ಮನೀಶ್‍ಪಾಂಡೆ ಭರ್ಜರಿ ಶತಕ, ಕರ್ನಾಟಕ 445ಕ್ಕೆ ಸರ್ವಪತನ..

Social Share

ಆಲೂರು, ಜ. 12- ಮನೀಶ್ ಪಾಂಡೆಯ ಆಕರ್ಷಕ ಶತಕ ( 101 ರನ್) ಹಾಗೂ ವಿದ್ವತ್ ಕಾವೇರಪ್ಪ (37 ರನ್)ರ ಸ್ಪೋಟಕ ಆಟದ ನೆರವಿನಿಂದಾಗಿ ಕರ್ನಾಟಕ ತಂಡವು ರಾಜಸ್ಥಾನ್ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ 445 ರನ್‍ಗಳಿಗೆ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದಾರೆ.

ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ 380 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕದ ಪರ ಇಂದು ಇನ್ನಿಂಗ್ಸ್ ಆರಂಭಿಸಿದ ಮನೀಶ್ ಪಾಂಡೆ, ರಾಜಸ್ಥಾನದ ಬೌಲರ್‍ಗಳನ್ನು ಬೆಂಡೆತ್ತಿ 131 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಸೂತುರ್‍ರ ಬೌಲಿಂಗ್‍ನಲ್ಲಿ ಚೆಂಡನ್ನು ಬೌಂಡರಿಗಟ್ಟುವ ಆತುರದಲ್ಲಿ ವಿಕೆಟ್ ಕೀಪರ್ ಸಂಪ್ರೀತ್ ಜೋಶಿಗೆ ಕ್ಯಾಚ್ ನೀಡಿ ಹೊರ ನೀಡಿದರು.

ಮನೀಶ್ ಪಾಂಡೆ ಔಟಾಗುತ್ತಿದ್ದಂತೆ ಕ್ರೀಸ್‍ಗಿಳಿದ ಕೃಷ್ಣಪ್ಪ ಗೌತಮ್ (7 ರನ್) ಬೌಂಡರಿ ಗಳಿಸಿ ಗಮನ ಸೆಳೆದರೂ ಚೌಂಡರಿ ಬೌಲಿಂಗ್‍ನಲ್ಲಿ ಸಂಪ್ರೀತ್ ಜೋಶಿ ಹಿಡಿದ ಅದ್ಭುತ ಕ್ಯಾಚ್‍ನಿಂದಾಗಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರು.
ತಮ್ಮ ಜೀವನಶ್ರೇಷ್ಠ ಪ್ರದರ್ಶನ ನೀಡಿದ ವೇಗಿ ವಿದ್ವತ್ ಕಾವೇರಪ್ಪ 58 ಎಸೆತಗಳನ್ನು ಎದುರಿಸಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ ಅಂತಿಮವಾಗಿ ಮೈದಾನ ತೊರೆದರು.

ನಾವು ಒಟ್ಟಾದರೆ ಜಾಗತಿಕ ಅಭಿವೃದ್ಧಿಯ ಚಾಲಕರಾಗಲು ಸಾಧ್ಯ: ಪ್ರಧಾನಿ ಮೋದಿ

ಕರ್ನಾಟಕ ತಂಡವು ಪ್ರಥಮ ಇನ್ನಿಂಗ್ಸ್‍ನಲ್ಲಿ 445 ರನ್‍ಗಳಿಸಿ 316 ರನ್‍ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿತು. ರಾಜಸ್ಥಾನ್ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ ಕರ್ನಾಟಕದ ಬೌಲರ್‍ಗಳ ಎದುರು ಮಂಕಾಗಿ 129 ರನ್‍ಗಳಿಗೆ ಅಲೌಟ್ ಆಗಿತ್ತು.

ರಾಜಸ್ಥಾನದ ಪರ ಅಂಕಿತ್ ಚೌಧರಿ ಹಾಗೂ ಮಾನ್ವವ್ ಸೂತುರ್ ತಲಾ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರೆ, ಅರಾಫತ್‍ಖಾನ್ 2 ವಿಕೆಟ್ ಕೆಡವಿದರು.

Articles You Might Like

Share This Article