ಬೆಂಗಳೂರು, ಫೆ.23- ಬಾಡಿಗೆ ವಾಹನ ಚಾಲಕರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‍ಗಳಾದ ರ್ಯಾಪಿಡೊ ( Rapido Bike Taxi ) ನಿಷೇಧಿಸಿ ಆದೇಶ ಹೊರಡಿಸಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಈ ಕುರಿತು ಆದೇಶ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ಯಾವುದೇ ಕಂಪೆನಿಗಳಿಗೆ ಬಾಡಿಗೆಗೆ ನೀಡಬಾರದು, ಒಂದು ವೇಳೆ ಬಾಡಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು.
ಆ್ಯಪ್ ಆಧಾರಿತ ಬೈಕ್, ಟ್ಯಾಕ್ಸಿ ಸೇವೆ ಬಂದ್ ಮಾಡಲಾಗಿದ್ದು, ಒಂದು ವೇಳೆ ನಿಯಮ ಮೀರಿ ಸೇವೆ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರಾದೇಶಿಕ ಸಾರಿಗೆ ಅಕಾರಿಗಳು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ 500ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದರು. ವೈಯಕ್ತಿಕ ಚಾಲಕರಿಗೆ 10,500 ರೂ.ವರೆಗೆ ದಂಡ ವಿಧಿಸಿದ್ದರು.
ಇದೇ ವೇಳೆ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯಿಂದ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಟ್ಯಾಕ್ಸಿ, ಆಟೋ ರಿಕ್ಷಾ ಚಾಲಕರು ಆರೋಪಿಸಿದ್ದಾರೆ.ಇದಾದ ಬಳಿಕ ಸರ್ಕಾರ ಆ್ಯಪ್ ಆಧಾರಿತ ರ್ಯಾಪಿಡೊ ನಿಷೇಧಿಸಿದೆ.
