ಎನ್‍ಸಿಬಿ ಲಾಕಪ್‍ನಲ್ಲಿ ಮೊದಲ ರಾತ್ರಿ ಕಳೆದ ರಿಯಾ, ಬೈಕುಲಾ ಜೈಲಿಗೆ ಶಿಫ್ಟ್

ಮುಂಬೈ, ಸೆ.9-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಮಾದಕ ವಸ್ತು ನಿಯಂತ್ರಣ ಮಂಡಳಿಯಿಂದ ಬಂತರಾದ ಚಿತ್ರನಟಿ ರಿಯಾ ಚಕ್ರವರ್ತಿ ಅವರು ನಿನ್ನೆ ರಾತ್ರಿಯನ್ನು ಎನ್‍ಸಿಬಿ ಲಾಕಪ್‍ನಲ್ಲಿ ಕಳೆದರು.  ಇಂದು ಬೆಳಗ್ಗೆ 10 ಗಂಟೆಗೆ ಅವರನ್ನು ಮುಂಬೈನ ಬೈಕುಲಾ ಜೈಲಿಗೆ ಸ್ಥಳಾಂತರಿಸಲಾಗಿದೆ.

ಡ್ರಗ್ಸ್ ಖರೀದಿಸುತ್ತಿದ್ದ ಮತ್ತು ಅದನ್ನು ನಟ ಸುಶಾಂತ್ ಅವರಿಗೆ ಪೂರೈಸುತ್ತಿದ್ದ ಆರೋಪದ ಮೇಲೆ ಮೂರು ದಿನಗಳ ತೀವ್ರ ವಿಚಾರಣೆ ನಂತರ ಎನ್‍ಸಿಬಿ ಅಧಿಕಾರಿಗಳು ನಿನ್ನೆ ಸಂಜೆ ರಿಯಾ ಅವರನ್ನು ಬಂಸಿದರು. ಮುಂಬೈನ ನ್ಯಾಯಾಲಯವೊಂದು ಸೆಪ್ಟೆಂಬರ್ 22ರವರೆಗೆ 14 ದಿನಗಳ ಕಾಲ ಸುಶಾಂತ್ ಗೆಳತಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿತು. ನಂತರ ರಿಯಾ ಅವರನ್ನು ನಿನ್ನೆ ರಾತ್ರಿ ಎನ್‍ಸಿಬಿ ಲಾಕಪ್‍ನಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಬೈಕುಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

ಬಾಲಿವುಡ್ ನಟಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಆಕೆ ಸುಶಾಂತ್‍ಗಾಗಿ ಮಾರಿಜುವಾನ ಮಾದಕ ವಸ್ತು ಖರೀದಿಸುತ್ತಿದ್ದರು ಎಂಬ ಸಂಗತಿ ದೃಢಪಟ್ಟಿತ್ತು. ಈಕೆ ಡ್ರಗ್ಸ್ ಜಾಲದ ಸಕ್ರಿಯ ಸದಸ್ಯೆ ಎಂದು ಎನ್‍ಸಿಬಿ ಅಕಾರಿಗಳು ಆರೋಪಿಸಿದ್ದಾರೆ.

ಮೂರು ದಿನಗಳ ವಿಚಾರಣೆ ವೇಳೆ ರಿಯಾ ಚಕ್ರವರ್ತಿ ಕೆಲವು ಮಹತ್ವದ ಸಂಗತಿಗಳನ್ನು ಬಹಿರಂಗಗೊಳಿಸಿದ್ದು, ಈ ಪ್ರಕರಣದ ಸಂಬಂದ ಚಿತ್ರತಾರೆಯರೂ ಸೇರಿದಂತೆ ಮತ್ತಷ್ಟು ಮಂದಿ ಬಂತರಾಗುವ ಸಾಧ್ಯತೆ ಇದೆ.

ಸುಶಾಂತ್ ಸಾವು ಪ್ರಕರಣ ಬಾಲಿವುಡ್‍ನ ಕೆಲವು ನಟ-ನಟಿಯರ ಡ್ರಗ್ಸ್ ದುಶ್ಚಟ ಮತ್ತು ಮಾದಕವಸ್ತು ಪೂರೈಕೆಯ ವ್ಯವಸ್ಥಿತ ದಂಧೆಯನ್ನು ಬಹಿರಂಗಗೊಳಿಸಿದೆ. ಈ ಸಾವಿನ ಹಿಂದೆ ಮಾದಕ ವಸ್ತುವಿನ ವ್ಯವಸ್ಥಿತ ಜಾಲದ ಬೇರುಗಳು ಒಂದೊಂದಾಗಿ ಹೊರಬರುತ್ತಿವೆ. ಬಾಲಿವುಡ್ ನಟನ ಆತ್ಮಹತ್ಯೆಗೆ ಪ್ರಚೋದನೆ ನೀಡಿದರೆನ್ನಲಾದ ಆರೋಪಕ್ಕೆ ಗುರಿಯಾಗಿರುವ ಚಿತ್ರ ನಟಿ ಮತ್ತು ಸುಶಾಂತ್ ಗೆಳತಿ ರಿಯಾ ಈಗ ಡ್ರಗ್ಸ್ ಪೂರೈಕೆ ಜಾಲದಲ್ಲಿ ಸಿಲುಕಿದ್ದಾರೆ.

ಸುಶಾಂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಮಾದಕ ತಾನು ಮತ್ತು ತನ್ನ ಸಹೋದರ ಸೌವಿಕ್ ಚಕ್ರವರ್ತಿ, ಸುಶಾಂತ್ ಅವರಿಗೆ ಡ್ರಗ್ಸ್ ನೀಡುತ್ತಿದ್ದ ಸಂಗತಿಯನ್ನು ರಿಯಾ ಮೊನ್ನೆ ಒಪ್ಪಿಕೊಂಡ ನಂತರ ಬಾಲವುಡ್ ನಟನ ಸಾವು ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ರಿಯಾ ಸೂಚನೆ ಮೇರೆಗೆ ಆಕೆಯ ಸಹೋದರ ಸೌವಿಕ್ ಚಕ್ರವರ್ತಿ, ಸುಶಾಂತ್ ಅಪಾರ್ಟ್‍ಮೆಂಟ್‍ನ ಅಡುಗೆ ಸಹಾಯಕ ಸಾಮ್ಯುಯಲ್ ಮಿರಾಂಡಾ ಮೂಲಕ ಬಾಲಿವುಡ್ ನಟನಿಗೆ ಮಾದಕ ವಸ್ತು (ಮಾರಿಜುವಾನ) ನೀಡುತ್ತಿದ್ದ ಎಂಬ ಸಂಗತಿ ಬಯಲಾಗುತ್ತಿದ್ದಂತೆ ತನಿಖೆ ತೀವ್ರಗೊಳಿಸಿದ ಎನ್‍ಸಿಬಿ ಅಕಾರಿಗಳು ಮುಂಬೈನಲ್ಲಿರುವ ರಿಯಾ ಮನೆಗೆ ಮೊನ್ನೆ ತೆರಳಿ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಬುಲಾವ್ ನೀಡಿದ್ದರು..

ಮೊನ್ನೆ ಸೌವಿಕ್ ಮತ್ತು ಸಾಮ್ಯಯಲ್ ಅವರನ್ನು ಎನ್‍ಸಿಬಿ ತೀವ್ರ ತನಿಖೆಗೆ ಒಳಪಡಿಸಿತ್ತು. ಈ ಮಧ್ಯೆ, ಸುಶಾಂತ್ ಸಿಂಗ್ ಅವರ ಕಚೇರಿ ಮತ್ತು ಮನೆಯಲ್ಲಿ ಸಹಾಯಕನಾಗಿದ್ದ ದೀಪೇಶ್ ಸಾವಂತ್ ಎಂಬಾತನನ್ನು ಸಹ ಎನ್‍ಸಿಬಿ ಅಕಾರಿಗಳು ಬಂಸಿ ವಿಚಾರಣೆ ಮುಂದುವರಿಸಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಸೇವಿಸುತ್ತಿದ್ದುದನ್ನು ನಾನು ಕೆಲವು ಬಾರಿ ನೋಡಿದ್ದೇನೆ ಎಂದು ಸಾವಂತ್ ಎನ್‍ಸಿಬಿ ಮಾಹಿತಿ ನೀಡಿದ್ದಾನೆ. ಈತನ ರಿಯಾ ಮತ್ತಿತರರನ್ನು ಎನ್‍ಸಿಬಿ ತನಿಖೆ ನಡೆಸುತ್ತಿದ್ದರೆ, ಅತ್ತ ಸಿಬಿಐ ಅಕಾರಿಗಳು ಈ ಪ್ರಕರಣದ ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Sri Raghav

Admin