ಈನಾಡು ಗ್ರೂಪ್‌ ಅಧ್ಯಕ್ಷ, ಪದ್ಮವಿಭೂಷಣ ರಾಮೋಜಿ ರಾವ್‌ ವಿಧಿವಶ

ಹೈದರಾಬಾದ್‌,ಜೂ.8- ತೀವ್ರ ಅನಾರೋಗ್ಯದಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈನಾಡು ಗ್ರೂಪ್‌ ಅಧ್ಯಕ್ಷರಾದ ಪದ್ಮವಿಭೂಷಣ ರಾಮೋಜಿ ರಾವ್‌ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಇದೇ ತಿಂಗಳ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ನವೆಂಬರ್‌ 16, 1936 ರಂದು ರಾಮೋಜಿ ರಾವ್‌ ಜನಿಸಿದ್ದರು. 1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಅವರು ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. … Continue reading ಈನಾಡು ಗ್ರೂಪ್‌ ಅಧ್ಯಕ್ಷ, ಪದ್ಮವಿಭೂಷಣ ರಾಮೋಜಿ ರಾವ್‌ ವಿಧಿವಶ