ಮೈಸೂರಿನಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಕೊಲೆ

Social Share

ಮೈಸೂರು,ಆ.9- ಹಾಡಹಗಲೇ ಮನೆಯಲ್ಲಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಕಬ್ಬಿಣದ ರಾಡ್‍ನಿಂದ ಹೊಡೆದು ಕೃತ್ಯವೆಸಗಲಾಗಿದೆ. ಸಂಪತ್ ಕುಮಾರ್ (63) ಮೃತ ದುರ್ದೈವಿ.

ಮನೆಗೆ ನುಗ್ಗಿ ಕೃತ್ಯವೆಸಗಿದ ಹಂತಕ ಪರಾರಿಯಾಗಿದ್ದಾನೆ. ಮೈಸೂರಿನ ಬೃಂದಾವನ ಬಡಾವಣೆಯ 1ನೆ ಹಂತದ ನಿವಾಸದಲ್ಲಿ ಘಟನೆ ನಡೆದಿದೆ. ಏಕಾಏಕಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಹತ್ಯೆ ಮಾಡಿದನೆಂದು ಮೃತನ ಪುತ್ರ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಿಯಲ್ ಎಸ್ಟೇಟ್ ಹಾಗೂ ಅಗರ್‍ಬತ್ತಿ ವಹಿವಾಟು ನಡೆಸುತ್ತಿದ್ದ ಸಂಪತ್ ಕುಮಾರ್ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಪತ್ನಿ ಶಾಲೆಗೆ ತೆರಳಿದ್ದ ಸಂದರ್ಭದಲ್ಲಿ ಹತ್ಯೆ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Articles You Might Like

Share This Article