ಮುಂಬೈ, ಫೆ.10- ಕೋವಿಡೋತ್ತರದಲ್ಲಿ ದೇಶದ ಆರ್ಥಿಕ ಚೇತರಿಗೆ ಮತ್ತು ಜಿಡಿಪಿ ಸಕಾರಾತ್ಮಕವಾಗಿದ್ದು, ಹಣದುಬ್ಬರ ತಗ್ಗುವ ನಿರೀಕ್ಷೆ ಇದೆ ಎಂದಿರುವ, ಆರ್‍ಬಿಐ ಇದಕ್ಕೆ ಪೂರಕವಾಗಿ ರೆಪೋ ದರಗಳನ್ನು ಪರಿಷ್ಕರಣೆ ಮಾಡದೆ ಹೊಸ ದಾಖಲೆ ಬರೆದಿದೆ. ಜೊತೆಗೆ ಇ-ರುಪಿ ವಹಿವಾಟಿನ ಪ್ರಮಾಣವನ್ನು ಉತ್ತೇಜಿಸಲು ಮಹತ್ವದ ಘೋಷಣೆ ಮಾಡಿದೆ.
ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‍ಬಿಐ ಗವರ್ನರ್ ಶಕ್ತಿಕಾಂತ ದಾಸ್, ಉತ್ತಮ ಮಳೆ, ಬೆಳೆಯಿಂದಾಗಿ ಪೂರೈಕೆ ಹೆಚ್ಚಾಗಲಿದ್ದು, ಆರ್ಥಿಕ ಚೇತರಿಕೆ ಕಾಣುತ್ತಿದೆ. ಮುಂದಿನ ಆರ್ಥಿಕ ವರ್ಷ 2022ರ ಏಪ್ರಿಲ್‍ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರ ಗರಿಷ್ಠ ಸಹಿಷ್ಣುತೆಯ ಮಟ್ಟಕ್ಕಿಂತ ಕಡಿಮೆ ಎಂದರೆ ಶೇ.4.5ರಷ್ಟಾಗುವ ನಿರೀಕ್ಷೆ ಇದೆ ಎಂದಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಹೆಚ್ಚಾಗುವುದರಿಂದ ಹಣದುಬ್ಬರ ಅಪಾಯ ಎದುರಿಸುವ ಸಾಧ್ಯತೆ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಮಾಣ ಶೇ.5.3ರಷ್ಟಾಗಲಿದೆ. ಆರ್‍ಬಿಐ ನಿಯಮದ ಪ್ರಕಾರ 2026ರ ಮಾರ್ಚ್ 31ವರೆಗೂ ವಾರ್ಷಿಕ ಹಣದುಬ್ಬರವನ್ನು ಶೇಕಡಾ 4ರ ಮಿತಿಯನ್ನು ನಿರ್ವಹಿಸಬೇಕು. ಕನಿಷ್ಠ ಶೇ.2ರಷ್ಟು, ಗರಿಷ್ಠ ಶೇ.6 ಹಣದುಬ್ಬರದ ಮಿತಿ ನಿಗದಿ ಮಾಡಲಾಗಿದೆ.
ಕಳೆದ ನವೆಂಬರ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍ಗೆಸಂಬಂಸಿದ ತೆರಿಗೆ ಕಡಿತದಿಂದ ಹಣದುಬ್ಬರ ಕಡಿಮೆಯಾಗಿದೆ. ಆರ್ಥಿಕ ವ್ಯವಸ್ಥೆಯ ಮೇಲೆ ಒತ್ತಡ ಕಡಿಮೆಯಾಗಿತ್ತು. ಆರ್‍ಬಿಐನ ಹಣಕಾಸು ನೀತಿಯ ಸಮಿತಿ ಹಣದುಬ್ಬರದ ಮೇಲೆ ತೀವ್ರ ನಿಗಾ ಇರಿಸಿದೆ. ಚಿಲ್ಲರೆ ಹಣದುಬ್ಬರವು ನವೆಂಬರ್‍ನಲ್ಲಿ ಶೇ.4.91, ಡಿಸೆಂಬರ್‍ನಲ್ಲಿ ಗರಿಷ್ಠ ಶೇ.5.59 ಏರಿಕೆಯಾಗಿದೆ.
ಕೊರೊನಾ ರೂಪಾಂತರ ತಳಿ ಓಮಿಕ್ರಾನ್‍ನಿಂದಾಗಿ ಕೋರ್ ಹಣದುಬ್ಬರವು ಸಹಿಷ್ಣುತೆ ಮಟ್ಟಕ್ಕಿಂತ ಸ್ವಲ್ಪ ಏರಿಕೆಯಾಗಿದೆ. ಆಹಾರದ ಬೆಲೆಗಳ ಏರಿಕೆಯಿಂದಾಗಿ ಹಣದುಬ್ಬರ ಸಂಕಷ್ಟಕರ ಸ್ಥಿತಿಗೆ ತಲುಪಿತ್ತು ಎಂದಿದ್ದಾರೆ. ಹಣದುಬ್ಬರದ ಏರಿಳಿತವನ್ನು ಸಹಿಷ್ಣತಾ ದೃಷ್ಟಿಯಿಂದ ವಿಶ್ಲೇಷಿಸಲಾಗಿದೆ.
ಹೀಗಾಗಿ ವಾರ್ಷಿಕ ಶೇ.5.3ರ ಹಣದುಬ್ಬರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಕೂಲವಾದ ಪರಿಣಾಮದಿಂದ ಪ್ರಸ್ತುತ ತ್ರೈಮಾಸಿಕ ಹಣದುಬ್ಬರ ಶೇ.5.7 ರಷ್ಟಿದೆ ಎಂದು ದಾಸ್ ಹೇಳಿದರು. ಮುಂದಿನ ವರ್ಷದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯಿದ್ದು, ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು 2022-23ರ ಆರ್ಥಿಕ ವರ್ಷದಲ್ಲಿ ಹಣದುಬ್ಬರ ಶೇ.4.5ರ ಮಿತಿಯಲ್ಲಿರುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಾಲದ ಮೇಲಿನ ಬಡ್ಡಿ ದರವನ್ನು ಸತತ 10ನೇ ಸಭೆಗಳಿಂದಲೂ ಪರಿಷ್ಕರಣೆ ಮಾಡದೆ ಉಳಿಸಿಕೊಂಡಿರುವುದು ಭಾರತೀಯ ಆರ್ಥಿಕ ವರ್ಷದಲ್ಲಿ ದಾಖಲೆಯಾಗಿದೆ. ಬಡ್ಡಿ ದರ ಶೇ.4ರಷ್ಟಿದೆ. ಆರ್‍ಬಿಐ ಬ್ಯಾಂಕುಗಳ ಠೇವಣಿಗೆ ನೀಡುವ ರೆಪೋ ದರ ಶೇ.3.35ರಲ್ಲೆ ಇದ್ದು, ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.7.8ರಷ್ಟಾಗಲಿದೆ. ಈ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಜಿಡಿಪಿ ಬೆಳವಣಿಗೆ ಅಂದಾಜಿಸಲಾಗಿದೆ. ಕೊರೊನಾ ನಂತರ ಭಾರತ ಅನ್ಯ ದೇಶಗಳಿಗಿಂತ ತೀವ್ರ ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿದೆ. ಹಣಕಾಸು ವ್ಯವಸ್ಥೆಯ ಸುಧಾರಣೆಗೆ ತಕ್ಕಂತೆ ಆರ್‍ಬಿಐ ಹೊಂದಾಣಿಕೆ ನಿಲುವುಗಳನ್ನು ಮುಂದುವರೆಸಲಿದೆ. ಆರೋಗ್ಯ ಸೌಲಭ್ಯಕ್ಕೆ ಕಾಯ್ದಿರಿಸಲಾದ 50 ಸಾವಿರ ತುರ್ತು ನಿಯನ್ನು ಮತ್ತೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಸಾಂಕ್ರಾಮಿಕ ಮತ್ತು ಜÁಗತಿಕ ಅನಿಶ್ಚಿತತೆಯ ದೃಷ್ಟಿಯಿಂದ 2022-23 ರ ಆರ್ಥಿಕ ಬೆಳವಣಿಗೆಯ ದರವನ್ನು ಶೇ. 9.2ರಿಂದ 7.8ಕ್ಕೆ ನಿಗದಿ ಪಡಿಸಲಾಗಿದೆ. ಸಂಸತ್ತಿನಲ್ಲಿ ಮಂಡಿಸಲಾದ ಇತ್ತೀಚಿನ ಆರ್ಥಿಕ ಸಮೀಕ್ಷೆಯಲ್ಲಿ ಹಣಕಾಸು ಸಚಿವಾಲಯವು ಜಿಡಿಪಿಯನ್ನು ಶೆ 8- 8.5ರಷ್ಟಾಗಲಿದೆ ಎಂದು ಅಂದಾಜಿಸಲಾಗಿತ್ತು. ದ್ವೈ ಮಾಸಿಕ ನೀತಿಯನ್ನು ಅನಾವರಣಗೊಳಿಸಿದ ಶಕ್ತಿಕಾಂತ ದಾಸ್, ದೇಶೀಯ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಇನ್ನೂ ಪ್ರಗತಿಯ ಹಾದಿಯಲ್ಲಿ ತಟಸ್ಥಗೊಂಡಿಲ್ಲ ಎಂದಿದ್ದಾರೆ.
ಹಣಕಾಸಿನ ಸ್ಥಿರತೆಯನ್ನು ನಿಭಾಯಿಸುವ ಆರ್‍ಬಿಐನ ಸಾಮಥ್ರ್ಯವನ್ನು ಕ್ರಿಪ್ಟ್ ಕರೆನ್ಸಿಗಳು ದುರ್ಬಲಗೊಳಿಸಲಿವೆ. ಸ್ಥೂಲ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆಗೆ ಬೆದರಿಕೆಯಾಗಿವೆ. ಕ್ರಿಪೆÇ್ರೀಗಳ ಹೂಡಿಕೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇವಕ್ಕೆ ಯಾವುದೇ ತಳಹದಿ ಇಲ್ಲ, ನಿಯಮಗಳು ಇಲ್ಲ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಇ-ರುಪಿ ವೋಚರ್‍ಗಳ ಮಿತಿಯನ್ನು 10 ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೂ ಹೆಚ್ಚಿಸಲಾಗಿದೆ. ಇ-ರುಪಿ ವೋಚರ್‍ಗಳನ್ನುಇ ಹಲವು ಬಾರಿ ಬಳಸಲು ಸಹ ಅನುಮತಿಸಲಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾಪೆರ್ರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) 2021ರ ಆಗಸ್ಟ್‍ನಲ್ಲಿ ಅಭಿವೃದ್ಧಿಪಡಿಸಿರುವ ಇ-ರುಪಿ ಪ್ರಿಪೇಯ್ಡ್ ಡಿಜಿಟಲ್ ವೋಚರ್ ವೈಯಕ್ತಿಕ-ನಿರ್ದಿಷ್ಟ ಮತ್ತು ಖಚಿತ ಉದ್ದೇಶದ ನಗದ ರಹಿತ ವ್ಯವಸ್ಥೆಯಾಗಿದೆ.
ಇದನ್ನು ಕಾಪೆರ್ರೆಟ್ ಸಂಸ್ಥೆಗಳು, ಸರ್ಕಾರ ಹಾಗೂ ಪ್ರತಿಯೊಬ್ಬ ಸಾರ್ವಜನಿಕರು ಬಳಕೆ ಮಾಡಬಹುದಾಗಿದೆ. ಯುಪಿಐ ವೇದಿಕೆಯಲ್ಲಿ 10 ಸಾವಿರ ರೂಪಾಯಿವರೆಗೂ ಮತ್ತು ಪ್ರತಿ ವೋಚರ್ ಅನ್ನು ಒಂದು ಅವಗೆ ಮಾತ್ರ ಬಳಕೆಗೆ ಅವಕಾಶ ಇತ್ತು. ಕೋವಿಡ್ ಲಸಿಕೀಕರಣದ ವೇಳೆ ಇ-ರುಪಿ ಹೆಚ್ಚಾಗಿ ಬಳಕೆ ಮಾಡಲಾಗಿದೆ.
ಕೆಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಬಳಕೆಯನ್ನು ಸಕ್ರಿಯವೆಂದು ಪರಿಗಣಿಲಾಗಿದೆ. ವಹಿವಾಟಿನ ಮಿತಿಯನ್ನು ಒಂದು ಲಕ್ಷಕ್ಕೆ ಹೆಚ್ಚಿಸಿರುವುದರಿಂದ ಸರ್ಕಾರ ತನ್ನ ಯೋಜನೆಯ ಫಲಾನುಭವಿಗಳಿಗೆ ಇ-ರುಪಿ ಮೂಲಕವೇ ಪಾವತಿ ಮಾಡಲು ಸಹಾಯವಾಗಲಿದೆ. ಇ-ರುಪಿ ಬಳಕೆಗೆ ನಿರ್ದಿಷ್ಟವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸುವುದಾಗಿ ಆರ್‍ಬಿಐ ತಿಳಿಸಿದೆ.
