ಮುರುಘಾ ಶರಣರ ಲೈಂಗಿಕ ಕಿರುಕುಳ ಕೇಸ್, ಮಠದಲ್ಲಿ ಸ್ಥಳ ಮಹಜರು

Social Share

ಚಿತ್ರದುರ್ಗ,ನ.5- ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುರುಘಾ ಶರಣರ ವಿರುದ್ಧ ಪೊಕ್ಸೊ ಕಾಯ್ದೆಯಡಿ 2ನೇ ಪ್ರಕರಣ ದಾಖಲಾಗಿರುವ ಸಂಬಂಧ ತನಿಖಾಧಿಕಾರಿಗಳು ಮುರುಘಾ ಮಠದಲ್ಲಿಂದು ಸ್ಥಳ ಮಹಜರು ನಡೆಸಿದರು.

ಡಿವೈಎಸ್ಪಿ ನೇತೃತ್ವದಲ್ಲಿ ಜೈಲಿನಲ್ಲಿರುವ ಮುರುಘಾ ಶ್ರೀಗಳನ್ನು ಕರೆತಂದ ತನಿಖಾ ತಂಡ ಶ್ರೀಗಳು ವಾಸಿಸುತ್ತಿದ್ದ ಕೊಠಡಿ, ವಿದ್ಯಾರ್ಥಿಗಳು ತಂಗಿದ್ದ ಹಾಸ್ಟೆಲ್ ಸೇರಿದಂತೆ ಮತ್ತಿತರ ಕಡೆ ಮಹಜರು ನಡೆಸಿದರು. ಮೈಸೂರು ಒಡನಾಡಿ ಸಂಸ್ಥೆಯವರು ನೀಡಿದ ದೂರಿನ ಮೇರೆಗೆ ಮುರುಘಾ ಶ್ರೀಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಮಹಜರು ಮಾಡಲಾಯಿತು.

ಪೊಲೀಸರು ಮಹಜರು ನಡೆಸುತ್ತಿದ್ದ ವೇಳೆ ಬಸವ ಮಾಚಿದೇವ ಸ್ವಾಮಿಗಳು ಮಠದ ಒಳಗೆ ಬರಲು ಪ್ರಯತ್ನಿಸಿದರು. ಆದರೆ ಇದಕ್ಕೆ ಅವಕಾಶ ಕೊಡದ ತನಿಖಾ ತಂಡ ಮಹಜರು ನಡೆಯುತ್ತಿರುವ ವೇಳೆ ಒಳಗೆ ಹೋಗುವುದು ಸೂಕ್ತವಲ್ಲ. ದಯವಿಟ್ಟು ತನಿಖೆಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸಮ್ಮತಿಸಿದ ಬಸವ ಮಾಚಿದೇವ ಸ್ವಾಮೀಜಿಗಳು ಮಠದಿಂದ ಹೊರಹೋದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ವಿವಿಧ ಸ್ಥಳಗಳಲ್ಲಿ ಮಹಜರು ನಡೆಸಿ ಬಳಿಕ ಶ್ರೀಗಳನ್ನು ಕರೆದೊಯ್ಯಲಾಯಿತು.

ಶಾಲೆಗಳಲ್ಲಿ ಧ್ಯಾನ ವಿರೋಧಿಸಿದ ಸಿದ್ದುಗೆ ಸಚಿವ ಬಿ.ಸಿ.ನಾಗೇಶ್ ತಿರುಗೇಟು

ಈಗಾಗಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಕ್ಸೊ ಕಾಯ್ದೆ ದಾಖಲಾಗಿತ್ತು. ಇದೀಗ ಮುರುಘಾ ಶ್ರೀಗಳ ವಿರುದ್ಧ ಪುನಃ ಅದೇ ಆರೋಪ ಬಂದಿದ್ದು, ತನಿಖಾಧಿಕಾರಿಗಳು ಮತ್ತೆ ಸ್ಥಳ ಮಹಜರು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

Articles You Might Like

Share This Article