ಮತ್ತೆ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಸಾಧ್ಯತೆ

Social Share

ನವದೆಹಲಿ,ಡಿ.5- ಮತ್ತೆ ರೆಪೋ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಸಾಲದ ಬಡ್ಡಿ ದರ ಹೆಚ್ಚಳವಾಗುವ ಆತಂಕ ಎದುರಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಸಭೆ ಇಂದಿನಿಂದ ಆರಂಭಗೊಂಡಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಬುಧವಾರ ಪ್ರಕಟಗೊಳಿಸಲಾಗುವುದು.

ಹೆಚ್ಚುತ್ತಿರುವ ಹಣದುಬ್ಬರವನ್ನು ತಗ್ಗಿಸಲು ಇನ್ನಿಲ್ಲದ ಹರಸಾಹಸ ನಡೆಸುತ್ತಿರುವ ಆರ್‍ಬಿಐ ಈ ಬಾರಿಯೂ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಸೆಪ್ಟೆಂಬರ್‍ನಲ್ಲಿ ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ಆರ್‍ಬಿಐ 50 ಮೂಲಾಂಶದಷ್ಟು ಬಡ್ಡಿ ದರವನ್ನು ಹೆಚ್ಚಿಸಿತ್ತು.

ಕಳೆದ ಆರು ತಿಂಗಳ ಅವಯಲ್ಲಿ ಒಟ್ಟು 190 ಮೂಲಾಂಶದಷ್ಟು ರೆಪೋ ದರ ಹೆಚ್ಚಳ ಮಾಡಲಾಗಿದೆ. ಸದ್ಯ ರೆಪೆÇ ದರ ಪ್ರಮಾಣ ಶೇಕಡಾ 5.9ರಷ್ಟಿದೆ. ಇಷ್ಟಾಗಿಯೂ ಹಣದುಬ್ಬರ ಪ್ರಮಾಣ ಶೇಕಡಾ 6ಕ್ಕಿಂತ ಕೆಳಗೆ ತರುವುದು ಆರ್‍ಬಿಐಗೆ ಸಾಧ್ಯವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.

ರೆಪೋ ದರಕ್ಕೆ ಅನುಗುಣವಾಗಿ ಬ್ಯಾಂಕ್‍ಗಳು ಸಾಲ ಮತ್ತು ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಯಾಕೆಂದರೆ, ದೇಶದ ಬ್ಯಾಂಕ್‍ಗಳಿಗೆ ಆರ್‍ಬಿಐ ನೀಡುವ ಹಣಕಾಸು ನಿಗೆ ಅಥವಾ ಸಾಲಕ್ಕೆ ವಿಸುವ ಬಡ್ಡಿ ದರವೇ ರೆಪೆÇ ದರ.

ಹೀಗಾಗಿ ಬುಧವಾರ ರೆಪೋ ದರ ಹೆಚ್ಚಳ ಪ್ರಕಟಿಸಿದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ಹೆಚ್ಚಾಗಲಿವೆ. ಇದು ಬ್ಯಾಂಕ್ ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

#RBI, #moderate, #InterestRate, #Hike

Articles You Might Like

Share This Article