ನೋಟು ಅಮಾನ್ಯಿಕರಣ ಸಮರ್ಥಿಸಿಕೊಂಡ ಆರ್‌ಬಿಐ

Social Share

ನವದೆಹಲಿ,ಡಿ.6- ನೋಟು ಅಮಾನ್ಯಿಕರಣವನ್ನು ಕಾನೂನುಬದ್ಧವಾಗಿಯೇ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಅಧಿಕಾರಿಗಳು ಸುಪ್ರಿಂ ಕೋರ್ಟ್ ಮುಂದೆ ಸಮರ್ಥಿಸಿಕೊಂಡಿವೆ.

ಸುಪ್ರೀಂ ಕೋರ್ಟ್‍ನ ಸಾಂವಿಧಾನಿಕ ಪೀಠದ ಮುಂದೆ ಹಾಜರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಆರ್‌ಬಿಐ ಪರ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರುಗಳು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಆರ್‌ಬಿಐ ಕಾಯ್ದೆಯ ಸೆಕ್ಷನ್ 3 ರ ಪ್ರಕಾರ ಆರ್‌ಬಿಐನ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಮತ್ತು ವರ್ಗಾವಣೆ ಮಾಡಲು ಆರ್‌ಬಿಐ ಕಾಯಿದೆಯ ಸೆಕ್ಷನ್ 26 ಅನ್ನು ಮಿತಿಮೀರಿದ ನಿಯೋಗ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ನೋಟು ಅಮಾನ್ಯಿಕರಣಕ್ಕೆ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸಲಾಗಿದೆ ಎಂದು ಇಬ್ಬರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಸಿರ್ಸಿ ವೃತ್ತದಿಂದ ವಿಜಯನಗರ ಪೈಪ್‍ಲೈನ್‍ವರೆಗೆ ರಸ್ತೆ ಅಗಲೀಕರಣ

ಆರ್‌ಬಿಐ ಕಾಯ್ದೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ನಿರ್ಣಯವನ್ನು ಅಂಗೀಕರಿಸಿದ ನಂತರ, 8 ನವೆಂಬರ್ 2016 ರಂದು ಕೇಂದ್ರ ಸರ್ಕಾರಕ್ಕೆ ತಿಳಿಸಲಾಯಿತು ಎಂದು ಆರ್‌ಬಿಐ ತನ್ನ ಅಫಿಡವಿಟ್‍ನಲ್ಲಿ ತಿಳಿಸಿದೆ.

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಗೂ ಮೀರಿ ಹರಿದುಬಂತು ಆದಾಯ

RBI, Centre, Defend, Demonetisation, Policy, Followed, Rule Book,

Articles You Might Like

Share This Article