ಅಪಪ್ರಚಾರಗಳಿಂದ ನೊಂದಿರುವೆ : ನೋವು ತೋಡಿಕೊಂಡ ರಶ್ಮಿಕ ಮಂದಣ್ಣ

Social Share

ಬೆಂಗಳೂರು,ನ.9- ರಶ್ಮಿಕ ಮಂದಣ್ಣ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರಗಳಿಂದ ನೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾದ ಪೋಸ್ಟ್ ಪ್ರಕಟಿಸಿರುವ ಅವರು, ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇನೆ. ಆದರೆ ಸುಳ್ಳು ಮತ್ತು ಸೃಷ್ಟೀಕೃತ ನಕಲಿ ಮಾಹಿತಿಗಳು ತಮ್ಮನ್ನು ಘಾಸಿ ಮಾಡಿವೆ ಎಂದು ಹೇಳಿಕೊಂಡಿದ್ದಾರೆ.

ಕೆಲವು ವಿಷಯಗಳು ನನಗೆ ತೊಂದರೆ ಕೊಡುತ್ತಿವೆ. ಸುಮಾರು ಒಂದು ವರ್ಷದಿಂದಲೂ ಈ ವಿಚಾರವಾಗಿ ಮಾತನಾಡಬೇಕು ಎಂದುಕೊಂಡಿದ್ದೆ. ನನ್ನ ಬಗ್ಗೆ ನಾನು ಮಾತ್ರ ಮಾತನಾಡಲು ಸಾಧ್ಯ. ಈ ಬಗ್ಗೆ ನಾನು ವರ್ಷದ ಮೊದಲೇ ಪ್ರತಿಕ್ರಿಯಿಸಬೇಕಿತ್ತು ಎಂದಿದ್ದಾರೆ.

ನಾನು ವೃತ್ತಿ ಜೀವನ ಆರಂಭಿಸಿದ ದಿನದಿಂದಲೂ ನನ್ನನ್ನು ಪಂಚಿಂಗ್ ಬ್ಯಾಗಿಗೆ ಹಾಕಿ ಟ್ರೋಲರ್‍ಗಳು ತಮ್ಮ ಮನಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಮುಕ್ತಾಯವಿಲ್ಲದಷ್ಟು ದ್ವೇಷವನ್ನು ನನ್ನ ವಿರುದ್ದ ಕಾರಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಮತ್ತೊಮ್ಮೆ ದಕ್ಷಿಣ ಕೊರಿಯಾದತ್ತ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ನನ್ನ ಸುತ್ತಮುತ್ತ ಇರುವವರಿಗೆ, ನನ್ನ ಪ್ರೀತಿಸುವವರಿಗೆ, ನನ್ನ ಜೊತೆ ಕೆಲಸ ಮಾಡುವವರಿಗೆ ನಾನೇಂದು ಗೊತ್ತು. ಅವರು ನನ್ನನ್ನು ಒಪ್ಪಿಕೊಳ್ಳುತ್ತಾರೆ. ಮಂದೆಯೂ ನಾನು ನಿಮಗಾಗಿ ಉತ್ತಮವಾದುದನ್ನು ಕೊಡಲು ಕಠಿಣ ಶ್ರಮಪಡುತ್ತೇನೆ. ನಿಮ್ಮನ್ನು ಸಂತೋಷಪಡಿಸುವುದು, ಮತ್ತು ಉತ್ತಮ ನಾಳೆಗಳಿಗಾಗಿ ನಾನು ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.

ಕ್ಷಮೆ ಕೇಳಲು ನಿರಾಕರಿಸಿದ ಸತೀಶ್ ಜಾರಕಿಹೊಳಿ, ತಮ್ಮದೇ ಪಕ್ಷದವರಿಗೂ ಟಾಂಗ್

ಟ್ರೋಲರ್‍ಗಳ ಹೊರತಾಗಿ ನನ್ನ ಗುರುತಿಸಿದವರು, ನನ್ನ ಪ್ರೀತಿಸಿದವರು ಸಾಕಷ್ಟು ಬೆಂಬಲ ನೀಡಿದ್ದಾರೆ. ಹಾಗಾಗಿ ಬಹಳ ದೀರ್ಘ ಕಾಲದಿಂದಲೂ ನಾನು ಟ್ರೋಲ್‍ಗಳನ್ನು ನಿರ್ಲಕ್ಷಿಸುತ್ತಾ ಬಂದೆ ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕೆಟ್ಟದಾಗಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ನಾನು ಯಾರನ್ನು ಗೆಲ್ಲಲು ಬಯಸುವುದಿಲ್ಲ.
ರಚನಾತ್ಮಕ ಟೀಕೆಗಳನ್ನು ಸ್ವೀಕರಿಸುವ ಮೂಲಕ ನನ್ನನ್ನು ನಾನು ಸರಿಪಡಿಸಲು ಪ್ರಯತ್ನಿಸುತ್ತೇನೆ. ಆದರೆ ನಕಾರಾತ್ಮಕ ಮತ್ತು ದ್ವೇಷಪೂರಿತ ಟೀಕೆಗಳು ನನಗೆ ನೋವುಂಟು ಮಾಡಿವೆ ಎಂದಿದ್ದಾರೆ.

Articles You Might Like

Share This Article