ಮತ್ತೆ ರೆಪೊ ದರ ಏರಿಸಿದ ಆರ್‌ಬಿಐ, ಹೆಚ್ಚಾಗಲಿದೆ ಬ್ಯಾಂಕ್ ಬಡ್ಡಿ

Social Share

ನವದೆಹಲಿ,ಫೆ.8- ಭವಿಷ್ಯದಲ್ಲಿ ಹಣದುಬ್ಬರವನ್ನು ನಿಯಂತ್ರಣ ಮಾಡಲು ಕಠಿಣ ಕ್ರಮಗಳನ್ನು ಮುಂದುವರೆಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ರೇಪೋ ದರವನ್ನು 25 ಕನಿಷ್ಠ ಅಂಶಗಳ ಆಧಾರದ ಮೇಲೆ ಶೇ.6.5ರಷ್ಟು ಹೆಚ್ಚಳ ಮಾಡಿದೆ. ಇದರಿಂದ ಬ್ಯಾಂಕ್‍ಗಳ ಸಾಲಗಳ ಮೇಲೆ ಬಡ್ಡಿ ಮತ್ತಷ್ಟು ಏರಿಕೆಯಾಗಲಿದೆ.

ಈ ಮೊದಲು ನಾಲ್ಕು ಬಾರಿ ಆರ್‌ಬಿಐ ರೇಪೋವನ್ನು ಸರ್ವಾನುಮತದಿಂದ ಪರಿಷ್ಕರಣೆ ಮಾಡಿದೆ. ಇದೇ ಮೊದಲ ಬಾರಿಗೆ ಕೇಂದ್ರ ಬ್ಯಾಂಕ್‍ನ ವಿತ್ತಿ ನಿರ್ವಹಣಾ ಸಮಿತಿ (ಎಂಪಿಸಿ) ಸದಸ್ಯರಲ್ಲಿ ಅಪಸ್ವರಗಳು ಕೇಳಿ ಬಂದಿವೆ. ಆರು ಮಂದಿ ಸದಸ್ಯರ ಪೈಕಿ ನಾಲ್ಕು ಮಂದಿ ಮಾತ್ರ ರೇಪೋವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಲು ಅನುಮತಿಸಿದ್ದಾರೆ.

ಹೀಗಾಗಿ ಆರ್‌ಬಿಐ ನಾಲ್ಕು-ಎರಡು ಮತಗಳ ಅಂತರದಿಂದ ನಿರ್ಣಯವನ್ನು ಜಾರಿಗೆ ತರುತ್ತಿದೆ. ಸಮಿತಿಯ ಸಭೆಯಲ್ಲಿನ ನಿರ್ಣಯಗಳನ್ನು ಆರ್‌ಬಿಐನ ಗೌವರ್ನರ್ ಶಕ್ತಿಕಾಂತ್‍ದಾಸ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಸರ್ಕಾರಿ ಖರ್ಚಿನಲ್ಲಿ ಹಿಂದುತ್ವದ ಶಂಖನಾದ ಊದಿದರೆ ಸುನಿಲ್ ಕುಮಾರ್?

ಸ್ಥೂಲ ಆರ್ಥಿಕ ಪರಿಸ್ಥಿತಿ ಮತ್ತು ಅದರ ದೃಷ್ಠಿಕೋನಗಳನ್ನು ವಿಶ್ಲೇಷಣೆ ನಡೆಸಿ 25 ಬೇಸಿಕ್ ಪಾಯಿಂಟ್ಸ್‍ಗಳ ಆಧಾರದ ಮೇಲೆ ಬ್ಯಾಂಕುಗಳಿಗೆ ನೀಡಲಾಗುವ ಸಾಲದ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಲಾಗಿದೆ.

ಹಣದುಬ್ಬರವನ್ನು ತಗ್ಗಿಸಲು ಮತ್ತು ಬೆಳವಣಿಗೆಯ ದರವನ್ನು ಬೆಂಬಲಿಸಲು ಎಂಪಿಸಿ ಹಣ ಪಡೆಯುವ ಸೌಲಭ್ಯವನ್ನು ಯಥಾಸ್ಥಿತಿಯಲ್ಲಿ ನಿರ್ವಹಣೆ ಮಾಡಲು ನಿರ್ಧರಿಸಿದೆ. ಸ್ಥಾಯಿ ಠೇವಣಿ ಸೌಲಭ್ಯ (ಎಸ್‍ಡಿಎಫ್) ಶೇ.6.25ಕ್ಕೆ ಪರಿಷ್ಕರಿಸಲಾಗಿದೆ. ಅದೇ ರೀತಿ ಅಂತರ್ ಸ್ಥಾಯಿ ಸೌಲಭ್ಯ (ಎಂಎಸ್‍ಎಫ್) ಅನ್ನು ಶೇ.6.75ರಷ್ಟು ನಿಗದಿ ಪಡಿಸಲಾಗಿದೆ.

ಗ್ರಾಹಕರ ಬೆಲೆ ಹಣದುಬ್ಬರ (ಸಿಪಿಐ) 2022ರ ನವೆಂಬರ್‍ನಿಂದ ಸಹನೆಯ ಮಿತಿ ಶೇ.6ನ್ನು ದಾಟಿದೆ. ಇದರಿಂದ ದಿನನಿತ್ಯ ಬಳಸುವ ವಸ್ತುಗಳು, ಹಣ್ಣು, ತರಕಾರಿ ಸೇರಿದಂತೆ ಇತರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಆರ್‌ಬಿಐ ಪ್ರಮುಖ ಕ್ಷೇತ್ರದ ಮೇಲಿನ ಹಣದುಬ್ಬರವನ್ನು ತಗ್ಗಿಸಲು ಕಠಿಣ ನಿಲುವನ್ನು ಮುಂದುವರೆಸಿದೆ.

ಮುಂದಿನ ಆರ್ಥಿಕ ವರ್ಷ 2023-24ರಲ್ಲಿ ಹಣದುಬ್ಬರವನ್ನು ಶೇ.4ರ ಒಳಗೆ ನಿಯಂತ್ರಿಸಲು ಆರ್‌ಬಿಐ ಅಗತ್ಯ ಕ್ರಮಗಳನ್ನು ಮುಂದುವರೆಸಿದೆ. ಆದರೆ ಭೌಗೋಳಿಕ ರಾಜಕೀಯ ಸಂಘರ್ಷ, ಜಾಗತಿಕ ಹಣಕಾಸು ಮಾರುಕಟ್ಟೆ ಸ್ಥಿರತೆ, ತೈಲೆತರ ಸರಕುಗಳ ಬೆಲೆ ಏರಿಕೆ, ದುಬಾರಿಯಾದ ಕಚ್ಚಾ ತೈಲದ ಬೆಲೆಯಿಂದಾಗಿ ಹಣದುಬ್ಬರ ಸಹನೆಯ ಮಿತಿ ದಾಟಿದೆ ಎಂದು ಶಕ್ತಿಕಾಂತ್ ದಾಸ್ ಸಮರ್ಥಿಸಿಕೊಂಡಿದ್ದಾರೆ. ಆಶಾದಾಯಕ ಬೆಳವಣಿಗೆ ಎಂದರೆ ಭಾರತದಲ್ಲಿ ಆರ್ಥಿಕ ಚಟುಟಿಕೆಗಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿವೆ ಎಂದಿದ್ದಾರೆ.

ರೇಪೋ ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಶಕ್ತಿಕಾಂತ್‍ದಾಸ್, 2022ರಿಂದಲೂ ಬೆಲೆ ಏರಿಕೆಯಾಗುತ್ತಿದೆ. ನಮ್ಮ ವ್ಯವಸ್ಥೆಯಲ್ಲಿ ನಮ್ಮದೇ ಆದ ದಾರಿಯಲ್ಲಿ ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ.

ಹಣದುಬ್ಬರದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಎಂಪಿಸಿ ಸಮತೋಲನ ಕಾಯ್ದುಕೊಳ್ಳಲು ಯತ್ನಿಸಿದೆ. ಆದ್ಯ ವಲಯದಲ್ಲಿನ ಹಣದುಬ್ಬರವನ್ನು ಮತ್ತು ತನ್ಮೂಲಕ ಮಧ್ಯಮ ಅವಯ ಬೆಳವಣಿಗೆ ನಿರೀಕ್ಷೆಗಳನ್ನು ಖಚಿತ ಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಪಾದಯಾತ್ರೆ ಮೂಲಕ ಹಜ್‍ಗೆ ಹೊರಟ್ಟಿದ್ದ ಭಾರತೀಯನಿಗೆ ಸಿಕ್ತು ಪಾಕ್ ವೀಸಾ

ಈ ಮೊದಲು ನಡೆದ ಎಂಪಿಸಿ ಸಭೆಯಲ್ಲಿ ಬಡ್ಡಿ ದರ ಏರಿಕೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಆರ್‌ಬಿಐ ನಿರ್ಧರಿಸಿತ್ತು. ಆದರೆ ಆ ವೇಳೆ ಹಣದುಬ್ಬರ ನಿಯಂತ್ರಣಕ್ಕೆ ಸ್ಪಷ್ಟ ಮಾರ್ಗಸೂಚಿಗಳನ್ನು ಮತ್ತು ಬೆಳವಣಿಗೆ ಉತ್ತೇಜಿತ ಕ್ರಮಗಳನ್ನು ಅನುಸರಿಸಿತ್ತು.

ದೇಶದ ಹಣದುಬ್ಬರ ಮೇಲೆ ಆರ್‍ಬಿಐ ನಿಗಾ ಇರಿಸಿದೆ. ಹೊರನೋಟಕ್ಕೆ ಹಣದುಬ್ಬರವನ್ನು ತಗ್ಗಿಸಲು ಮತ್ತು ಸಹನೀಯ ಸ್ಥಿತಿಗೆ ಸ್ಥಿತಿಕರಿಸುವ ಗುರಿಗೆ ಪ್ರಗತಿಪರ ಹೊಂದಾಣಿಕೆಗಳೊಂದಿಗೆ ಕೆಲಸ ಮಾಡುತ್ತಿದೆ.

ಹಾಸನದಲ್ಲಿ ಸೈಲೆಂಟಾದ ಭವಾನಿ ರೇವಣ್ಣ..!

2023-24ರ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು ಶೇ.6.4ರಷ್ಟಾಗಬಹುದೆಂದು ಆರ್‍ಬಿಐ ಅಂದಾಜಿಸಿದೆ. ಮುಂದಿನ ಆರ್ಥಿಕ ವರ್ಷದ ತ್ರೈಮಾಸಿಕ ಬೆಳವಣಿಗೆಯನ್ನು ಶೇ.7.8ರಷ್ಟು, ಎರಡನೇ ತ್ರೈಮಾಸಿಕದಲ್ಲಿ ಶೇ.6.2ರಷ್ಟು, ಮೂರನೇ ತ್ರೈಮಾಸಿಕದಲ್ಲಿ ಶೇ.6ರಷ್ಟು, ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.8ರಷ್ಟು ಎಂದು ಆರ್‍ಬಿಐ ಅಂದಾಜಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಮುಂದಿನ ಆರ್ಥಿಕ ವರ್ಷದಲ್ಲಿ ಬೆಳವಣಿಗೆಯ ದರವನ್ನು ಶೇ.7 ಎಂದು ಅಂದಾಜಿಸಿದ್ದರು.

RBI, hikes, interest, rate, Home, car, loan, EMIs,

Articles You Might Like

Share This Article