ಕೆಲಸ ಕೊಡುವುದಾಗಿ ಕರೆಸಿಕೊಂಡು ಯುವತಿಯ ರೇಪ್

Social Share

ನೆಲಮಂಗಲ,ಜ.22- ಉದ್ಯೋಗ ಕೊಡುವುದಾಗಿ ಹೇಳಿ ಯುವತಿಯನ್ನು ಕರೆಸಿ ಅತ್ಯಾಚಾರವೆಸಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಹರ್ಷಗೌಡ (26) ಎಂಬಾತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಆರೇಳು ವರ್ಷಗಳಿಂದ ಹರ್ಷಗೌಡಗೆ ಒಂದೇ ಏರಿಯಾದಲ್ಲಿದ್ದ ಯುವತಿ ಪರಿಚಿತರಾಗಿದ್ದು, ಆತ್ಮೀಯರಾಗಿದ್ದರು ಎನ್ನಲಾಗಿದೆ. ಈ ನಡುವೆ ಜ.16ರಂದು ಕೆಲಸ ಕೊಡುವುದಾಗಿ ಹೇಳಿ ಹರ್ಷಗೌಡ ಯುವತಿಯನ್ನು ಕರೆಸಿಕೊಂಡಿದ್ದಾನೆ.
ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿಕೊಂಡು ಕಾಯುತ್ತಿದ್ದಾಗ ಸ್ಕೂಟರ್‍ನಲ್ಲಿ ಯುವತಿ ಬಂದಿದ್ದು, ಒಂದು ಗಂಟೆಗೂ ಹೆಚ್ಚುಕಾಲ ಕಾರಿನಲ್ಲಿ ಕುಳಿತು ಇವರಿಬ್ಬರೂ ಮಾತನಾಡಿದ್ದಾರೆ.
ಕಾರಿನಲ್ಲಿ ಏನು ಮಾತುಕತೆಯಾಯಿತೋ ಗೊತ್ತಲ್ಲ. ನಂತರ ಕಾರಿನಿಂದ ಇಳಿದು ಸೀದಾ ಮಾದನಾಯಕನಹಳ್ಳಿ ಠಾಣೆಗೆ ಹೋಗಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ನೀಡಿದ್ದಾರೆ. ಯುವತಿಯ ವರ್ತನೆ ಪೊಲೀಸರಿಗೆ ಅನುಮಾನ ತಂದಿದೆ.
ಪೊಲೀಸರು ಯುವತಿಯನ್ನು ಸಮಾಧಾನಪಡಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿ ಕಳುಹಿಸಿದ್ದಾರೆ.ಪೊಲೀಸರು ತನ್ನ ದೂರು ಸ್ವೀಕರಿಸಿಲ್ಲ ಎಂದು ನಿನ್ನೆ ಮತ್ತೆ ಮಹಿಳಾ ಸಂಘಟನೆಯವರ ಜತೆ ಬಂದು ಯುವತಿ ದೂರು ನೀಡಿದ್ದಾರೆ.  ಸರ್ಕಲ್ ಇನ್ಸ್‍ಪೆಕ್ಟರ್ ಮಂಜುನಾಥ್ ಪ್ರಕರಣ ದಾಖಲಿಸಿಕೊಂಡು ದೂರಿನ ಸತ್ಯಾಸತ್ಯತೆ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Articles You Might Like

Share This Article