ಮಧ್ಯಪ್ರದೇಶಕ್ಕೆ 5 ರನ್ಗಳ ಮುನ್ನಡೆ
ಶಿವಮೊಗ್ಗ, ಫೆ.7- ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕದ ವಿರುದ್ಧ ಮಧ್ಯಪ್ರದೇಶ ತಂಡವು 5 ರನ್ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 311 ರನ್ಗಳಿಂದ ಪಂದ್ಯ ಆರಂಭಿಸಿದ ಮಧ್ಯ ಪ್ರದೇಶದ ವೆಂಕಟೇಶ್ ಐಯ್ಯರ್ ನಿನ್ನೆಯ ಮೊತ್ತಕ್ಕೆ 6 ರನ್ ಸೇರಿ 86 ರನ್ ಗಳಿಸಿ ರೋನಿತ್ಮೋರೆಗೆ ವಿಕೆಟ್ ಒಪ್ಪಿಸಿದರು.
ನಂತರ ಇನ್ನಿಂಗ್ಸ್ ಕಟ್ಟುವ ಹೊಣೆಯನ್ನು ಹೊತ್ತುಕೊಂಡ ಅದಿತ್ಯ ಶ್ರೀವಾಸ್ತವ ಕರ್ನಾಟಕದ ಬೌಲರ್ಗಳನ್ನು ಕಾಡಿ 192 ರನ್ ಗಳಿಸಿ ಅಂತಿಮ ಬ್ಯಾಟ್ಸ್ಮನ್ ಆಗ ಔಟ್ ಆಗುವ ಮೂಲಕ ತಂಡದ ಮೊತ್ತವನ್ನು 431 ರನ್ಗಳಿಗೆ ಹಿಗ್ಗಿಸುವ ಮೂಲಕ 5 ರನ್ಗಳ ಮುನ್ನಡೆ ದೊರಕಿಸಿಕೊಟ್ಟರು. ಕರ್ನಾಟಕ ಪರ ಅಭಿಮನ್ಯು ಮಿಥುನ್ 3, ರೋನಿತ್ ಮೋರೆ, ಕೆ.ಗೌತಮ್ 2, ಶ್ರೇಯಾಸ್ ಗೋಪಾಲ್, ಪ್ರತೀಕ್ ಜೈನ್ 1 ವಿಕೆಟ್ ಕಬಳಿಸಿದರು.
Facebook Comments