ವಿಜಯೇಂದ್ರ ವಿರುದ್ಧ ಪದೇ ಪದೇ ಅಪಸ್ವರ ಎತ್ತುವ ರಮೇಶ್‌ ಜಾರಕಿಹೊಳಿಗೆ ನಿಗೂಢ ವ್ಯಕ್ತಿಯ ಶ್ರೀರಕ್ಷೆ

ಬೆಂಗಳೂರು,ಸೆ.20- ಪಕ್ಷದ ರಾಜ್ಯ ಅಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ವಹಿಸಿಕೊಂಡ ಮೇಲೆ ಬಿಜೆಪಿ ಮುರಿದ ಮನೆಯಾಗಿದೆ. ಹಲವು ನಾಯಕರು ಪದೇ ಪದೇ ವಿಜಯೇಂದ್ರ ಬಗ್ಗೆ ಅಪಸ್ವರ ಎತ್ತುತ್ತಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ವಿಜಯೇಂದ್ರ ವಿರುದ್ಧ ಮುಗಿ ಬಿದ್ದಿದ್ದಾರೆ. ಈ ನಡುವೆ ಜಾರಕಿಹೊಳಿ ಬೆಂಬಲಕ್ಕೆ ಬಿಜೆಪಿಯ ಹಿರಿಯ ಉನ್ನತ ನಾಯಕರೊಬ್ಬರು ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ದಿವಂಗತ ಎಚ್.ಎನ್.ಅನಂತ್ಕುಮಾರ್ ನಾಯಕತ್ವದಲ್ಲಿ ಬಿಜೆಪಿಯ ಸುವರ್ಣ ಯುಗ ಹೊಂದಿತ್ತು ಎಂದು ರಮೇಶ್ ಜಾರಕಿಹೊಳಿ ಹೊಗಳಿರುವುದು ಪಕ್ಷದಲ್ಲಿ ಬೆಂಕಿಯ ಬಿರುಗಾಳಿಯನ್ನು ಎಬ್ಬಿಸಿದೆ. 2019ರವರೆಗೆ … Continue reading ವಿಜಯೇಂದ್ರ ವಿರುದ್ಧ ಪದೇ ಪದೇ ಅಪಸ್ವರ ಎತ್ತುವ ರಮೇಶ್‌ ಜಾರಕಿಹೊಳಿಗೆ ನಿಗೂಢ ವ್ಯಕ್ತಿಯ ಶ್ರೀರಕ್ಷೆ