RCB v/s RR : ರಾಜಸ್ತಾನ್ ರಾಯಲ್ಸ್ ಎದುರು ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್

Spread the love

RR--1

ಬೆಂಗಳೂರು. ಏ.16 : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಎದುರು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ರನ್ ಗಳಿಂದ ಸೋಲು ಕಂಡಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ರಾಜಸ್ತಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. 218 ರನ್ ಗೆಲುವಿನ ಗುರಿ ಪಡೆದ ರಾಯಲ್ ಚಾಲೆಂಜರ್ಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದ ಆರ್.ಸಿ.ಬಿ. 19 ರನ್ ಅಂತರದಿಂದ ಸೋಲನ್ನನುಭವಿಸಿತು.   ಆರ್ಸಿಬಿ ಪರ ಬ್ರೆಂಡನ್ ಮೆಕಲಮ್ 4, ಕ್ವಿಂಟಾನ್ ಡಿಕಾಕ್ 26, ವಿರಾಟ್ ಕೊಹ್ಲಿ 57, ಎ.ಬಿ. ಡಿವಿಲಿಯರ್ಸ್ 20, ಮನ್ ದೀಪ್ ಸಿಂಗ್ ಅಜೇಯ 47, ಪವನ್ ನೇಗಿ 3, ವಾಷಿಂಗ್ಟನ್ ಸುಂದರ್ 35, ಕ್ರಿಸ್ ವೊಕ್ಸ್ ಅಜೇಯ 0 ರನ್ ಗಳಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ತಾನ ರಾಯಲ್ಸ್ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 45 ಎಸೆತಗಳಲ್ಲಿ 2 ಬೌಂಡರಿ, 10 ಸಿಕ್ಸರ್ ಒಳಗೊಂಡ ಅಜೇಯ 92 ರನ್ ಗಳಿಸಿದರು. ಅಜಿಂಕ್ಯಾ ರೆಹಾನೆ 36, ಡಿ’ಆರ್ಸಿ ಶಾರ್ಟ್ 11, ಸಂಜು ಸ್ಯಾಮ್ಸನ್ ಅಜೇಯ 92, ಬೆನ್ ಸ್ಟೋಕ್ಸ್ 27, ಜೋಸ್ ಬಟ್ಲರ್ 23, ರಾಹುಲ್ ತ್ರಿಪಾಠಿ ಅಜೇಯ 14 ರನ್ ಗಳಿಸಿದ್ದರು. ಇನ್ನು ಬೌಲಿಂಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರವಾಗಿ ಕ್ರಿಸ್ ವೋಕ್ಸ್ 2, ಯಜುವೇಂದ್ರ ಚಾಹಲ್ 2 ವಿಕೆಟ್ ಪಡೆದರೆ, ರಾಜಸ್ತಾನ ರಾಯಲ್ಸ್ ಪರವಾಗಿ ಡಿ’ಆರ್ಸಿ ಶಾರ್ಟ್ 1, ಕೆ. ಗೌತಮ್ 1, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್
ರಾಜಸ್ತಾನ್ ರಾಯಲ್ಸ್ : 217/4
ರಾಯಲ್ ಚಾಲೆಂಜರ್ಸ್ ಬೆಂಗಳೂರು : 198/6 (20 ov, target 218)

Facebook Comments

Sri Raghav

Admin