ಜೈಸಲ್ಮೇರ್ (ರಾಜಸ್ತಾನ ), ಆ. 18 -ತನ್ನ ಲೈವ್-ಇನ್ ಸಂಬಂಧ ಮರೆಮಾಚಿ ಮಹಿಳೆ ಅತ್ಯಾಚಾರ ದೂರು ದಾಖಲಿಸಿದ್ದರಿಂದ ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆಯ ಹೊರಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸ ಮೂಲ ಪ್ರಕಾರ ದೇವಾ ಗ್ರಾಮದ ನಿವಾಸಿ ಗೋರ್ಧನ್ ರಾಮ್ ಮಾಲಿ(50 ವರ್ಷದ ) ಮೃತ ವ್ಯಕ್ತಿಯಾಗಿದ್ದಾರೆ.
ಎಫ್ಐಆರ್ ದಾಖಲಿಸಿದ ಒಂದು ದಿನದ ನಂತರ, ಕೊತ್ವಾಲಿ ಪೊಲೀಸ್ ಠಾಣೆಯ ಹೊರಗೆ ಬೆಂಕಿ ಹಚ್ಚಿಕೊಂಡಿದ್ದರು, ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಜೋಧ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ವೇಳೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಮಹಿಳಾ ಠಾಣೆ ಅಧಿಕಾರಿ ತೇಜ್ ಕರಣ್ ಪರಿಹಾರ್ ತಿಳಿಸಿದ್ದಾರೆ.
ವಿಪರ್ಯಸವೆಂದರೆ ಕಳೆದ ಆಗಸ್ಟ್ 1 ರಂದು ಮಹಿಳೆ ಮತ್ತು ಆಕೆಯ ಸಹೋದರರ ವಿರುದ್ಧ ಮೃತ ರಾಮ್ ಮಾಲಿ ಕಳ್ಳತನ ಮತ್ತು ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದರು.ಆದರೆ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿ ವಿವಿಧ ಆರೋಪ ಮಾಡಿದ ನಂತರ ಆತಂಕಕ್ಕೆ ಒಳಗಾಗಿದ್ದರು.