ಯುವರಾಜ್‍ಸಿಂಗ್ ಭರ್ಜರಿ ಬೌಲಿಂಗ್, ಕರ್ನಾಟಕ 481 ರನ್‍ಗಳಿಗೆ ಅಲೌಟ್

Social Share

ಚೆನ್ನೈ, ಫೆ. 18- ರೈಲ್ವೇಸ್ ಬೌಲರ್ ಯುವರಾಜ್‍ಸಿಂಗ್ (5 ವಿಕೆಟ್)ರ ಮಾರಕ ಬೌಲಿಂಗ್ ಎದುರು ದಿಟ್ಟವಾಗಿ ಬ್ಯಾಟಿಂಗ್ ನಡೆಸಿದ ಕರ್ನಾಟಕದ ಬ್ಯಾಟ್ಸ್‍ಮನ್‍ಗಳು ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ 481 ರನ್‍ಗಳನ್ನು ಗಳಿಸಿ ಅಲೌಟ್ ಆಯಿತು.
ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 392 ಗಳಿಸಿದ್ದ ಕರ್ನಾಟಕದ ಪರ ಇಂದು ಬ್ಯಾಟಿಂಗ್ ಆರಂಭಿಸಿದ ಕೃಷ್ಣಮೂರ್ತಿ ಸಿದ್ಧಾರ್ಥ್ ( 146 ರನ್, 18 ಬೌಂಡರಿ, 2 ಸಿಕ್ಸರ್) ಹಾಗೂ ಶ್ರೇಯಾಸ್ ಗೋಪಾಲ್( 19 ರನ್, 3 ಬೌಂಡರಿ) ಅವರು ತಂಡದ ಮೊತ್ತವನ್ನು 400 ರ ಗಡಿ ಮುಟ್ಟಿಸಿ ಔಟಾದರು.
# ಗೌತಮ್ ಅರ್ಭಟ:
ಸಿದ್ಧಾರ್ಥ್ ಹಾಗೂ ಶ್ರೇಯಾಸ್ ಗೋಪಾಲ್ ಔಟಾದರೂ ಕೂಡ ಅಲ್‍ರೌಂಡರ್ ಕೃಷ್ಣಪ್ಪ ಗೌತಮ್ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಬ್ಯಾಟಿಂಗ್ ನಡೆಸಿ ಕೇವಲ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‍ಗಳ ಸಹಿತ 52 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 481 ರನ್‍ಗಳಿಗೆ ಮುಟ್ಟಿಸಿ ಅಂತಿಮ ಆಟಗಾರನಾಗಿ ಯುವರಾಜ್‍ಸಿಂಗ್ ಬೌಲಿಂಗ್‍ನಲ್ಲಿ ಔಟಾದರು.
ರೈಲ್ವೇಸ್ ಪರ ಯುವರಾಜ್‍ಸಿಂಗ್ 5 ವಿಕೆಟ್‍ಗಳನ್ನು ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಿವಂ ಚೌದರಿ 2, ಅವಿನೇಶ್ ಯಾದವ್, ಅಮಿತ್‍ಮಿಶ್ರಾ ತಲಾ 1 ವಿಕೆಟ್ ಕಬಳಿಸಿದರು.
# ರೈಲ್ವೇಸ್ ಉತ್ತಮ ಆರಂಭ:
ತಮ್ಮ ಮೊದಲ ಇನ್ನಿಂಗ್ಸ್ ಆರಂಭಿಸಿರುವ ರೈಲ್ವೇಸ್ ಕೂಡ ಉತ್ತಮ ಆರಂ¨s ಕಂಡಿದ್ದು ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 9 ಓವರ್‍ಗಳಲ್ಲಿ 38 ರನ್ ಗಳಿಸಿತ್ತು.

Articles You Might Like

Share This Article