ಲೋಕಗಳು ಸಾಮಾಜಿಕ ತಾರತಮ್ಯವನ್ನು ಉತ್ತೇಜಿಸುತ್ತವೆ ಎಂದು ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಹೇಳಿಕೆಯನ್ನು ಶಂಕರಾಚಾರ್ಯ ಪರಿಷತ್ತಿನ ಅಧ್ಯಕ್ಷ ಸ್ವಾಮಿ ಆನಂದ್ ಸ್ವರೂಪ್ ತೀವ್ರವಾಗಿ ಖಂಡಿಸಿದ್ದು, ಸಮಾಜವಾದಿ ನಾಯಕನ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ಅಗ್ಗದ ಪ್ರಚಾರ ಮತ್ತು ನಿರ್ದಿಷ್ಟ ಸಮುದಾಯದ ಮತವನ್ನು ಗಳಿಸುವ ಪ್ರಯತ್ನವಾಗಿ ಮೌರ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆನಂದ್ ಸ್ವರೂಪ್ ಟೀಕಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಮುಖ ಹಿಂದುಳಿದ ವರ್ಗಗಳ ನಾಯಕರಾಗಿರುವ ಮೌರ್ಯ, ಹಿಂದೂ ಧಾರ್ಮಿಕ ಗ್ರಂಥವಾದ ರಾಮಚರಿತಮಾನಸ್‍ನ ಕೆಲವು ಶ್ಲೋಕಗಳು ಜಾತಿಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಗೊಳಿಸುತ್ತವೆ. ಇವುಗಳನ್ನು ನಿಷೇಧಿಸಬೇಕು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಪಿಎಸ್‍ಐ ಪರೀಕ್ಷಾ ಅಕ್ರಮ ಆರೋಪಿಯಿಂದ ವಿಡಿಯೋ ಬಾಂಬ್..!

ಇದು ಉತ್ತರ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆನಂದ್ ಸ್ವರೂಪ್ ಅವರು, ಮೌಲಾನಾ ಸೇರಿ ಯಾವುದೇ ಮುಸ್ಲಿಂ ಹಿಂದೂ ಧಾರ್ಮಿಕ ಪುಸ್ತಕಗಳಾದ ರಾಮಚರಿತಮಾನಸ್ ಮತ್ತು ಗೀತೆಯನ್ನು ವಿರೋಧಿಸುವುದಿಲ್ಲ. ಆದರೆ ಹಿಂದುಗಳೇ ಅನಗತ್ಯ ಟೀಕೆ ಮಾಡಿ, ಓಲೈಕೆ ರಾಜಕಾರಣ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

2024ರಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಅನಿಯಂತ್ರಿತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಯೋಗಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಇಂತಹದಕ್ಕೆ ಕಡಿವಾಣ ಹಾಕಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ವಿದೇಶಿ ಶಕ್ತಿಗಳು ಶಾಂತಿ ಕದಡಲು ಪ್ರಯತ್ನ ನಡೆಸುತ್ತಿವೆ. ಅಂತಹವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಪ್ರತಿಪಾದಿಸಿದರು.

ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಇನ್ನೂ ನಿರ್ಧಾರವಾಗಿಲ್ಲ : ಜಿಲ್ಲಾಧಿಕಾರಿ

ವ್ಯಕ್ತಿ ತನ್ನ ಕಾರ್ಯಗಳಿಂದ ಶೂದ್ರ ಅಥವಾ ಬ್ರಾಹ್ಮಣನಾಗುತ್ತಾನೆ ಎಂದು ರಾಮಚರಿತಮಾನ್‍ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬ್ರಹ್ಮರ್ಷಿ ವಾಲ್ಮೀಕಿ ಶೂದ್ರನಾಗಿದ್ದನು. ಆದರೆ ಹಿಂದೂ ಸಮಾಜ ವಾಲ್ಮೀಕಿಯ ಪ್ರತಿಮೆಗಳನ್ನು ದೇವಾಲಯಗಳಲ್ಲಿ ಸ್ಥಾಪಿಸಿ, ಪೂಜಿಸುತ್ತದೆ ಎಂದು ಆನಂದ್ ಸ್ವರೂಪ್ ಹೇಳಿದರು.

Ramcharitmanas, remark, Swami Prasad Maurya,

Articles You Might Like

Share This Article