ರಾಪಿಡೊಬೈಕ್ ಸವಾರನ ವಿರುದ್ಧ ಕಲಾವಿದೆ ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ

Social Share

ಬೆಂಗಳೂರು, ನ.16- ರಾಪಿಡೊ ಬೈಕ್ ಸವಾರನಿಂದ ತಮಗೆ ಕಿರುಕುಳವಾಗಿದೆ ಎಂದು ಕಲಾವಿದೆಯೊಬ್ಬರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರು ಆರೋಪದಲ್ಲಿ ಹುರುಳಿಲ್ಲ ಎಂದು ಪತ್ತೆ ಹಚ್ಚಿದ್ದಾರೆ.

ಅಕ್ಟೋಬರ್ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಆರ್ ಪುರಂನ ಹೂಡಿಯಲ್ಲಿ ವಾಸವಿರುವ 21 ವರ್ಷದ ಕಂಠದಾನ ಕಲಾವಿದೆ ದೂರು ನೀಡಿದ್ದಾರೆ. ಅಕ್ಟೋಬರ್ 30ರಂದು ಕೆಲಸ ಮುಗಿಸಿ ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಹೋಗಲು ರ್ಯಾಪಿಡೊ ಬೈಕ್ ಟ್ಯಾಕ್ಸಿಯನ್ನು ಆ್ಯಪ್ ನಲ್ಲಿ ಬುಕ್ ಮಾಡಲಾಗಿತ್ತು.

ರ್ಯಾಪಿಡೊ ಬೈಕ್ನ ಸವಾರ ಮಂಜುನಾಥ ತಿಪ್ಪೇಸ್ವಾಮಿ ಅವರು ತಮ್ಮನ್ನು ಕರೆದುಕೊಂಡು ಹೋಗುವಾಗ ಹೆಣ್ಣೂರು ಸರ್ವೀಸ್ ರಸ್ತೆಯಲ್ಲಿ ಗಣೇಶ ದೇವಸ್ಥಾನದ ಸಮೀಪ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಗೆಲವು ಕಷ್ಟವಾಗಬಹುದು : ಸಿದ್ದರಾಮಯ್ಯಗೆ ಮುನಿಯಪ್ಪ ಎಚ್ಚರಿಕೆ

ಬೈಕ್ ಚಾಲಕನ ಜೊತೆಗೆ ರ್ಯಾಪಿಡೊ ಕಂಪೆನಿಯ ವಿರುದ್ಧವೂ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಸ್ಥಾನದಲ್ಲಿದ್ದ ಮಂಜುನಾಥ ಕೃತ್ಯ ನಡೆಯಲಾಗಿದೆ ಎಂದು ಹೇಳಲಾದ ಸಮಯಕ್ಕೆ ಬೇರೊಂದು ಸ್ಥಳದಲ್ಲಿರುವ ಜಿಪಿಎಸ್ ಮಾಹಿತಿ ದೊರೆತಿದೆ ಎಂದು ಹಿರಿಯ ಪೊಲೀಸ್ ಅಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲ ಅವಿಷ್ಕಾರ ಸಾಧ್ಯ : ಸಿಎಂ ಬೊಮ್ಮಾಯಿ

ವಿಚಾರಣೆ ಹಾಗೂ ತನಿಖೆಯ ಬಳಿಕ ದೂರಿನಲ್ಲಿ ಸತ್ಯಾಂಶವಿಲ್ಲ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಆದರೆ ಇದನ್ನು ಒಪ್ಪದ ದೂರು ದಾರರಾದ ಕಂಠದಾನ ಕಲಾವಿದೆ ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದಾರೆ.

Articles You Might Like

Share This Article