ಐಪಿಎಲ್ ಕೋಚ್ ಆಗ್ತಾರಂತೆ ಅಮೀರ್ ಖಾನ್..!
ನವದೆಹಲಿ, ಮೇ 20- ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಅಮೀರ್ ಖಾನ್ ಐಪಿಎಲ್ನಲ್ಲಿ ತಂಡವೊಂದರ ತರಬೇತುದಾರರಾಗ್ತಾರಂತೆ.
ಈ ಹಿಂದೆ ಅಮೀರ್ ಖಾನ್ ನಟಿಸಿದ್ದ ಲಗಾನ್ನಲ್ಲಿ ಭುವನ್ ಆಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿ ಸಿದ್ದ ಅಮೀರ್ ಈಗ ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ ತಂಡವೊಂದರ ಮುಖ್ಯ ಕೋಚ್ ಆಗಲು ಹೊರಟಿದ್ದಾರೆ ಎಂದು ಭಾರತ ತಂಡದ ಮಾಜಿ ತರಬೇತುದಾರ ರವಿಶಾಸ್ತ್ರಿ ಅವರು ಅಮೀರ್ ಖಾನ್ ನ ಕಾಲೆಳೆದಿದ್ದಾರೆ.
ಅಮೀರ್ ಖಾನ್ ರ ನೂತನ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರದ ನಿರ್ಮಾಣದ ಪ್ರಮೋಷನ್ಗಾಗಿ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡಿದ್ದಾರೆ. ಈ ವೇಳೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಮಾಜಿ ಕ್ರಿಕೆಟಿಗ, ತರಬೇತುದಾರ ರವಿಶಾಸ್ತ್ರಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದು, ಅಮೀರ್ ಖಾನ್ ಅವರು ಉತ್ತಮ ಫುಟ್ವರ್ಕ್ ಹೊಂದಿದ್ದಾರೆ ಅವರಿಗೆ ಕ್ರಿಕೆಟ್ ಬಗ್ಗೆ ಅಪಾರ ಜ್ಞಾನವಿದೆ, ಹೀಗಾಗಿ ಅವರು ಐಪಿಎಲ್ನ ತಂಡವೊಂದರ ತರಬೇತುದಾರರಾಗಿ ಕಾರ್ಯನಿರ್ವಹಿಸುವ ಸಾಮಥ್ರ್ಯ ಹೊಂದಿದ್ದಾರೆ, ಆದರೆ ಯಾವ ತಂಡದ ಪರ ಅವರು ಕೋಚ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಕಿಚಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಮೀರ್ ಖಾನ್ ಅವರು ನನ್ನ ಫುಟ್ವರ್ಕ್ನಲ್ಲಿ ನೀನು ಕಾಲಿಡಬೇಕಿತ್ತು ಅಂದರೆ ಅಮೀರ್ ಖಾನ್ ಭಾರತ ತಂಡದ ತರಬೇತುದಾರರಾಗಬೇಕಾಗಿತ್ತಂತೆ, ನನ್ನ ನಟನೆಯ ಲಗಾನ್ ಚಿತ್ರವನ್ನು ನೋಡಿದರೆ ಸಾಕು ಎಲ್ಲಾ ತಂಡಗಳು ಕೂಡ ನಾನೇ ತರಬೇತುದಾರನಾಗಬೇಕೆಂದು ದುಂಬಾಲು ಬೀಳುತ್ತಾರೆ, ಬೇಕಾದರೆ ನೀನು ಈಗಲೂ ಆ ಚಿತ್ರವನ್ನು ನೋಡು ಎಂದು ರವಿಶಾಸ್ತ್ರಿಗೆ ಹೇಳುವ ಮೂಲಕ ಹಾಸ್ಯದ ಚಟಾಕಿ ಹರಿಸಿದ್ದಾರೆ.