ಶೆಲ್ಡನ್ ಜಾಕ್ಸನ್- ಅರ್ಪಿತ್ ಸ್ಪೋಟಕ ಆಟ: ಕರ್ನಾಟಕಕ್ಕೆ ಆಘಾತ

Social Share

ಬೆಂಗಳೂರು, ಫೆ. 10- ಸೌರಾಷ್ಟ್ರ ಹಾಗೂ ಕರ್ನಾಟಕ ನಡುವೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇನ್ನಿಂಗ್ಸ್ ಹಿನ್ನಡೆ ಆಘಾತ ಅನುಭವಿಸುವ ಭೀತಿಯಲ್ಲಿ ಮಯಾಂಕ್ ಅಗರ್‍ವಾಲ್ ಪಡೆ ಸಿಲುಕಿದೆ.

ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ 76 ರನ್ ಕಳೆದುಕೊಂಡು ಇನ್ನಿಂಗ್ಸ್ ಭೀತಿಗೆ ಸಿಲುಕಿದ ಸೌರಾಷ್ಟ್ರ ತಂಡವು ಇಂದು ಆರಂಭದಲ್ಲೇ ವಿಶ್ವರಾಜ್ ಜಡೇಜಾ (22 ರನ್, 4 ಬೌಂಡರಿ) ಅವರ ವಿಕೆಟ್ ಕಬಳಿಸುವ ಮೂಲಕ ವಿದ್ವತ್ ಕಾವೇರಪ್ಪ ಮುನ್ನಡೆ ತಂದುಕೊಟ್ಟರು.

ಶೆಲ್ಡನ್ ಜಾಕ್ಸನ್ ಶತಕ:
ವಿಶ್ವರಾಜ್ ಜಡೇಜಾರ ವಿಕೆಟ್ ಉರುಳಿದರೂ ಸ್ಪೋಟಕ ಆಟ ಪ್ರದರ್ಶಿಸಿದ ಶೆಲ್ಡನ್ ಜಾಕ್ಷನ್ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ನಾಯಕ ಅರ್ಪಿತ್ ವಿಶ್ವವಾಡ ಉತ್ತಮ ಸಾಥ್ ನೀಡಿದರು.

ಪತ್ರಿಕೆ ಮುದ್ರಣಕ್ಕೆ ಹೋಗುವ ಸಮಯಕ್ಕೆ ಸೌರಾಷ್ಟ್ರ 3 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದ್ದು ಶೆಲ್ಡನ್ ಜಾಕ್ಸನ್ 20 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 130 ರನ್ ಸಿಡಿಸಿ ಕ್ರೀಸ್‍ನಲ್ಲಿದ್ದರೆ, ಇವರಿಗೆ ಉತ್ತಮ ಸಾಥ್ ನೀಡಿರುವ ಅರ್ಪಿತ್ ವಾಸಾದೇವ 10 ಬೌಂಡರಿಗಳೊಂದಿಗೆ 65 ರನ್ ಗಳಿಸಿದ್ದು ಪ್ರಥಮ ಇನ್ನಿಂಗ್ಸ್ ಪಡೆಯುವ ಕಾತರರದಲ್ಲಿದ್ದಾರೆ.

Ranji Trophy, Semi Final, Bengal, Karnataka,

Articles You Might Like

Share This Article