ನವದೆಹಲಿ,ಫೆ.25- ಆರ್ಥಿಕವಾಗಿ ಜನರ ಜೀವನಾಡಿಯಾಗಿದ್ದ ಸಹಕಾರ ಬ್ಯಾಂಕ್‍ಗಳಲ್ಲಿ ದಿನೇ ದಿನೇ ಅವ್ಯವಹಾರಗಳು, ಅಕ್ರಮಗಳು, ಅಶಿಸ್ತು ಹೆಚ್ಚುತ್ತಿದ್ದು, ಕೇಂದ್ರ ಬ್ಯಾಂಕ್ ಆರ್‌ಬಿಐ ಒಂದೇ ದಿನ ಮಂಡ್ಯ ಜಿಲ್ಲೆಯ ಮದ್ದೂರಿನ ಸಂಸ್ಥೆಯೂ ಸೇರಿದಂತೆ ದೇಶಾದ್ಯಂತ ಏಳು ಸಹಕಾರ ಬ್ಯಾಂಕ್‍ಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ.
ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್ 1949 ಸೆಕ್ಷನ್ 35 ಎ ಮತ್ತು ಓದಲಾದ 56 ಕಲಂ ಅಡಿ ಸದರಿ ಬ್ಯಾಂಕ್‍ಗಳಿಗೆ ಆರು ತಿಂಗಳ ಕಾಲ ಯಾವುದೇ ವಹಿವಾಟು ನಡೆಸಬಾರದು ಎಂಬ ನಿರ್ಬಂಧ ವಿಧಿಸಲಾಗಿದೆ.
ಆರ್‍ಬಿಐನ ಪ್ರಧಾನ ವ್ಯವಸ್ಥಾಪಕ ಯೋಗೇಶ್ ದಯಾಲ್ ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ಸಹಕಾರ ಬ್ಯಾಂಕ್ ನಿಯಮಿತ ಸಂಸ್ಥೆಗೆ ನೀಡಿರುವ ನೋಟಿಸ್‍ನಲ್ಲಿ,ಸ ಫೆ.24ರಿಂದ ಆರು ತಿಂಗಳ ಕಾಲ ವ್ಯವಹಾರ ಸ್ಥಗಿತಕ್ಕೆ ಸೂಚಿಸಲಾಗಿದೆ.
ಪಾಕ್ ಮತ್ತು ಶ್ರೀಲಂಕಾ ಮೇಲೆ ಹತೋಟಿ ಸಾಧಿಸಲು ಚೀನಾ ಪ್ಲಾನ್
ಆರ್‍ಬಿಐನ ಪೂರ್ವಾನುಮತಿ ಇಲ್ಲದೆ, ಅನುದಾನ ನೀಡುವುದು, ನವೀಕರಿಸುವುದು, ಯಾವುದೇ ಸಾಲ ಅಥವಾ ಮುಂಗಡ ನೀಡುವುದು, ಯಾವುದೇ ರೀತಿಯ ಹೂಡಿಕೆ ಮಾಡುವುದು, ಸಾಲ ಪಡೆಯುವುದು, ಹೊಸದಾಗಿ ಠೇವಣಿ ಸ್ವೀಕರಿಸುವುದು, ಹೊಣೆಗಾರಿಕೆ ನಿಭಾಯಿಸುವ ಯಾವುದೇ ಪಾವತಿಗಳನ್ನು ಮಾಡುವಂತಿಲ್ಲ.
ಅಷ್ಟೆ ಅಲ್ಲದೆ ಚಿನ್ನಾಭರಣಗಳ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಅಥವಾ ಮಾರಾಟ ಮಾಡುವುದು, ಬ್ಯಾಂಕ್‍ಗೆ ಸಂಬಂಧಿಸಿದಂತೆ ಆಸ್ತಿ ಮತ್ತು ಸ್ವತ್ತುಗಳ ನ್ನು ಆರ್‍ಬಿಐನ ನಿರ್ದೇಶನವಿಲ್ಲದೆ ಅಧಿಸೂಚಿಸುವುದನ್ನು ತಡೆ ಹಿಡಿಯಲಾಗಿದೆ. ಆರ್‍ಬಿಐನ ನೋಟಿಸ್ ಅನ್ನು ಬ್ಯಾಂಕ್‍ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು ಎಂದು ತಾಕೀತು ಮಾಡಲಾಗಿದೆ.
ಅರ್ಹ ಠೇವಣಿದಾರರು ಅವರ ಹೂಡಿಕೆಗೆ ಪ್ರತಿಯಾಗಿ ಐದು ಲಕ್ಷ ರೂಪಾಯಿವರೆಗೂ ಠೇವಣಿ ಖಾತ್ರಿ ಮೊತ್ತವನ್ನು ಪಡೆಯಬಹುದಾಗಿದೆ. ಆರ್‍ಬಿಐನ ನಿರ್ಬಂಧಗಳು ಆರು ತಿಂಗಳ ಕಾಲವಯವರೆಗೂ ಚಾಲ್ತಿಯಲ್ಲಿರಲಿವೆ ಎಂದು ತಿಳಿಸಲಾಗಿದೆ.
ನಿಂತಿದ್ದ ಬಸ್‍ಗಳಿಗೆ ಟ್ರಕ್ ಡಿಕ್ಕಿಯಾಗಿ 14 ಮಂದಿ ಸಾವು
ಶಿಂಷಾ ಬ್ಯಾಂಕ್ ಮಾದರಿಯಲ್ಲೇ ಲಕ್ನೋದ ಹೆಚ್‍ಸಿಬಿಎಲ್ ಸಹಕಾರ ಬ್ಯಾಂಕ್, ಅನಂತಪುರ ಜಿಲ್ಲೆಯ ಉರವಕೊಂಡ ಸಹಕಾರ ಬ್ಯಾಂಕ್, ಔರಂಗಾಬಾದ್ ಜಿಲ್ಲೆಯ ಮರ್ಯಾದಿತ್‍ನ ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್, ಕೇರಳದ ಥೋದುಪುಝ ನಗರ ಸಹಕಾರ ಬ್ಯಾಂಕ್, ಅಕ್ಲುಜ್‍ನ ಶಂಕರ್‍ರಾವ್ ಮೊಹಿತೆ ಪಾಟೀಲ್ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರದ ಬುಲಧನದಲ್ಲಿನ ಮಲ್ಕಪುರ ನಗರ ಸಹಕಾರ ಬ್ಯಾಂಕ್ ಸೇರಿದಂತೆ ಏಳು ಸಂಸ್ಥೆಗಳ ವಹಿವಾಟುಗಳಿಗೆ ಆರ್‍ಬಿಐ ನಿರ್ಬಂಧ ವಿಧಿಸಿದೆ.
RBI, imposes ,restrictions, on, co-operative, banks,