ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು : ಸಚಿವೆ ಉಷಾ ಠಾಕೂರ್

Social Share

ಮಾಹು,ನ.15- ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಮತ್ತು ಅಂತಹ ದುಷ್ಕರ್ಮಿಗಳ ಅಂತ್ಯಕ್ರಿಯೆಯಲ್ಲಿ ಸಮುದಾಯ ಭಾಗವಹಿಸಬಾರದು ಎಂದು ಮಧ್ಯಪ್ರದೇಶದ ಸಂಸ್ಕøತಿ ಸಚಿವೆ ಉಷಾ ಠಾಕೂರ್ ಒತ್ತಾಯಿಸಿದ್ದಾರೆ.

ಇಂದೋರ್ ಜಿಲ್ಲೆಯ ಕೊಡಿರಿಯಾ ಗ್ರಾಮದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಅತ್ಯಾಚಾರಿಗಳನ್ನು ನೇಣುಗೇರಿಸುವ ಜೊತೆಗೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಬಾರದು. ರಣಹದ್ದುಗಳು ಅವರ ದೇಹಗಳನ್ನು ಕುಕ್ಕಿ ಕುಕ್ಕಿ ತಿನ್ನಬೇಕು. ಅದನ್ನು ಎಲ್ಲರೂ ನೋಡುವಂತಾಗಬೇಕು. ಆ ಮೂಲಕ ಅತ್ಯಾಚಾರಕ್ಕೆ ಯಾರೂ ಧೈರ್ಯ ಮಾಡಬಾರದು ಎಂದು ಹೇಳಿದ್ದಾರೆ.

ರಿಷಿ ಸುನಕ್‍ ಮತ್ತು ಮೋದಿ ಮೊದಲ ಭೇಟಿ

ಸಚಿವೆ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ತಮ್ಮ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದು, ಸಮಾಜಕ್ಕೆ ಒಳ್ಳೆಯದಾಗಬೇಕಾದರೆ ಇಂತಹ ಸಂದೇಶಗಳು ಹೆಚ್ಚು ಪ್ರಚಾರವಾಗಬೇಕು ಎಂದಿದ್ದಾರೆ.

ಕಾಂಗ್ರೆಸ್‍ನ ಪ್ರಭಾವಿ ನಾಯಕರ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ ಬಿಜೆಪಿ

ಅತ್ಯಾಚಾರಿಗಳನ್ನು ಜೈಲಿನಲ್ಲಿಟ್ಟು ಶಿಕ್ಷೆ ನೀಡಿದರೆ ಕೃತ್ಯ ಎಸಗುವವರಲ್ಲಿ ಭಯ ಬರುವುದಿಲ್ಲ. ಅದಕ್ಕಾಗಿ ಗರಿಷ್ಠ ಪ್ರಮಾಣದ ಶಿಕ್ಷೆಯೇ ಬೇಕು. ಅತ್ಯಾಚಾರಿಗಳ ಗಲ್ಲು ಶಿಕ್ಷೆಗಾಗಿ ಸಾರ್ವಜನಿಕರು ಸಹಿ ಸಂಗ್ರಹ ಅಭಿಯಾನ ನಡೆಸಬೇಕೆಂದು ಸಲಹೆ ನೀಡಿದ್ದಾರೆ.

Articles You Might Like

Share This Article