ಸತತ ಶತಕ ಸಿಡಿಸಿದ ಗಮನ ಸೆಳೆದ ಯಶ್

Social Share

ಗುವಾಹಟಿ, ಫೆ. 20- ಅಂಡರ್ 19 ವಿಶ್ವಕಪ್ ನಾಯಕ ಯಶ್ ಧೂಳ್ ಅವರು ತಮ್ಮ ಪಾದಾರ್ಪಣೆ ರಣಜಿ ಪಂದ್ಯದಲ್ಲೇ ಶತಕಗಳ ಮೇಲೆ ಶತಕ ಗಳಿಸುವ ಮೂಲಕ ಬಿಸಿಸಿಐನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗುವಾಹಟಿಯಲ್ಲಿ ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯಾವಳಿಯ ಮೊದಲ ಇನ್ನಿಂಗ್ಸ್‍ನಲ್ಲೇ ತಮ್ಮ ಸೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಂಡರ್ 19 ವಿಶ್ವ ಕಪ್ ವಿಜೇತ ಭಾರತ ನಾಯಕ ಯಶ್ ಧೂಳ್ ಅವರು ತಮಿಳುನಾಡಿನ ಸ್ಪಿನ್ ಹಾಗೂ ವೇಗದ ಬೌಲರ್‍ಗಳನ್ನು ದಂಡಿಸುವ ಮೂಲಕ 150 ಎಸೆತಗಳಲ್ಲೇ 18 ಬೌಂಡರಿಗಳನ್ನು ಸಿಡಿಸುವ ಮೂಲಕ 113 ರನ್‍ಗಳನ್ನು ಗಳಿಸುವ ಮೂಲಕ ಮಿಂಚಿದ್ದರು.
ಎರಡನೇ ಇನ್ನಿಂಗ್ಸ್‍ನಲ್ಲೂ ಅದೇ ಸೋಟಕ ಆಟವನ್ನು ಮುಂದುವರೆಸಿರುವ ಯಶ್ ಧೂಳ್ ಅವರು ಮೊದಲ ಇನ್ನಿಂಗ್ಸ್‍ಗಿಂತ ಎರಡನೇ ಇನ್ನಿಂಗ್ಸ್‍ನಲ್ಲಿ ಪ್ರಬುದ್ಧ ಟೆಸ್ಟ್ ಆಟಗಾರನಂತೆ ಬ್ಯಾಟ್ ಬೀಸುತ್ತಾ ತಂಡಕ್ಕೆ ಆಸರೆಯಾಗಿದ್ದಾರೆ.
ಯಶ್ ಧೂಳ್ ಅವರು ಎರಡನೇ ಇನ್ನಿಂಗ್ಲ್‍ನಲ್ಲಿ ಆರಂಭಿಕ ಆಟಗಾರ ಧ್ರುವಶೌರ್ಯರೊಂದಿಗೆ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ನೆರವಾಗಿದ್ದು, ಮೊದಲ ವಿಕೆಟ್‍ಗೆ 200ಕ್ಕೂ ಹೆಚ್ಚು ಮೊತ್ತದ ಜೊತೆಯಾಟ ನೀಡುವ ಮೂಲಕ ಗಮನ ಸೆಳೆದರು.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ನವದೆಹಲಿ ತಂಡವು 61 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 228 ರನ್ ಗಳಿಸಿದ್ದು, ಆರಂಭಿಕ ಆಟಗಾರರಾದ ಯಶ್ ಧೂಳ್(113ರನ್, 14 ಬೌಂಡರಿ, 1 ಸಿಕ್ಸರ್) ಹಾಗೂ ಧ್ರುವಶೌರ್ಯ (107 ರನ್, 13 ಬೌಂಡರಿ) ಗಳಿಸಿ ಕ್ರೀಸ್‍ನಲ್ಲಿದ್ದರು.
ಅಂತಿಮ ದಿನವಾಗಿರುವುದರಿಂದ ನವದೆಹಲಿ ಹಾಗೂ ತಮಿಳುನಾಡು ವಿರುದ್ಧದ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೂ ಕೂಡ ಎರಡು ಇನ್ನಿಂಗ್ಸ್‍ನಲ್ಲಿ ಶತಕ ಗಳಿಸುವ ಮೂಲಕ ಗಮನ ಸೆಳೆದಿರುವ ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಯಶ್ ಧೂಳ್ ಅವರು ನವದೆಹಲಿ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಶೀಘ್ರವೇ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಜಿಗಿಯುವ ಸೂಚನೆಯನ್ನು ನೀಡಿದ್ದಾರೆ.

Articles You Might Like

Share This Article