ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ಕೋರಿದ RCB ಆಟಗಾರರು

Social Share

ಬೆಂಗಳೂರು, ನ. 1- ಕರುನಾಡಿನೆಲ್ಲೆಡೆ ಇಂದು 67 ನೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕನ್ನಡದಲ್ಲೇ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ.

ಆರ್ಸಿಬಿ ತಂಡದ ನಾಯಕ ರಾಗಿರುವ ದಕ್ಷಿಣ ಆಫ್ರಿಕಾದ ಪ್ಲಾಫ್ ಡು ಪ್ಲೆಸಿಸ್ , ಶ್ರೀಲಂಕಾದ ವಾನಿಂದು ಹಸರಂಗ ಅವರು ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ಕೋರಿರುವುದು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ.

ಅದೇ ರೀತಿ ತಂಡದ ಪ್ರಮುಖ ಆಟಗಾರರಾದ ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್ ಮತ್ತಿತರರು ಇದೇ ನಾಡು ಇದೇ ಭಾಷೆ, ಎಂದೆಂದಿಗೂ ನಮ್ಮದಾಗಿರಲಿ ಎಲ್ಲೇ ಇರಲಿ ಹೇಗೆ ಇರಲಿ, ಕನ್ನಡವೇ ನಮ್ಮ ಉಸಿರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಎಂದು ಆರ್ಸಿಬಿ ಫ್ರಾಂಚೈಸಿಗಳು ಕೂಡ ಶುಭ ಕೋರಿದ್ದಾರೆ,.

Articles You Might Like

Share This Article