ರ‍್ಯಾಪಿಡ್ ಬೈಕ್ ಬ್ಯಾನ್‍ಗೆ ಒತ್ತಾಯಿಸಿ ಆಟೋ ಮುಷ್ಕರ

Social Share

ಬೆಂಗಳೂರು, ಡಿ.29- ರ‍್ಯಾಪಿಡ್ ಬೈಕ್, ಟ್ಯಾಕ್ಸಿ ಆ್ಯಪ್ ಬ್ಯಾನ್ ಮಾಡಬೇಕು. ಬೌನ್ಸ್ ಎಲೆಕ್ಟ್ರಿಕ್ ಬೈಕ್‍ಗೆ ನೀಡಿರುವ ಅನುಮತಿ ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರು ನಗರದ ಫ್ರೀಡಂಪಾರ್ಕ್‍ನಲ್ಲಿಂದು ಪ್ರತಿಭಟನೆ ನಡೆಸಿದರು.

ಸಾವಿರಾರು ಆಟೋ ಚಾಲಕರು ಫ್ರೀಡಂಪಾರ್ಕ್ ಬಳಿ ಸಮಾವೇಶಗೊಂಡು ರ್ಯಾಪಿಡ್ ಬೈಕ್, ಟ್ಯಾಕ್ಸಿಗಳಿಂದ ನಮಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕೆಂಪೇಗೌಡ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ರ್ಯಾಲಿ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು. ಸುಮಾರು 21ಕ್ಕೂ ಹೆಚ್ಚು ವಿವಿಧ ಆಟೋ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದವು.
ಆಟೋ ಸಂಘಟನೆಗಳ ಮುಷ್ಕರ ನಡೆದರೂ ಬೆಂಗಳೂರಿನಲ್ಲಿ ಎಂದಿನಂತೆ ಆಟೋ ಸೇವೆ ಮುಂದುವರೆದಿತ್ತು.

ಹೊಸ ವರ್ಷಾಚರಣೆಗೆ ಕಟ್ಟೆಚ್ಚರ: 10,000 ಪೊಲೀಸರ ಕಣ್ಗಾವಲು

ಬೌನ್ಸ್ ಎಲೆಕ್ಟ್ರಿಕಲ್ ಬೈಕ್‍ಗೆ ನೀಡಿರುವ ಅನುಮತಿ ರದ್ದು ಮಾಡಬೇಕೆಂದು ಸರ್ಕಾರಕ್ಕೆ ಡೆಡ್‍ಲೈನ್ ನೀಡಲಾಗಿತ್ತು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು ಎಂದು ಸಂಘಟನೆ ಮುಖಂಡರು ತಿಳಿಸಿದ್ದಾರೆ.

rapido bike, ban, auto drivers, protest, Bangalore,

Articles You Might Like

Share This Article